Short News

ಜನವರಿ 18ರಿಂದ ಫೆ.6ರ ವರೆಗೆ ರಾಜ್ಯ ಬಜೆಟ್ ಪೂರ್ವಭಾವಿ ಸಭೆ

ಜನವರಿ 18ರಿಂದ ಫೆ.6ರ ವರೆಗೆ ರಾಜ್ಯ ಬಜೆಟ್ ಪೂರ್ವಭಾವಿ ಸಭೆ

ಸಿದ್ದರಾಮಯ್ಯ ಅವರ ಕೊನೆಯ ಬಜೆಟ್ ಮಂಡನೆಗೆ ದಿನ ನಿಗದಿಯಾಗಿದೆ. ಇದೇ ಫೆಬ್ರವರಿಯಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರು ತಮ್ಮ 5 ವರ್ಷಗಳ ಅವಧಿಯ ಕೊನೆಯ ಬಜೆಟ್ ಮಂಡಿಸಲಿದ್ದಾರೆ.

ಇದರಿಂದ ಸಿದ್ದರಾಮಯ್ಯ ಅವರು ಇದೇ ಜನವರಿ 18ರಿಂದ ಫೆಬ್ರವರಿ 6ರ ವರೆಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಹಾಗೂ ಮುಖ್ಯಸ್ಥರ ಜೊತೆ ಪೂರ್ವಭಾವಿ ಸಭೆ ನಡೆಸಲಿದ್ದು, ಸಭೆಯಲ್ಲಿ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಿದ್ದಾರೆ.

ಮತ್ತೊಂದು ವಜ್ರ ರಫ್ತು ಕಂಪೆನಿಯಿಂದ ಬ್ಯಾಂಕ್ ಗೆ 389 ಕೋಟಿ ಪಂಗನಾಮ, ಕೇಸ್ ಜಡಿದ ಸಿಬಿಐ

ಮತ್ತೊಂದು ವಜ್ರ ರಫ್ತು ಕಂಪೆನಿಯಿಂದ ಬ್ಯಾಂಕ್ ಗೆ 389 ಕೋಟಿ ಪಂಗನಾಮ, ಕೇಸ್ ಜಡಿದ ಸಿಬಿಐ

ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಬ್ಯಾಂಕ್ ವಂಚನೆಗಳ ನಂತರ ಇದೀಗ ಅದೇ ಮಾದರಿಯ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ 389.85ಕೋಟಿ ರೂಪಾಯಿ ವಂಚಿಸಿದ ಮತ್ತೋರ್ವ ವಜ್ರದ ರಫ್ತುದಾರನ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ದ್ವಾರ್ಕಾ ದಾಸ್ ಸೇಠ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಎಂಬ ಆಭರಣ ವ್ಯಾಪಾರಿ ಸಂಸ್ಥೆ ಬ್ಯಾಂಕಿಗೆ ವಂಚನೆ ಮಾಡಿದೆ ಎಂದು ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ದೂರು ನೀಡಿದ 6ತಿಂಗಳ ಬಳಿಕ ಸಿಬಿಐ ಈಗ ಕಂಪನಿ ಮತ್ತು ನಿರ್ದೇಶಕರಾದ ಸಭ್ಯಾ ಸೇಠ್,ರೀತಾ ಸೇಠ್,ಕೃಷ್ಣ ಕುಮಾರ್ ಸಿಂಗ್, ರವಿ ಸಿಂಗ್ ವಿರುದ್ಧ ದೂರು ದಾಖಲಿಸಿದೆ.
ನೀರವ್ ಬಗ್ಗೆ ಮೌನ ಮುರಿದ ಮೋದಿ

ನೀರವ್ ಬಗ್ಗೆ ಮೌನ ಮುರಿದ ಮೋದಿ


ಹಣಕಾಸಿನ ವ್ಯವಹಾರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಹಣವನ್ನು ಲೂಟಿ ಮಾಡುವವರನ್ನು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದ್ದಾರೆ. ಮಾತ್ರವಲ್ಲ ಹಣಕಾಸು ಸಂಸ್ಥೆಗಳು ಮತ್ತು ಅವುಗಳ ಮೇಲೆ ನಿಗಾ ಇಡುವ ಸಂಸ್ಥೆಗಳು ತಮ್ಮ ಕೆಲಸವನ್ನು ಬದ್ಧತೆಯಿಂದ ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಈ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಉದ್ಯಮಿ ನೀರವ್ ಮೋದಿ ಎಸಗಿರುವ ವಂಚನೆ ಬಗ್ಗೆ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದಾರೆ.

ಅಮಿತ್ ಶಾ ವಿರುದ್ಧ ಪೋಸ್ಟ್: ಕಾಲೇಜು ವಿದ್ಯಾರ್ಥಿ ಅಮಾನತು

ಅಮಿತ್ ಶಾ ವಿರುದ್ಧ ಪೋಸ್ಟ್: ಕಾಲೇಜು ವಿದ್ಯಾರ್ಥಿ ಅಮಾನತು

ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಜಾಸ್ಟಿನ್ ಎಂಬ ವಿದ್ಯಾರ್ಥಿ 'ಅಮಿತ್ ಶಾ ಬಂಡಲ್ ರಾಜಾ' ಎಂದು ಇನ್ಸ್ಟಾಗ್ರಾಂ ನಲ್ಲಿ ಪ್ರಕಟಿಸಿದ್ದಕ್ಕೆ ಸಿಟ್ಟಾದ ಕಾಲೇಜು ಆಡಳಿತ ಮಂಡಳಿ ಆತನನ್ನು ಒಂದು ವಾರಗಳ ಕಾಲ ತರಗತಿಯಿಂದ ಅಮಾನತು ಮಾಡಿ ಮೌಖಿಕ ಆದೇಶ ನೀಡಿದೆ. ಮೊನ್ನೆಯಷ್ಟೆ ಕರಾವಳಿ ಜಿಲ್ಲೆ ಪ್ರವಾಸ ಮಾಡಿ ಪುತ್ತೂರಿನ ಇದೇ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಅಮಿತ್ ಶಾ ಸಂವಾದ ನಡೆಸಿದ್ದರು, ಈಗ ಅಮಾನತ್ತಾಗಿರುವ ಜಾಸ್ಟಿನ್ ಕೂಡಾ ಅಂದು ಸಂವಾದದಲ್ಲಿ ಭಾಗವಹಿಸಿದ್ದರು