Short News

ಇನ್ನೋವಾ ಹೈಕ್ರಾಸ್ ಹೊಸ ರೂಪಾಂತರ ಬಿಡುಗಡೆ

ಇನ್ನೋವಾ ಹೈಕ್ರಾಸ್ ಹೊಸ ರೂಪಾಂತರ ಬಿಡುಗಡೆ

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ತನ್ನ ಇನ್ನೋವಾ ಹೈಕ್ರಾಸ್ (Innova Hycross) ಎಂಪಿವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ಇದೀಗ ಟೊಯೊಟಾ ಕಂಪನಿಯು ತನ್ನ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿಯ ಸರಣಿಯನ್ನು ವಿಸ್ತರಿಸಿದೆ.
ಸೆಮಿಕಂಡಕ್ಟರ್‌ ಪೂರೈಸಲು ಟಾಟಾದೊಂದಿಗೆ ಟೆಸ್ಲಾ ಒಪ್ಪಂದ...

ಸೆಮಿಕಂಡಕ್ಟರ್‌ ಪೂರೈಸಲು ಟಾಟಾದೊಂದಿಗೆ ಟೆಸ್ಲಾ ಒಪ್ಪಂದ...

ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ (Elon Musk) ಮಾಲೀಕತ್ವದ ಟೆಸ್ಲಾ (Tesla) ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್‌ (Tata Electronics) ಮಹತ್ವದ ಒಪ್ಪಂದವನ್ನು ಮಾಡಿಕೊಂಡಿವೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಟೆಸ್ಲಾದ ಜಾಗತಿಕ ಕಾರ್ಯಾಚರಣೆಗಳಿಗಾಗಿ ಸೆಮಿಕಂಡಕ್ಟರ್ ಚಿಪ್‌ಗಳನ್ನು ಪೂರೈಸಲು ಟಾಟಾ ಈ ಒಡಂಬಡಿಕೆಯನ್ನು ಮಾಡಿಕೊಂಡಿದೆ.
ಹಣದ ವಿಚಾರವಾಗಿ ಜಗಳ: ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಕಾರಿಗೆ ಬೆಂಕಿ

ಹಣದ ವಿಚಾರವಾಗಿ ಜಗಳ: ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಕಾರಿಗೆ ಬೆಂಕಿ

ಬರೋಬ್ಬರಿ 1 ಕೋಟಿ ಬೆಲೆಯ ಲ್ಯಾಂಬೊರ್ಘಿನಿ ಗಲ್ಲಾರ್ಡೊ ಸೂಪರ್ ಕಾರ್‌ ಬೆಂಕಿಗೆ ಆಹುತಿಯಾದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹಳದಿ ಬಣ್ಣದ ಲ್ಯಾಂಬೊರ್ಘಿನಿ ಸೂಪರ್ ಕಾರು ಬೆಂಕಿಯಲ್ಲಿ ಸುಡುವ ವೀಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಈ ಸೂಪರ್ ಕಾರ್ ಅನ್ನು ಸ್ನೇಹಿತರ ಗುಂಪೊಂದು ಸುಟ್ಟುಹಾಕಿದೆ.
ಕಾರು ಮಾರಾಟ ಕಳೆದ ತಿಂಗಳಿನಲ್ಲಿ 100ರ ಗಡಿ ದಾಟಲಿಲ್ಲ

ಕಾರು ಮಾರಾಟ ಕಳೆದ ತಿಂಗಳಿನಲ್ಲಿ 100ರ ಗಡಿ ದಾಟಲಿಲ್ಲ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಇಂಡಿಯಾದ ಹೊಸ ಫೋಕ್ಸ್‌ವ್ಯಾಗನ್ ಟೈಗನ್ (Volkswagen Taigun) ಎಸ್‌ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಯು ಮಾರಾಟದಲ್ಲಿ ಭಾರೀ ಕುಸಿತವನ್ನು ಕಂಡಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಈ ಟೈಗನ್ ಮಾದರಿಯ 94 ಯುನಿಟ್ ಗಳು ಮಾತ್ರ ಮಾರಾಟವಾಗಿತ್ತು.