Short News

ಪ್ರಖ್ಯಾತ ಆಧ್ಯಾತ್ಮ ಗುರು ದಾದಾ  ಜೆ.ಪಿ. ವಾಸ್ವಾನಿ ಅಸ್ತಂಗತ

ಪ್ರಖ್ಯಾತ ಆಧ್ಯಾತ್ಮ ಗುರು ದಾದಾ ಜೆ.ಪಿ. ವಾಸ್ವಾನಿ ಅಸ್ತಂಗತ

ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಧು ವಾಸ್ವಾನಿ ಮಿಶನ್‌ ಮುಖ್ಯಸ್ಥ ಹಾಗೂ ಪ್ರಖ್ಯಾತ ಆಧ್ಯಾತ್ಮ ಗುರು ದಾದಾ ಜೆ.ಪಿ.ವಾಸ್ವಾನಿ(99)ಅವರು ಗುರುವಾರ ವಿಧಿವಶರಾಗಿದ್ದಾರೆ. ಸಸ್ಯಾಹಾರ ಉತ್ತೇಜಿಸಲು ಮತ್ತು ಪ್ರಾಣಿ ಹಕ್ಕುಗಳ ಪ್ರಚಾರಕರಾಗಿ ಗುರುತಿಸಿಕೊಂಡಿದ್ದ ಇವರು 150ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.2017ರಲ್ಲಿ ವಾಸ್ವಾನಿ ಅವರ 99 ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ಮೋದಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶುಭ ಹಾರೈಸಿದ್ದರು.ಮುಂದಿನ ತಿಂಗಳ ಶತಾಯುಷಿ ಆಗಲಿದ್ದ ವಾಸ್ವಾನಿ ಅವರ 100ನೇ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮಿಶನ್‌ ಭರ್ಜರಿ ತಯಾರಿ ನಡೆಸುತ್ತಿತ್ತು.
ಉತ್ತರ ಭಾರತದಲ್ಲಿರುವ ಈ ಅದ್ಭುತ ಗುಹೆಗೆ ಒಮ್ಮೆ ಭೇಟಿ ಕೊಡಿ...

ಉತ್ತರ ಭಾರತದಲ್ಲಿರುವ ಈ ಅದ್ಭುತ ಗುಹೆಗೆ ಒಮ್ಮೆ ಭೇಟಿ ಕೊಡಿ...

ಮಧ್ಯಪ್ರದೇಶದ ಭಿಂಬೆಟ್ಕಾ ಗುಹೆ ನೋಡಲು ಕಲ್ಲಿನ ಮೇಲೆ ಕೆತ್ತನೆಗಳಿರುವ ಸಾಧಾರಣ ಗುಹೆಗಳಂತೆ ಕಂಡರೂ ಎಲ್ಲಾ ಚಿತ್ರಗಳು, ಕೆತ್ತನೆಗಳು ಅದ್ಭುತವಾಗಿದೆ. ಮೆಸೊಲಿಥಿಕ್‌ ಕಾಲದ ಈ ಗುಹೆ ಆಗಿನ ಬದುಕಿನ ಕೆಲವು ಸಂಕೇತಗಳನ್ನು ಬಿಂಬಿಸುತ್ತವೆ. ಕಲ್ಲಿನ ಮೆಲೆ ಚಿತ್ರಿಸಲಾದ ನೃತ್ಯ, ಬೇಟೆ, ವಿಚಿತ್ರವಾದ ಪ್ರಾಣಿಗಳ ಚಿತ್ರಗಳ ಜೊತೆಗೆ ಸುತ್ತಲೂ ಇರುವ ದಟ್ಟ ಕಾಡು ನಿಮಗೆ ಥ್ರಿಲ್ಲಿಂಗ್‌ ಅನುಭವ ನೀಡುತ್ತದೆ. ಇನ್ನು ಮೇಘಾಲಯದಲ್ಲಿರುವ ಕ್ರೆಮ್ ಮಾವ್ಮ್ಲುಹ್ ಗುಹೆ 7 ಕಿ.ಮೀ.ಗಳಷ್ಟು ಉದ್ದವಿದ್ದು, ಘನೀಕೃತ ಕ್ಯಾಲ್ಸಿಫಿಕೇಶನ್‌ನಿಂದ ನಿರ್ಮಾಣವಾಗಿದೆ.
ಚಾಣಾಕ್ಯನ ಪ್ರಕಾರ ನಿಮ್ಮನ್ನು ಎಂದಿಗೂ ಕೈಬಿಡದ ಆರು ಸಂಬಂಧಿಕರು ಯಾರು?

ಚಾಣಾಕ್ಯನ ಪ್ರಕಾರ ನಿಮ್ಮನ್ನು ಎಂದಿಗೂ ಕೈಬಿಡದ ಆರು ಸಂಬಂಧಿಕರು ಯಾರು?

ಚಾಣಾಕ್ಯ ನೀತಿಯನ್ನು ವೇದಗಳ ಸಮಯದಲ್ಲಿ ಚೆನ್ನಾಗಿಯೇ ವಿವರಿಸಲಾಗಿದೆ. ಚಾಣಾಕ್ಯ ಹೇಳಿರುವ ಮಾತುಗಳು ನಮ್ಮ ಇಂದಿನ ಜೀವನಕ್ಕೆ ಹೆಚ್ಚು ಪೂರಕವಾಗಿದ್ದು ಇವುಗಳನ್ನು ಅರಿತುಕೊಂಡು ನಾವು ಜೀವನವನ್ನು ನಡೆಸಿದಲ್ಲಿ ನಮಗೆ ಯಶಸ್ಸು, ಸಮಾಧಾನ, ಶಾಂತಿ ದೊರೆಯುತ್ತದೆ. ಇಂದಿನ ಲೇಖನದಲ್ಲಿ ಚಾಣಾಕ್ಯ ಹೇಳಿರುವ ಆರು ಜೀವನ ಸಂಬಂಧಿಗಳ ಬಗ್ಗೆ ತಿಳಿಸುತ್ತಿದ್ದೇವೆ. ನೀವು ಜೀವನದ ಈ ರಹಸ್ಯಗಳನ್ನು ಪಾಲಿಸಿಕೊಂಡು ಬಂದಲ್ಲಿ ಅವುಗಳು ನಿಮ್ಮ ಜೀವನವನ್ನು ಸಂರಕ್ಷಿಸುವುದು ಖಂಡಿತ ಎಂದಾಗಿದೆ. ಚಾಣಾಕ್ಯ ಇದನ್ನು ಆರು ಸಂಬಂಧಿಕರು ಎಂದು ಕರೆದಿದ್ದು ನೀವು ಎಲ್ಲಿಹೋದರೂ ನಿಮ್ಮ ಯಾವುದೇ ಸಂಕಷ್ಟದಲ್ಲಿ ಇವುಗಳು ಕೈಬಿಡುವುದಿಲ್ಲ.

ಮಂಗಳೂರು ಹೊರವಲಯದ ಕಡಲ ತಡಿಯಲ್ಲಿ ತೀವ್ರಗೊಂಡ ಕಡಲ ಕೊರೆತ

ಮಂಗಳೂರು ಹೊರವಲಯದ ಕಡಲ ತಡಿಯಲ್ಲಿ ತೀವ್ರಗೊಂಡ ಕಡಲ ಕೊರೆತ

ರಾಜ್ಯದ ಕರಾವಳಿಯಲ್ಲಿ ವರುಣ ಮತ್ತೆ ಅಬ್ಬರಿಸಲು ಆರಂಭಿಸಿದ್ದಾನೆ. ಕಳೆದ 2 ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗದಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಇನ್ನೊಂದೆಡೆ ಕಡಲ ರೌದ್ರ ನರ್ತನಕ್ಕೆ ಮಂಗಳೂರು ಹೊರವಲಯದ ಕಡಲ ತಡಿಯಲ್ಲಿ ಭಾರೀ ಕಡಲ ಕೊರೆತವಾಗುತ್ತಿದೆ. ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಕಡಬದ ಹೊಸ್ಮಠ ಸೇತುವೆ ಸತತ ಎಂಟನೇ ದಿನವೂ ಮುಳುಗಡೆಯಾಗುತ್ತಿದ್ದು, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ಭಕ್ತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more