Short News

ಶಾಸಕ ಭೀಮಾನಾಯಕ್ ಸದ್ಯದಲ್ಲೇ ಕಾಂಗ್ರೆಸ್ ಸೇರ್ಪಡೆ

ಶಾಸಕ ಭೀಮಾನಾಯಕ್ ಸದ್ಯದಲ್ಲೇ ಕಾಂಗ್ರೆಸ್ ಸೇರ್ಪಡೆ

2013ರ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಅಲ್ಪಮತಗಳ ಗೆಲುವು ಸಾಧಿಸಿದ್ದವರು ಜೆಡಿ(ಎಸ್)ನ ಹಾಲಿ ಬಂಡಾಯ ಶಾಸಕ ಭೀಮಾನಾಯಕ್. ಅವರೀಗ ಕಾಂಗ್ರೆಸ್ ಸೇರುವ ಸನ್ನಾಹದಲ್ಲಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ, ಜೆಡಿಎಸ್‍ಗೆ ರಾಜೀನಾಮೆ ನೀಡುವುದು ಇವರ ಯೋಜನೆಯಾಗಿದೆ.

ಹಾಗೆ ನೋಡಿದರೆ ಕಳೆದ ಬಾರಿ ಭೀಮಾನಾಯಕ್ ಶಾಸಕರಾಗಿದ್ದೇ ಹಲವರನ್ನು ಅಚ್ಚರಿಗೆ ದೂಡಿತ್ತು. ಅಲ್ಲದೆ, ಇದೀಗ ಕಾಂಗ್ರೆಸ್ ಸೇರುತ್ತಿರುವುದರಿಂದ ಕೈ ಪಕ್ಷದಲ್ಲೇ ವಿರೋಧಿಗಳ ಗುಂಪನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಮೈಸೂರು-ಬೆಂಗಳೂರಿನ ವೊಡಾಫೋನ್ ಬಳಕೆದಾರರಿಗೆ ಸಂತಸದ ಸುದ್ದಿ..!

ಮೈಸೂರು-ಬೆಂಗಳೂರಿನ ವೊಡಾಫೋನ್ ಬಳಕೆದಾರರಿಗೆ ಸಂತಸದ ಸುದ್ದಿ..!

ವೊಡಾಫೋನ್ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 4G VoLTE ಯನ್ನು ನೀಡುವ ಯೋಜನೆಯನ್ನು ರೂಪಿಸಿದೆ. ಇದೇ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ 4G VoLTEಸೇವೆಯನ್ನು ವೊಡಾಫೋನ್ ಶುರು ಮಾಡಿದೆ. ಇದಲ್ಲದೇ ಮೈಸೂರು ಮತ್ತು ಬೆಳಗಾವಿಯಲ್ಲಿಯೂ 4G VoLTEಸೇವೆಯನ್ನು ಆರಂಭ ಮಾಡುತ್ತಿದೆ. ಸದ್ಯ ವೋಡಾಫೋನ್ 4G VoLTE ಸೇವೆಯೂ ಮುಂಬೈ, ದೆಹಲಿ, ಗುಜರಾತ್, ರಾಜಸ್ಥಾನ, ಪಶ್ವಿಮ ಬಂಗಾಳ, ಮಹಾರಾಷ್ಟ್ರ, ಗೋವಾ, ಹರಿಯಾಣ, ತಮಿಳುನಾಡು, ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಲಭ್ಯವಿದ್ದು, ಶೀಘ್ರವೇ ಪ್ಯಾನ್ ಇಂಡಿಯಾದಲ್ಲಿ ತನ್ನ ಸೇವೆಯನ್ನು ಆರಂಭಿಸಲು ವೊಡಾಫೋನ್ ಯೋಜನೆಯನ್ನು ಹಾಕಿಕೊಂಡಿದೆ.
ಅರಿಶಿನ ಮತ್ತು ಕಾಳುಮೆಣಸಿನ ಪುಡಿಗಳ ಮಿಶ್ರಣದ ಸೇವನೆಯ ಹತ್ತು ಪ್ರಯೋಜನಗಳು

ಅರಿಶಿನ ಮತ್ತು ಕಾಳುಮೆಣಸಿನ ಪುಡಿಗಳ ಮಿಶ್ರಣದ ಸೇವನೆಯ ಹತ್ತು ಪ್ರಯೋಜನಗಳು

ಸಾವಿರಾರು ವರ್ಷಗಳಿಂದ ಅರಿಶಿನವನ್ನು ಭಾರತದಲ್ಲಿ ಔಷಧೀಯ, ಸೌಂದರ್ಯಕಾರಕ, ಧಾರ್ಮಿಕ ಬಳಕೆಯಲ್ಲಿ ಬಳಸಲಾಗುತ್ತಾ ಬರಲಾಗಿದೆ. ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಅತ್ಯಂತ ಆರೋಗ್ಯಕಾರಕ ಪೋಷಕಾಂಶವೇ ಈ ಹೆಗ್ಗಳಿಕೆಗೆ ಮೂಲ. ಕಾಳುಮೆಣಸು ಸಹಾ ಇನ್ನೊಂದು ಔಷಧೀಯ ಸಾಮಾಗ್ರಿಯಾಗಿದ್ದು ಅಡುಗೆಯ ರುಚಿ ಹೆಚ್ಚಿಸುವ ಜೊತೆಗೇ ಆರೋಗ್ಯವನ್ನೂ ವೃದ್ಧಿಸುತ್ತದೆ. ಅರಿಶಿನದಲ್ಲಿ ಉರಿಯೂತ ನಿವಾರಕ, ಗುಣಪಡಿಸುವ, ಶಿಲೀಂಧ್ರನಿವಾರಕ ಹಾಗೂ ಬ್ಯಾಕ್ಟೀರಿಯಾನಿವಾರಕ ಗುಣಗಳಿವೆ. ಕಾಳುಮೆಣಸಿನ ಪುಡಿಯನ್ನು ಚೆನ್ನಾಗಿ ಒಳಗಿನ ಕಾಳುಮೆಣಸುಗಳನ್ನು ಕುಟ್ಟಿ ಪುಡಿಮಾಡಿ ತಯಾರಿಸಲಾಗುತ್ತದೆ.

ರಾಜಕೀಯದ ಬಗ್ಗೆ ರಾಕಿಂಗ್ ಸ್ಟಾರ್ ನೇರ ಮಾತು

ರಾಜಕೀಯದ ಬಗ್ಗೆ ರಾಕಿಂಗ್ ಸ್ಟಾರ್ ನೇರ ಮಾತು

ಯಶೋಮಾರ್ಗ ಸಂಸ್ಥೆ ಮೂಲಕ ಜನರ ಸೇವೆಗೆ ನಿಂತಿರುವ ರಾಕಿಂಗ್ ಸ್ಟಾರ್ ಯಶ್ ಈ ಚುನಾವಣೆಯಲ್ಲಿ ಯಾರ ಪರವಾಗಿ ಪ್ರಚಾರ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಸ್ಪರ್ಶ ರೇಖಾ ನಿರ್ಮಾಣದ ಡೆಮೋಪೀಸ್ ಚಿತ್ರ ದ ಮುಹೂರ್ತ ದ ಸಂದರ್ಭದಲ್ಲಿ ಭಾಗಿ ಆಗಿದ್ದ ಯಶ್ "ನಾನು ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರಕ್ಕೆ ಹೋಗಿತ್ತಿಲ್ಲ. ಪಕ್ಷದ ಅಭ್ಯರ್ಥಿಗಳು ಸ್ನೇಹಿತರಾಗಿರಬೇಕು, ಇಲ್ಲವೇ ನನಗೆ ಅಂತವರ ಬಗ್ಗೆ ಗೋತ್ತಿರಬೇಕು. ಆದರೆ, ರಾಜಕೀಯದಲ್ಲಿ ನನಗೆ ಯಾರೂ ಗೊತ್ತಿಲ್ಲ. ರಾಜಕೀಯದ ನಂಟು ಇಲ್ಲ.ಪಕ್ಷದ ಪ್ರಚಾರಕ್ಕೆ ಹೋಗುವುದು ನನಗೆ ವೈಯುಕ್ತಿಕವಾಗಿ ಇಷ್ಟವೇ ಇಲ್ಲ". ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.