Short News

ಜೈಪುರ ವಿಮಾನ ನಿಲ್ದಾಣದಲ್ಲಿ ಜಿಗ್ನೇಶ್ ಮೇವಾನಿ ಪೊಲೀಸ್ ವಶಕ್ಕೆ

ಜೈಪುರ ವಿಮಾನ ನಿಲ್ದಾಣದಲ್ಲಿ ಜಿಗ್ನೇಶ್ ಮೇವಾನಿ ಪೊಲೀಸ್ ವಶಕ್ಕೆ

ಗುಜರಾತಿನ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿಯನ್ನು ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಘಟನೆ ಏ.15ಕ್ಕೆ ನಡೆದಿದೆ.ರಾಜಸ್ಥಾನದ ನಾಗೌರ್ ಪ್ರದೇಶಕ್ಕೆ 'ಭಾರತೀಯ ಸಂವಿಧಾನ ಮತ್ತು ಅಂಬೇಡ್ಕರ್' ಎಂಬ ವಿಷಯದ ಕುರಿತು ಮಾತನಾಡಲು ಹೊರಟಿದ್ದ ವೇಳೆ ಪೊಲೀಸರು, ನಾಗೌರ್ ಮತ್ತು ಜೈಪುರದಾದ್ಯಂತ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ ಎಂದಿದ್ದಾರೆ.ಈ ಕುರಿತು ಜಿಗ್ನೇಶ್ ಟ್ವೀಟ್ ಮಾಡಿ, ನನ್ನ ಮೇಲೆ ನಿರ್ಬಂಧ ಹೇರಲು ವಸುಂಧರಾ ರಾಜೆ ಸರ್ಕಾರಕ್ಕೆ ಸಿಕ್ಕ ಕಾರಣವೇನು ಎಂಬುದು ಗೊತ್ತಿಲ್ಲ. ಯಾವ ಅಧಿಕೃತ ಆರ್ಡರ್ ಇಲ್ಲದೆ ನನ್ನನ್ನು ವಶಕ್ಕೆ ಪಡೆಯಲಾಗಿದೆ. ಇದು ನಾಚಿಕೆಗೇಡು ಎಂದಿದ್ದಾರೆ.
ಮೊಬೈಲ್‌ ಸಂಖ್ಯೆಗೆ ಆಧಾರ್‌ ನಂಬರ್‌ ಜೋಡಣೆ, ಛೀಮಾರಿ ಹಾಕಿದ ಸುಪ್ರೀಂ

ಮೊಬೈಲ್‌ ಸಂಖ್ಯೆಗೆ ಆಧಾರ್‌ ನಂಬರ್‌ ಜೋಡಣೆ, ಛೀಮಾರಿ ಹಾಕಿದ ಸುಪ್ರೀಂ

ಗ್ರಾಹಕರ ಮೊಬೈಲ್‌ ಸಂಖ್ಯೆಗೆ ಆಧಾರ್‌ ನಂಬರ್‌ ಅನ್ನು ಕಡ್ಡಾಯವಾಗಿ ಬೆಸೆಯುವ ಕೇಂದ್ರ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನೆ ಮಾಡಿದೆ. ಮೊಬೈಲ್‌ಗೆ ಆಧಾರ್‌ ಬೆಸೆಯುವ ವಿಚಾರದಲ್ಲಿ ಸುಪ್ರೀಂನಿಂದ ಯಾವುದೇ ನಿರ್ದೇಶನ ಹೊರಬಿದ್ದಿಲ್ಲ. ಆದಾಗ್ಯೂ ಏಕೆ ಇದಕ್ಕೆ ಮುಂದಾಗುತ್ತಿದ್ದೀರಿ ಎಂದು ಕೇಳಿದೆ. ಆಧಾರ್‌ ಸಂಖ್ಯೆಯ ದೃಢೀಕರಣವನ್ನು ಎಲ್ಲ ರೀತಿಯಲ್ಲಿ ಅಸ್ತ್ರದಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕಿಡಿಕಾರಿದ್ದು, ಮೊಬೈಲ್‌ಗೆ ಆಧಾರ್‌ ಬೆಸೆಯುವ ವಿಚಾರದಲ್ಲಿ ಸುಪ್ರೀಂನಿಂದ ಯಾವುದೇ ನಿರ್ದೇಶನ ಹೊರಬಿದ್ದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೃದಯದ ಕಾಯಿಲೆ ದೂರವಿಡಲು, ಇಂತಹ ಆಹಾರಗಳನ್ನು ಸೇವಿಸಿ...

ಹೃದಯದ ಕಾಯಿಲೆ ದೂರವಿಡಲು, ಇಂತಹ ಆಹಾರಗಳನ್ನು ಸೇವಿಸಿ...

ಇಂದಿನ ದಿನಗಳಲ್ಲಿ ಹದಿನಂಟರಿಂದ ಇಪ್ಪತ್ತನಾಲ್ಕು ವಯಸ್ಸಿನ ಯುವಕರ ಪೈಕಿ ಅರ್ಧದಷ್ಟು ಯುವಕರಲ್ಲಿ ಕನಿಷ್ಟ ಒಂದಾದರೂ ಹೃದಯಸಂಬಂಧಿ ತೊಂದರೆ ಇದ್ದೇ ಇರುತ್ತದೆ. ಉದಾಹರಣೆಗೆ ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ ಅಥವಾ ಅನಾರೋಗ್ಯಕರ ಆಹಾರ ಸೇವನೆ. ಇಪ್ಪತ್ತರ ಹರೆಯದಲ್ಲಿ ಹೃದಯದ ಒತ್ತಡ ಸಾಮಾನ್ಯಕ್ಕಿಂತ ಕೊಂಚವೇ ಹೆಚ್ಚಿದ್ದರೂ ಮುಂದಿನ ವರ್ಷಗಳಲ್ಲಿ ಹೃದಯನಾಳಗಳು ಒಳಗಿನಿಂದ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.ಆದ್ದರಿಂದ ಚಿಕ್ಕವಯಸ್ಸಿನಲ್ಲಿಯೇ ಉತ್ತಮ ಆಹಾರ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೃದಯದ ಮೇಲೆ ಒತ್ತಡವನ್ನು ಹೇರದೇ ಉತ್ತಮ ಆರೋಗ್ಯ ಹಾಗೂ ದೀರ್ಘಾಯಸ್ಸನ್ನು ಪಡೆಯಬಹುದು.

ಪೆಟ್ರೋಲ್, ಡೀಸೆಲ್ ಬೆಲೆ

ಪೆಟ್ರೋಲ್, ಡೀಸೆಲ್ ಬೆಲೆ

  • ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ.
  • ಪ್ರಾರಂಭದಲ್ಲಿ ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆ ಮಾಡುವ ಬಗ್ಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದ ತೈಲ ಬೆಲೆಗಳು ಏರುಗತಿಯಲ್ಲಿ ಸಾಗುತ್ತಿದ್ದು, ಜನರು ತತ್ತರಿಸಿ ಹೋಗುವಂತಾಗಿದೆ.
  • ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ(petrol, diesel price) ಎಷ್ಟೆಷ್ಟು ಏರಿಳಿತಯಾಗಿದೆ ಎಂಬುದನ್ನು ನೋಡೋಣ..