Short News

ಲಾರಿ -ಆಟೋರಿಕ್ಷಾ ಡಿಕ್ಕಿ, ಐವರು ಶಿವ ಭಕ್ತರು ಮೃತ

ಲಾರಿ -ಆಟೋರಿಕ್ಷಾ ಡಿಕ್ಕಿ, ಐವರು ಶಿವ ಭಕ್ತರು ಮೃತ

ಮಹಾ ಶಿವರಾತ್ರಿ ಪ್ರಯುಕ್ತ ಶ್ರೀಕಾಳಹಸ್ತಿ ದೇಗುಲಕ್ಕೆ ಭೇಟಿ ನೀಡಿ, ಮನೆಗೆ ಹಿಂತಿರುಗುತ್ತಿದ್ದ ಶಿವಭಕ್ತರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಚಿತ್ತೂರು ಜಿಲ್ಲೆಯ ಬುಚ್ಚಿನಾಯ್ಡು ಕಂಡ್ರಿಗ ತಾಲೂಕಿನಲ್ಲಿ ಈ ದುರ್ಘಟನೆ ನಡೆದಿದೆ. ಲಾರಿ ಹಾಗೂ ಆಟೋರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ್ದು, ಐವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದು, ತಿರುಪತಿಯ ರುಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಚಿತ್ತೂರಿನ ಚಾಲಕ ವೆಂಕಟರಮಣ, ರಾಮರಾವ್ ಮತ್ತು ಕುಮಾರಿ ಎಂದು ಗುರುತಿಸಲಾಗಿದೆ.

ವೇಗವಾಗ ಬಂದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ, ಪವಾಡದಂತೆ ಪಾರಾದ ಮೂವರು

ವೇಗವಾಗ ಬಂದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ, ಪವಾಡದಂತೆ ಪಾರಾದ ಮೂವರು

ಗುಜರಾತ್ ನಲ್ಲಿ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದ ಕುಟುಂಬವೊಂದು ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ. ಮಹಿಳೆ ಹಾಗೂ ಮಗುವನ್ನು ಬೈಕ್ ನಲ್ಲಿ ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆ ಕ್ರಾಸ್ ಮಾಡುವ ವೇಳೆ ಅಡ್ಡಾದಿಡ್ಡಿಯಾಗಿ ಚಲಿಸುತ್ತ ವೇಗವಾಗ ಬಂದ ಟ್ರಕ್ ಡಿಕ್ಕಿ ಹೊಡೆದಿದ್ದು, ಮೂವರು ಕೆಳಕ್ಕೆ ಬಿದ್ದರೂ ಟ್ರಕ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಗುಜರಾತಿನ ಬನಸ್ಕಾಂತದಲ್ಲಿ ಫೆಬ್ರವರಿ 14 ರಂದು ಬೆಳಿಗ್ಗೆ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಚಳಿಗಾಲದ ಒಲಿಂಪಿಕ್ಸ್‌ : ಸ್ಪರ್ಧೆಯ ವೇಳೆ ನೃತ್ಯಗಾರ್ತಿಯ ಮೇಲುಡುಪು ಸಡಿಲಗೊಂಡು ಕಳಚಿ ಬಿತ್ತು

ಚಳಿಗಾಲದ ಒಲಿಂಪಿಕ್ಸ್‌ : ಸ್ಪರ್ಧೆಯ ವೇಳೆ ನೃತ್ಯಗಾರ್ತಿಯ ಮೇಲುಡುಪು ಸಡಿಲಗೊಂಡು ಕಳಚಿ ಬಿತ್ತು

ಚಳಿಗಾಲದ ಒಲಿಂಪಿಕ್ಸ್‌ ಐಸ್‌ ಫಿಗರ್ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಫ್ರಾನ್ಸ್‌ನ ಗ್ಯಾಬ್ರಿಯೆಲಾ ಪಾಪ್‌ಡಕಿನ್ಸ್‌ ಅವರ ಮೇಲುಡುಪಿನ ಒಂದು ಭಾಗ ಕಳಚಿತು. ಇದರಿಂದಾಗಿ ಗ್ಯಾಬ್ರಿಯೆಲಾ ಮತ್ತು ಅವರ ಜೊತೆಗಾರ ಗಲೆಮ್ ಸಿಜೋರ್ ಜೋಡಿಯು ಚಿನ್ನದ ಪದಕ ಗೆಲ್ಲುವ ಆಸೆ ಕೈಗೂಡಲಿಲ್ಲ. ಆರಂಭದಿಂದಲೂ ಉತ್ತಮ ಫ್ರದರ್ಶನ ನೀಡಿದ್ದ ಜೋಡಿ ಕೊನೆಯ ಹಂತದಲ್ಲಿ ಗ್ಯಾಬ್ರಿಯೆಲಾ ಎದೆಯ ಎಡಭಾಗದ ಪೋಷಾಕು ಕಳಚಿತು. ಇದು ಟಿವಿಯ ನೇರಪ್ರಸಾರದಲ್ಲಿಯೂ ಕಂಡುಬಂತು. ಇದರ ಅರಿವಿದ್ದರೂ ಗ್ಯಾಬ್ರಿಯೆಲಾ ಜೋಡಿಯು ಶಾಂತಚಿತ್ತದಿಂದಲೇ ಸ್ಪರ್ಧೆಯನ್ನೂ ಪೂರ್ತಿಗೊಳಿಸಿದರು.
ರೊಟೊಮ್ಯಾಕ್ ಪೆನ್ಸ್ 3,695 ಕೋಟಿ ವಂಚನೆ ಎಷ್ಟು ವ್ಯವಸ್ಥಿತವಾಗಿದೆಯೋ!

ರೊಟೊಮ್ಯಾಕ್ ಪೆನ್ಸ್ 3,695 ಕೋಟಿ ವಂಚನೆ ಎಷ್ಟು ವ್ಯವಸ್ಥಿತವಾಗಿದೆಯೋ!

ರೊಟೊಮ್ಯಾಕ್ ಪೆನ್ಸ್ ನಿಂದ ಆಗಿರುವುದು 3,695 ಕೋಟಿ ವಂಚನೆ ಎಂದು ಸಿಬಿಐ ಲೆಕ್ಕಾಚಾರ ಹಾಕಿದೆ. ಏನಿದು ವಂಚನೆ, ಹೇಗೆ ಮಾಡಿದ್ದಾರೆ ಇಷ್ಟೊಂದು ದೊಡ್ಡ ಪ್ರಮಾಣದ ಮೋಸ ಎಂಬುದು ಕೂಡ ಆಸಕ್ತಿಕರವಾಗಿದೆ.

ರಫ್ತು ಮಾಡುವ ಸಲುವಾಗಿ ಸರಕು ಖರೀದಿಗೆ ಎಂದು ಬ್ಯಾಂಕ್ ಗಳಿಂದ ಸಾಲ ಪಡೆದಿರುವ ರೊಟೊಮ್ಯಾಕ್, ಆ ಹಣವನ್ನು ವಿದೇಶಿ ಕಂಪೆನಿಗಳಿಗೆ ವರ್ಗಾಯಿಸಿ, ಪುನಃ ಆ ಹಣವನ್ನೆ ಕಾನ್ಪುರದ ಕಂಪೆನಿಯೊಂದಕ್ಕೆ ವರ್ಗಾವಣೆ ಮಾಡಿರುವುದು ಗಮನಕ್ಕೆ ಬಂದಿದೆ.

ಅಸಲಿಗೆ ರೊಟೊಮ್ಯಾಕ್ ಕಂಪೆನಿಯಿಂದ ರಫ್ತು ಮಾಡೇ ಇಲ್ಲ. ಅಂಥ ಯಾವ ಆರ್ಡರ್ ಕೂಡ ಬಂದಿಲ್ಲ. ಬ್ಯಾಂಕ್ ನಿಂದ ಸಾಲ ಪಡೆದು ಅದನ್ನು ಬೇರೆ ವ್ಯವಹಾರಗಳಿಗೆ ಬಳಸಿರುವುದು ಕಂಡುಬಂದಿದೆ.