Short News

ಕ್ರಿಮಿನಲ್ ಕೇಸು ಹೆಚ್ಚಿರುವವರ ಸಾಲಿನಲ್ಲಿ ಬಿಜೆಪಿ ಸಿಎಂ ಫಡ್ನವೀಸ್ ನಂಬರ್ ಒನ್

ಕ್ರಿಮಿನಲ್ ಕೇಸು ಹೆಚ್ಚಿರುವವರ ಸಾಲಿನಲ್ಲಿ ಬಿಜೆಪಿ ಸಿಎಂ ಫಡ್ನವೀಸ್ ನಂಬರ್ ಒನ್

ದೇಶದಲ್ಲಿನ ಮುಖ್ಯಮಂತ್ರಿಗಳ ಪೈಕಿ ಹನ್ನೊಂದು ಮಂದಿ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಎಡಿಆರ್ ವರದಿ ಮಾಹಿತಿ ಬಹಿರಂಗ ಪಡಿಸಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ 22 ಕ್ರಿಮಿನಲ್ ಪ್ರಕರಣಗಳಿವೆ. ಆ ಪೈಕಿ 3 ಗಂಭೀರ ಪ್ರಕರಣಗಳಿವೆ. 

ಇನ್ನು ಕ್ರಿಮಿನಲ್ ಪ್ರಕರಣಗಳನ್ನು ಹೊತ್ತಿರುವ ಮುಖ್ಯಮಂತ್ರಿಗಳ ಪೈಕಿ ಎರಡನೇ ಸ್ಥಾನದಲ್ಲಿ ಇರುವವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್. ಅವರ ವಿರುದ್ಧ 11 ಪ್ರಕರಣಗಳಿವೆ. ಮೂರನೇ ಸ್ಥಾನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದ್ದು, ಹತ್ತು ಪ್ರಕರಣಗಳಿವೆ. 

aadhar

aadhar

  • ತೆರಿಗೆದಾರರು ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಜೋಡಣೆ ಮಾಡಲು ಆಗಸ್ಟ್ 31 ಕೊನೆ ದಿನವಾಗಿದೆ ಎಂದು ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ. ಸರಕಾರದ ವಿವಿಧ ಯೋಜನೆ ಹಾಗೂ ಸಬ್ಸಿಡಿ ಸೌಲಭ್ಯ ಪಡೆಯಲು 12 ಅಂಕಿಯ ಆಧಾರ್ ನಂಬರ್ ಹೊಂದಿರುವುದು ಅಗತ್ಯ ಎಂದು ಹೇಳಿದ್ದಾರೆ.
  • ಖಾಸಗಿತನ ಎಂಬುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಎನ್ನುವುದು ಸುಪ್ರೀಂ ಕೋರ್ಟ್ ತೀರ್ಪು. ಆಧಾರ್ ಮತ್ತು ಪ್ಯಾನ್ ನಂಬರ್ ಜೋಡಣೆ ಖಾಸಗಿತನದ ಮೇಲೆ ಯಾವ ಪರಿಣಾಮ ಉಂಟು ಮಾಡಿಲ್ಲ. ಆಧಾರ್ ಅಧಿನಿಯಮವು ಖಾಸಗಿತನದ ಹಕ್ಕನ್ನು ಉಲ್ಲಂಘಿಸುವುದಿಲ್ಲ. ಜನರ ಖಾಸಗಿ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಅಜಯ್ ಭೂಷಣ್ ತಿಳಿಸಿದ್ದಾರೆ.
ಪಾಳು ಬಾವಿ ಸ್ವಚ್ಛಗೊಳಿಸಲು ಇಳಿದು ಉಸಿರುಗಟ್ಟಿ ಸಾವನ್ನಪ್ಪಿದ ಮೂವರು

ಪಾಳು ಬಾವಿ ಸ್ವಚ್ಛಗೊಳಿಸಲು ಇಳಿದು ಉಸಿರುಗಟ್ಟಿ ಸಾವನ್ನಪ್ಪಿದ ಮೂವರು

ಕಲಬುರಗಿ ತಾಲೂಕಿನ ಕವಲಗಾ(ಕೆ) ಗ್ರಾಮದಲ್ಲಿ ಪಾಳುಬಿದ್ದ ಬಾವಿಗೆ ಇಳಿದ ತಂದೆ, ಮಗ ಹಾಗೂ ಪಕ್ಕದ ಮನೆಯಾತ ಮೂವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಚೆನ್ನಣ್ಣ ಚೌಡಪ್ಪಗೊಳ, ಮಗ ಮಲ್ಲಿನಾಥ ಚೌಡಪ್ಪಗೊಳ ಹಾಗೂ ಮಹಿಬೂಬ ಕೊಡಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮನೆ ಪಕ್ಕದಲ್ಲಿದ್ದ ಪಾಳು ಬಾವಿಯಿಂದ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ವಚ್ಛ ಮಾಡಲು ಮೊದಲು ಚೆನ್ನಪ್ಪ ಬಾವಿಗಿಳಿದಿದ್ದಾರೆ. ಸುಮಾರು ಹೊತ್ತಾದರೂ ತಂದೆ ಮೇಲಕ್ಕೆ ಬಾರದಿದ್ದಕ್ಕೆ, ಮಗ ಮಲ್ಲಿನಾಥ ಬಾವಿಗಿಳಿದ್ದಾರೆ. ತಂದೆ-ಮಗ ಮೇಲಕ್ಕೆ ಬರದಿದ್ದನ್ನು ಗಮನಿಸಿದ ಪಕ್ಕದ ಮನೆಯಾತ ಅವರಿಬ್ಬರನ್ನು ರಕ್ಷಿಸಲೆಂದು ಬಾವಿಗಿಳಿದು ಆತನೂ ಮೃತಪಟ್ಟಿದ್ದಾನೆ.
aadhar

aadhar

  • ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಇಲ್ಲಿಯವರೆಗೆ ಸುಮಾರು 81 ಲಕ್ಷ ಆಧಾರ್ ಕಾರ್ಡುಗಳನ್ನು ರದ್ದುಗೊಳಿಸಿದೆ! 2016ರ ಆಧಾರ್ ನೋಂದಣಿ ಮತ್ತು ನವೀಕರಣ ನಿಯಂತ್ರಣ ಸೆಕ್ಷನ್ 27, 28ರ ಪ್ರಕಾರ ವಿವಿಧ ಕಾರಣಗಳಿಗಾಗಿ ಆಧಾರ್ ನಂಬರ್ ಗಳನ್ನು ರದ್ದುಪಡಿಸಲಾಗಿದೆ. ಹಾಗಿದ್ದರೆ ನಿಮ್ಮ ಆಧಾರ್ ಕಾರ್ಡ್ ಪರಿಸ್ಥಿತಿ ಏನಾಗಿದೆ? ಆಧಾರ್ ನಂಬರ್ ಬ್ಲಾಕ್ ಮಾಡಲಾಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಇತ್ಯಾದಿ ಗೊಂದಲಗಳು ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ ಮುಂದೆ ಓದಿ..