Short News

ತರಬೇತುದಾರನ ಯಡವಟ್ಟಿಗೆ ವಿದ್ಯಾರ್ಥಿನಿ ಬಲಿ: ವೈರಲ್ ವಿಡಿಯೋ

ತರಬೇತುದಾರನ ಯಡವಟ್ಟಿಗೆ ವಿದ್ಯಾರ್ಥಿನಿ ಬಲಿ: ವೈರಲ್ ವಿಡಿಯೋ

ವಿಪತ್ತು ನಿರ್ವಹಣೆಗೆ ನೀಡಲಾಗುತ್ತಿದ್ದ ತರಬೇತಿ ಯುವತಿಯೊಬ್ಬಳ ಜೀವ ಬಲಿತೆಗೆದುಕೊಂಡ ದಾರುಣ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಕೊವೈ ಕಲೈಮಗಳ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಸಂಜೆ ವಿಪತ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ನಮ್ಮ ಜೀವ ಉಳಿಸಿಕೊಳ್ಳುವುದು ಹೇಗೆ ಎಂಬ ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ಎರಡನೆ ವರ್ಷದ ಪದವಿ ವಿದ್ಯಾರ್ಥಿನಿ ಲೋಕೇಶ್ವರಿ 2ನೇ ಮಹಡಿಯಿಂದ ಹಾರುವ ಸಾಹಸಕ್ಕೆ ಮುಂದಾಗಿದ್ದರು. ಆಗ ತರಬೇತುದಾರ ಏಕಾಏಕಿ ಅವರನ್ನು ಕೆಳಕ್ಕೆ ತಳ್ಳಿದ್ದಾನೆ. ಬೀಳುವ ವೇಳೆ ಕಟ್ಟಡದ ಮೊದಲ ಮಹಡಿಯ ಹೊರಭಾಗದ ಕಟ್ಟೆಗೆ ಆಕೆಯ ತಲೆಬಡಿದಿದ್ದು, ಆಕೆ ಸಾವನ್ನಪ್ಪಿದ್ದಾಳೆ.
ಮೂರು ದಿನ ಶೀರೂರು ಮಠ ಪೊಲೀಸರ ವಶಕ್ಕೆ, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ

ಮೂರು ದಿನ ಶೀರೂರು ಮಠ ಪೊಲೀಸರ ವಶಕ್ಕೆ, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ

ಶೀರೂರು ಮಠವನ್ನು ಇಂದಿನಿಂದ ಮೂರು ದಿನಗಳ ಕಾಲ ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಮೂರು ದಿನಗಳ ಕಾಲ ಮಠಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಭಂಧಿಸಲಾಗಿದೆ. ಶೀರೂರು ಶ್ರೀಗಳ ಸಾವು ಅಸಹಜ ಎಂಬ ಅನುಮಾನ ವ್ಯಕ್ತಪಡಿಸಿ ಅವರ ಪೂರ್ವಾಶ್ರಮದ ಸಹೋದರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹೀಗಾಗಿ ಸಾಕ್ಷ್ಯ ಸಂಗ್ರಹಕ್ಕೆಂದು ಪೊಲೀಸರು ಮೂರು ದಿನಗಳ ಕಾಲ ಶೀರೂರು ಮಠವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಉಡುಪಿ ಜಿಲ್ಲಾ ಎಸ್‌ಪಿ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದು, ಮಠದ ತನಿಖೆಯ ಜೊತೆಗೆ ಶೀರೂರು ಶ್ರೀಗಳ ಆಪ್ತೇಷ್ಟರ ವಿಚಾರಣೆ ಸಹ ನಾಳೆಯಿಂದ ನಡೆಯಲಿದೆ.
ಅವಿಶ್ವಾಸ ನಿರ್ಣಯ ಮಂಡನೆ: ಬಿಜೆಪಿಗೆ ಶಿವಸೇನಾ ಬೆಂಬಲ

ಅವಿಶ್ವಾಸ ನಿರ್ಣಯ ಮಂಡನೆ: ಬಿಜೆಪಿಗೆ ಶಿವಸೇನಾ ಬೆಂಬಲ

ಲೋಕಸಭೆಯಲ್ಲಿ ಶುಕ್ರವಾರ ನಡೆಯಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಶಿವಸೇನಾ ಪ್ರಕಟಿಸಿದೆ. ಅವಿಶ್ವಾಸ ನಿರ್ಣಯ ಮಂಡನೆಗೆ ವಿರುದ್ಧವಾಗಿ ಮತ ಚಲಾಯಿಸುವಂತೆ ಶಿವಸೇನಾ ತನ್ನ ಎಲ್ಲ ಸಂಸದರಿಗೆ ವಿಪ್ ಜಾರಿ ಮಾಡಿದೆ. ಇದಕ್ಕೂ ಮುನ್ನ ಬಿಜೆಪಿಗೆ ಬೆಂಬಲ ನೀಡುವಂತೆ ಕೋರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ ಮಾತನಾಡಿದ್ದರು ಎನ್ನಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ4 ಸ್ಮಾರ್ಟ್‌ಫೋನ್‌ ಈಗ 9,490 ರೂ.ಗೆ ಲಭ್ಯ..!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ4 ಸ್ಮಾರ್ಟ್‌ಫೋನ್‌ ಈಗ 9,490 ರೂ.ಗೆ ಲಭ್ಯ..!

ಬಿಡುಗಡೆಯಾಗಿ ಕೇವಲ ಒಂದು ತಿಂಗಳೂ ಕೂಡ ಕಳೆದಿಲ್ಲ. ಆಗಲೇ ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ4 ಫೋನಿನ ಬೆಲೆಯಲ್ಲಿ ಬಾರೀ ಇಳಿಕೆ ಕಂಡುಬಂದಿದೆ. ಇದು ನಿಜಕ್ಕೂ ಸ್ಯಾಮ್ ಸಂಗ್ ಫೋನ್ ಇಷ್ಟ ಪಡುವ ಗ್ರಾಹಕರ ಪಾಲಿಗೆ ಸಿಹಿಸುದ್ದಿಯೇ ಸರಿ. ಸ್ಯಾಮ್ ಸಂಗ್ ಕಂಪೆನಿ ಕಳೆದ ತಿಂಗಳು ಎರಡು ಮಾಡೆಲ್ ನ ಫೋನ್ ಗಳನ್ನು ಬಿಡುಗಡೆಗೊಳಿಸಿತ್ತು. 2ಜಿಬಿ ಮೆಮೊರಿ/16ಜಿಬಿ ಸ್ಟೋರೇಜ್ ಮತ್ತು 3ಜಿಬಿ ಮೆಮೊರಿ/ 32ಜಿಬಿ ಸ್ಟೋರೇಜ್ ಕ್ರಮವಾಗಿ ಇದರ ಬೆಲೆ 9,990 ರುಪಾಯಿ ಮತ್ತು 11,990 ರುಪಾಯಿ ಆಗಿತ್ತು. ಈ ಸ್ಮಾರ್ಟ್ ಫೋನ್ 5.5-ಇಂಚಿನ ಹೆಚ್ ಡಿ ಸೂಪರ್ AMOLED ಡಿಸ್ಪ್ಲೇ ಹೊಂದಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more