Short News

ಅವಧಿಗೆ ಮುನ್ನ PPF ಖಾತೆ ಮುಚ್ಚುವುದಕ್ಕೆ ಅವಕಾಶ - ಕೇಂದ್ರದ ಚಿಂತನೆ

ಅವಧಿಗೆ ಮುನ್ನ PPF ಖಾತೆ ಮುಚ್ಚುವುದಕ್ಕೆ ಅವಕಾಶ - ಕೇಂದ್ರದ ಚಿಂತನೆ

ಅವಧಿಗೂ ಮುನ್ನವೇ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆಯನ್ನಿ ಮುಚ್ಚುವುದಕ್ಕೆ ಅವಕಾಶ ನೀಡಲು ಸರ್ಕಾರ ಚಿಂತೆ ನಡೆಸುತ್ತಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ತುರ್ತು ಸಂದರ್ಭಗಳಲ್ಲಿ ಅಂದರೆ ಆರೋಗ್ಯ ಸಮಸ್ಯೆ ಮತ್ತು ಉನ್ನತ ಶಿಕ್ಷಣದ ಅಗತ್ಯಕ್ಕೆ ಪಿಪಿಎಫ್ ಖಾತೆಯನ್ನು ಅವಧಿಗೂ ಮಿನ್ನವೇ ಮುಚ್ಚುವುದಕ್ಕೆ ಅವಕಾಶ ನೀಡಲಾಗುವುದು ಎದು ಅದು ಹೇಳಿದೆ.

2018 ರ ಹಣಕಾಸು ಮಸೂದೆ ಪ್ರಕಾರ ಸಣ್ಣ ಉಳಿತಾಯ ಯೋಜನೆಯಲ್ಲೂ ಕೆಲವು ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದ್ದು, ಅಪ್ರಾಪ್ತರೂ ಉಳಿತಾಯ ಖಾತೆ ತೆರೆಯಲು ಅವಕಾಶ ನೀಡಲಾಗಿದೆ.

ಬೆಚ್ಚಿಬಿದ್ದ ಮೊಬೈಲ್ ಮಾರುಕಟ್ಟೆ, ಸ್ಯಾಮ್‌ಸಂಗ್‌ ''ಗ್ಯಾಲಾಕ್ಸಿ ಎಸ್ 9'' ಮಾಹಿತಿ ಲೀಕ್

ಬೆಚ್ಚಿಬಿದ್ದ ಮೊಬೈಲ್ ಮಾರುಕಟ್ಟೆ, ಸ್ಯಾಮ್‌ಸಂಗ್‌ ''ಗ್ಯಾಲಾಕ್ಸಿ ಎಸ್ 9'' ಮಾಹಿತಿ ಲೀಕ್

ಇನ್ನೆರಡು ದಿನಗಳಲ್ಲಿ ಆಯೋಜನೆಯಾಗಿರುವ 2018ನೇ ಮೊಬೈಲ್ ಕಾಂಗ್ರೆಸ್‌ನಲ್ಲಿ ಗ್ಯಾಲಾಕ್ಸಿ ಎಸ್ 9 ಬಿಡುಗಡೆಯಾಗಲಿದೆ ಎಂದು ಸ್ಯಾಮ್ಸಂಗ್ ಮೊಬೈಲ್ ಅಧ್ಯಕ್ಷ DJ ಕೊಹ್ ಹೇಳಿದ ಕೆಲವೇ ಕ್ಷಣಗಳಲ್ಲಿ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್ 9 ಮಾಹಿತಿಗಳೆಲ್ಲವೂ ಲೀಕ್ ಆಗಿದೆ. ಚೀನಾದ ಪ್ರಮುಖ ಇ-ಕಾಮರ್ಸ್ ನೆಟ್‌ವರ್ಕ್ ಸೈಟ್ ವಿಬೋದಲ್ಲಿ ಗ್ಯಾಲಾಕ್ಸಿ ಎಸ್ 9ಸ್ಮಾರ್ಟ್‌ಫೋನ್ ಚಿತ್ರಗಳು ಹಾಗೂ ಫೀಚರ್‌ಗಳು ಯಾವುವು ಎಂಬೆಲ್ಲಾ ಮಾಹಿತಿಗಳನ್ನು ಪ್ರಕಟಿಸಿದೆ. 5.8ಇಂಚಿನ ಸೂಪರ್ AMOLEDಡಿಸ್‌ಪ್ಲೇ, 12MPಸೂಪರ್ ಸ್ಪೀಡ್ ಡ್ಯುಯಲ್ ಪಿಕ್ಸೆಲ್ ಕ್ಯಾಮರಾದಂತಹ ಫೀಚರ್‌ಗಳನ್ನು ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್ 9ಸ್ಮಾರ್ಟ್‌ಫೋನ್ ಒಳಗೊಂಡಿದೆ.
ಭವಿಷ್ಯ ನಿಧಿ(EPFO) ಬಡ್ಡಿದರ ಶೇ 8.65 ರಿಂದ ಶೇ 8.55ಕ್ಕೆ ಇಳಿಕೆ

ಭವಿಷ್ಯ ನಿಧಿ(EPFO) ಬಡ್ಡಿದರ ಶೇ 8.65 ರಿಂದ ಶೇ 8.55ಕ್ಕೆ ಇಳಿಕೆ

ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಠೇವಣಿಗೆ ನೀಡಲಾಗುತ್ತಿದ್ದ ಶೇ 8.65ರಷ್ಟು ಬಡ್ಡಿದರವನ್ನು 2017-18 ಸಾಲಿನಂತೆ ಶೇ 8.55ಕ್ಕೆ ಇಳಿಕೆ ಮಾಡಲಾಗಿದೆ. ಈ ಬದಲಾವಣೆ ಕೋಟ್ಯಂತರ ಚಂದಾದಾರರ ಮೇಲೆ ಪರಿಣಾಮ ಬೀರಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO)ಯ ಕೇಂದ್ರ ಟ್ರಸ್ಟಿಗಳು(CBT) ಬಡ್ಡಿದರ ಇಳಿಕೆ ಬಗ್ಗೆ ಬುಧವಾರ(ಫೆಬ್ರವರಿ 21) ನಿರ್ಣಯ ಕೈಗೊಂಡಿದ್ದಾರೆ ಎಂದು ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಕಟಿಸಿದೆ. ಏಪ್ರಿಲ್ 01, 2016ರಿಂದ ಇಪಿಎಫ್ ನ ಅಸಲು ಧನ ತೆರಿಗೆ ಮುಕ್ತವಾಗಿದೆ. ಇಪಿಎಫ್ ಗೆ ನೀಡುವ ಮೊತ್ತದ ಶೇ 60ರಷ್ಟು ಬಡ್ಡಿ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ.
ನವಾಜ್ ಷರೀಫ್ ತಮ್ಮ ಪಕ್ಷವನ್ನು ಮುನ್ನಡೆಸುವಂತಿಲ್ಲ: ಸುಪ್ರೀಂ ಆದೇಶ

ನವಾಜ್ ಷರೀಫ್ ತಮ್ಮ ಪಕ್ಷವನ್ನು ಮುನ್ನಡೆಸುವಂತಿಲ್ಲ: ಸುಪ್ರೀಂ ಆದೇಶ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಪಕ್ಷವನ್ನು ಮುನ್ನಡೆಸುವಂತಿಲ್ಲ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಪ್ರಧಾನಿ ಹುದ್ದೆಯಿಂದ ನವಾಜ್ ಷರೀಫ್ ಕೆಳಗಿಳಿಯಬೇಕು ಎಂಬ ಆದೇಶ ಹೊರಬಿದ್ದ 6 ತಿಂಗಳಲ್ಲೇ ನವಾಜ್ ಷರೀಫ್ ತಮ್ಮ ಪಕ್ಷದ ನೇತೃತ್ವವನ್ನೂ ವಹಿಸುವಂತಿಲ್ಲ ಎಂದು ಸುಪ್ರೀಂ ಆದೇಶಿಸಿದೆ. ಪ್ರಧಾನಿ ಹುದ್ದೆಯಿಂದ ಷರೀಪ್ ಕೆಳಗಿಳಿದ ತಕ್ಷಣ ಮುಸ್ಲಿಂ ಲೀಗ್-ನವಾಜ್ ಪಕ್ಷ ಷರೀಫ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯುವುದಕ್ಕೆ ಯಾವುದೇ ತೊಡಕಾಗದಂತೆ ಕಾನೂನು ಮಾರ್ಪಾಡು ಮಾಡಿತ್ತು.