ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಡೆಂಗ್ಯುಗೆ ಔಷಧಿ ಕಂಡುಹಿಡಿದ ಭಾರತ
ಭಾರತ
- 9 days ago
ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಭಾರತೀಯ ವಿಜ್ಞಾನಿಗಳು ಡೆಂಗ್ಯುಗೆ ಔಷಧಿ ಪತ್ತೆ ಹಚ್ಚಿದ್ದಾರೆ. ಈ ಔಷಧಿ ಮೇಲೆ ನಡೆದ ಪ್ರಯೋಗ ಯಶಸ್ವಿಯಾಗಿದ್ದು;, ಮಾರುಕಟ್ಟೆಗೆ ಔಷಧಿ ಬರುವ ಮುನ್ನ ಜಾಗತಿಕ ಮಟ್ಟದಲ್ಲಿ ನಡೆಯುವ ಗುಣಮಟ್ಟದ ಪರೀಕ್ಷೆಗೆ ಮುಂದಾಗಿದೆ. ಡೆಂಗ್ಯು ರೋಗಿಗಳಿಗೆ 2019ರ ಸುಮಾರಿಗೆ ಮಾರುಕಟ್ಟೆಯಲ್ಲಿ ಈ ಔಷಧಿ ಸಿಗುವಂತೆ ಮಾಡಲು ಶ್ರಮ ವಹಿಸಲಾಗುತ್ತಿದೆ. ಇದು ಸಂಪೂರ್ಣ ಆಯುರ್ವೇದ ಔಷಧಿಯಾಗಿದ್ದು, 7 ರೀತಿಯ ಔಷಧಿ ಸಸ್ಯವನ್ನು ಬಳಸಲಾಗಿದೆ. ಆಯುಶ್ ಸಚಿವಾಲಯದ ಸಿ ಸಿ ಆರ್ ಎಸ್ ವಿಜ್ಞಾನಿಗಳು ಇದನ್ನು ಸಿದ್ಧಪಡಿಸಿದ್ದಾರೆ. ಈ ಔಷಧಿ ತಯಾರಿಸಲು ಸಂಶೋಧಕರಿಗೆ 2 ವರ್ಷ ಹಿಡಿದಿದೆ.