Short News

ಹುತಾತ್ಮರಲ್ಲೂ ನಾವು ಕೋಮುವಾದ ಹುಡುಕೋಲ್ಲ: ಭಾರತೀಯ ಸೇನೆ

ಹುತಾತ್ಮರಲ್ಲೂ ನಾವು ಕೋಮುವಾದ ಹುಡುಕೋಲ್ಲ: ಭಾರತೀಯ ಸೇನೆ

'ಹುತಾತ್ಮರಲ್ಲಿ ನಾವು ಕೋಮುವಾದ ಹುಡುಕುವುದಿಲ್ಲ...' ಎನ್ನುವ ಮೂಲಕ ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಅವರ ಹೇಳಿಕೆಗೆ ಭಾರತೀಯ ಸೇನೆ ಖಡಕ್ ಪ್ರತಿಕ್ರಿಯೆ ನೀಡಿದೆ. ಕಾಶ್ಮೀರದ ಸುಜ್ವಾನ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಅಸಾದುದ್ದಿನ್ ಓವೈಸಿ, 'ಮುಸ್ಲಿಮರನ್ನು ಪಾಕಿಸ್ತಾನಿಗಳು ಎನ್ನುವವರು ಒಮ್ಮೆ ಇಲ್ಲಿ ನೋಡಿ, ಸುಜ್ವಾನ್ ನಲ್ಲಿ ನಡೆದ ದಾಳಿಯಲ್ಲಿ ಮೃತರಾದ ಏಳು ಸೈನಿಕರಲ್ಲಿ ಐವರು ಮುಸ್ಲಿಮರು!' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಎಂಜಲಿನ ಗ್ಲಾಸು ತೊಳೆಯುತ್ತಿದ್ದ ಅಂದಿನ ಅಸಾರಾಂ, ಈಗ ಮೈ ತುಂಬಾ ಹಗರಣ ಹೊತ್ತಿರುವ ಸ್ವಯಂ ಘೋಷಿತ ದೇವ ಮಾನವ!

ಎಂಜಲಿನ ಗ್ಲಾಸು ತೊಳೆಯುತ್ತಿದ್ದ ಅಂದಿನ ಅಸಾರಾಂ, ಈಗ ಮೈ ತುಂಬಾ ಹಗರಣ ಹೊತ್ತಿರುವ ಸ್ವಯಂ ಘೋಷಿತ ದೇವ ಮಾನವ!

ಚಹಾದಂಗಡಿಯಲ್ಲಿ ಗ್ಲಾಸು ತೊಳೆಯುತ್ತಿದ್ದ ಅಸಾರಾಂ 1971ರಲ್ಲಿ ಮೊದಲ ಬಾರಿಗೆ ಧಾರ್ಮಿಕ ಬೋಧನೆ ಆರಂಭಿಸಿದ್ದ ಬಳಿಕ ದೇಶ,ವಿದೇಶಗಳಲ್ಲಿ ಆಶ್ರಮಗಳನ್ನು ಸ್ಥಾಪಿಸಿ 2008ರ ಹೊತ್ತಿಗೆ 5000ಕೋಟಿ ರೂ ಒಡೆಯನಾದ. ಸದ್ಯ ಜೋಧಪುರದ ಮಾಣಾಯಿ ಆಶ್ರಮದಲ್ಲಿ 16ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿದ ಆರೋಪವಿದೆ. 2008ರಲ್ಲಿ ಸಾಬರಮತಿ ದಡದಲ್ಲಿ ಅಸಾರಾಂ ಆಶ್ರಮದ ಸಮೀಪ ಇಬ್ಬರು ಅಪ್ರಾಪ್ತ ಬಾಲಕರ ಪ್ರಮುಖ ಅಂಗಾಂಗವಿಲ್ಲದ ಮೃತದೇಹ ಪತ್ತೆಯಾಗಿತ್ತು. ಅಸಾರಾಂ ಕೊಲೆ ಮಾಡಿದ್ದಾಗಿ ಆರೋಪವಿತ್ತು. ಈ ಸಂಬಂಧ 2009ರಲ್ಲಿ ಈತನ 7ಅನುಯಾಯಿಗಳ ವಿರುದ್ಧ ಪ್ರಕರಣ ದಾಖಲಾಗಿ,2012ರಲ್ಲಿ ಚಾರ್ಜ್ ಶೀಟ್ ಆಗಿತ್ತು. ಇದಲ್ಲದೆ ಭೂಕಬಳಿಕೆ ಆರೋಪವಿದೆ.
ಸಿಂಹ: 2018ರ ಮೇ ತಿಂಗಳು ಈ ರಾಶಿಯವರಿಗೆ ಹೇಗಿರಲಿದೆ

ಸಿಂಹ: 2018ರ ಮೇ ತಿಂಗಳು ಈ ರಾಶಿಯವರಿಗೆ ಹೇಗಿರಲಿದೆ

ಸಿಂಹರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಜನ್ಮತಃ ನಾಯಕರಾಗಿರುತ್ತಾರೆ. ಇವರು ವಿಶ್ವಾಸಿಗಳೂ, ಇತರರ ಮೇಲೆ ಪ್ರಭಾವ ಬೀರಬಲ್ಲವರೂ ಹಾಗೂ ಕ್ರಿಯಾತ್ಮಕರೂ ಆಗಿರುತ್ತಾರೆ ಹಾಗೂ ಜೀವನದಲ್ಲಿ ಎದುರಾಗುವ ಯಾವುದೇ ತೊಡಕುಗಳನ್ನು ಎದುರಿಸಿ ಜಯಗಳಿಸಲು ಯತ್ನಿಸುವ ಮೂಲಕ ಸದಾ ಜಯಶೀಲರಾಗಿರುತ್ತಾರೆ. ಇವರ ನಿಷ್ಠೆ ಮತ್ತು ಔದಾರ್ಯ ಸ್ವಭಾವಗಳು ಅಲ್ಪಸಮಯದಲ್ಲಿಯೇ ಹೆಚ್ಚಿನ ಸ್ನೇಹಿತರನ್ನು ಪಡೆಯಲು ನೆರವಾಗುತ್ತದೆ. ವೈಯಕ್ತಿಕವಗಿ ಇವರು ಆಕರ್ಷಕ ಮತ್ತು ಭವ್ಯ ವ್ಯಕ್ತಿತ್ವ ಹೊಂದಿರುತ್ತಾರೆ ಹಾಗೂ ಇವರು ಇತರರ ಮೇಲೆ ಸುಲಭವಾಗಿ ಪ್ರಭಾವ ಬೀರಬಲ್ಲವರಾಗಿರುತ್ತಾರೆ.

ಪರೇಶ್ ಮೇಸ್ತ ಹತ್ಯೆ ಪ್ರಕರಣ : ಸಿಬಿಐನಿಂದ ಎಫ್‌ಐಆರ್

ಪರೇಶ್ ಮೇಸ್ತ ಹತ್ಯೆ ಪ್ರಕರಣ : ಸಿಬಿಐನಿಂದ ಎಫ್‌ಐಆರ್

ಪರೇಶ್ ಮೇಸ್ತ ಕೊಲೆ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ಸಿಬಿಐಗೆ ವಹಿಸಿತ್ತು. ನಾಲ್ಕು ತಿಂಗಳ ಬಳಿಕ ಸಿಬಿಐ ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದೆ. 2017ರ ಡಿಸೆಂಬರ್‌ನಲ್ಲಿ ಪರೇಶ್ ಮೇಸ್ತ ಹತ್ಯೆ ನಡೆದಿತ್ತು. 2017ರ ಡಿಸೆಂಬರ್‌ 6 ರಂದು ಹೊನ್ನಾವರದಿಂದ 19 ವರ್ಷದ ಪರೇಶ್ ಮೇಸ್ತ ನಾಪತ್ತೆಯಾಗಿದ್ದ. ಎರಡು ದಿನಗಳ ಬಳಿಕ ಆತನ ಶವ ಕೆರೆಯಲ್ಲಿ ಪತ್ತೆಯಾಗಿತ್ತು. ಮೇಸ್ತ ತಂದೆ ಕಮಲಾಕೆ ಮೇಸ್ತ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ 5 ಜನರ ವಿರುದ್ಧ ದೂರು ದಾಖಲಿಸಿದ್ದರು. ಪರೇಶ್ ಮೇಸ್ತ ಸಾವು ಖಂಡಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು.