Short News

ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ರಸಪ್ರಶ್ನೆ: ಎಂತೆಂಥಾ ಉತ್ತರಗಳು ಬಂದ್ವು ಶಿವನೇ!

ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ರಸಪ್ರಶ್ನೆ: ಎಂತೆಂಥಾ ಉತ್ತರಗಳು ಬಂದ್ವು ಶಿವನೇ!

4.02ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ @INCIndia ನಿಂದ, #WhatTheFact ಹ್ಯಾಷ್ ಟ್ಯಾಗ್ ಹಾಕಿ ಫೆ13ರಂದು ರಸಪ್ರಶ್ನೆಯೊಂದನ್ನು ಹಾಕಿತ್ತು. ದೇಶದ ಪ್ರತಿಷ್ಟಿತ ಐಐಟಿ, ಐಐಎ ಮತ್ತು ಇಸ್ರೋ ಸಂಸ್ಥೆಗಳು, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆರಂಭವಾಗಿದ್ದರೂ, ಟ್ವಿಟ್ಟಿಗರು ಕಾಂಗ್ರೆಸ್ಸಿನ ಈ ಟ್ವೀಟಿಗೆ ಮಾಡಿರುವ ಕೆಲವೊಂದು ತರಹೇವಾರಿ ರಿಪ್ಲೈಗಳು ಮುಂದಿದೆ..

ಸಕಲ ಕಲಾವಲ್ಲಭನಾದ ಜ್ಯೂನಿಯರ್ ದರ್ಶನ್

ಸಕಲ ಕಲಾವಲ್ಲಭನಾದ ಜ್ಯೂನಿಯರ್ ದರ್ಶನ್

ದರ್ಶನ್ ಹಾಗೂ ವಿಜಯಲಕ್ಷ್ಮೀ ಪುತ್ರ ವೀನಿಶ್ ದರ್ಶನ್ ಚಿಕ್ಕ ವಯಸ್ಸಿನಲ್ಲೇ ಎಲ್ಲಾ ರೀತಿಯ ಕಲೆಗಳನ್ನ ಕರಗತ ಮಾಡಿಕೊಂಡಿದ್ದಾನೆ. ಇತ್ತೀಚಿಗಷ್ಟೇ ಅಮ್ಮನ ಜೊತೆ ಸೇರಿ ಮಣ್ಣಿನಲ್ಲಿ ಗಣೇಶನನ್ನು ಮಾಡುವುದನ್ನು ಕಲಿತುಕೊಂಡಿದ್ದಾನೆ. ಇತ್ತೀಚೆಗೆ ಶಾಲೆಯಲ್ಲಿ ಏರ್ಪಡಿಸಿದ್ದ ಕರಾಟೆ ಸ್ಪರ್ಧೆಯಲ್ಲಿ ವೀನಿಶ್ ಚಿನ್ನದ ಪದಕವನ್ನ ಗೆದ್ದು ತಂದಿದ್ದರು.  ಕೇವಲ ಕರಾಟೆಯಲ್ಲಿ ಮಾತ್ರವಲ್ಲದೆ ವೀನಿಶ್ ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿದ್ದಾರೆ. ತನ್ನ ಒಂಬತ್ತನೇ ವಯಸ್ಸಿನಲ್ಲೇ ವೀನಿಶ್ ಸಾಧನೆ ಅಪಾರವಾದದ್ದು. ರಾಜರಾಜೇಶ್ವರಿ ನಗರದ ಹಿಲ್ ವೀವ್ ಸ್ಕೂಲ್ ನಲ್ಲಿ ವೀನಿಶ್ ದರ್ಶನ್ ವ್ಯಾಸಾಂಗ ಮಾಡುತ್ತಿದ್ದಾರೆ.
ರಾಜಾಜಿನಗರದಲ್ಲಿ ಜ್ಯುಯೆಲರಿ ದರೋಡೆಗೆ ಯತ್ನ, ಗಾಳಿಯಲ್ಲಿ ಗುಂಡು

ರಾಜಾಜಿನಗರದಲ್ಲಿ ಜ್ಯುಯೆಲರಿ ದರೋಡೆಗೆ ಯತ್ನ, ಗಾಳಿಯಲ್ಲಿ ಗುಂಡು

ನಗರದ ರಾಜಾಜಿನಗರದ ಚೆಮ್ಮನೂರು ಜ್ಯುವೆಲ್ಸ್ ಅನ್ನು ದರೋಡೆ ಮಾಡಲು ಕಳ್ಳರು ಯತ್ನ ನಡೆಸಿದ್ದು ಈ ಸಂದರ್ಭ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಬಂದಿದ್ದ ದರೋಡೆಕೋರರನ್ನು ತಡೆಯಲು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ, ಇದನ್ನು ನೋಡಿದ ದರೋಡೆಕೋರರು ಭಯಗೊಂಡು ಸ್ಥಳದಿಂದ ಪೇರಿ ಕಿತ್ತಿದ್ದಾರೆ.

ಮೊದಲು ಒಬ್ಬ ಭದ್ರತಾ ಸಿಬ್ಬಂದಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ

ಉದ್ಯಮಿ ಕಮ್ ಶಾಸಕ ನಲಪಾಡ್ ಅಹ್ಮದ್ ಹ್ಯಾರೀಸ್

ಉದ್ಯಮಿ ಕಮ್ ಶಾಸಕ ನಲಪಾಡ್ ಅಹ್ಮದ್ ಹ್ಯಾರೀಸ್

ನಲಪಾಡ್ ಅಹ್ಮದ್ ಹ್ಯಾರೀಸ್ -ಶಾಂತಿನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ. ಸುಮಾರು ಎರಡೂವರೆ ಲಕ್ಷ ಜನರ ಪ್ರತಿನಿಧಿ. ತಮ್ಮ ಪುತ್ರ ಮೊಹಮ್ಮದ್ ಹ್ಯಾರೀಸ್ ನಲಪಾಡ್ ಅವರ ಮೇಲೆ ತುಂಬಾ ಭರವಸೆ ಇಟ್ಟುಕೊಂಡವರು. ಕಾಂಗ್ರೆಸ್ ಪಕ್ಷದ ಯುವ ನಾಯಕರಾಗುವ ಹೊತ್ತಲ್ಲೇ ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ಆರೋಪಿಯಾಗಿ ಬಂಧಿತರಾಗಿದ್ದಾರೆ.

ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ ಎನ್.ಎ ಹ್ಯಾರೀಸ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಸರಕಾರಿ ಶಾಲೆಗಳ ಕಟ್ಟಡ ನಿರ್ಮಾಣ, ವ್ಯಾಯಾಮ ಶಾಲೆ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ.