Short News

ಅಭಿವೃದ್ಧಿ ನೀಲನಕ್ಷೆ ರೆಡಿ, ಅಧಿಕಾರ ಸಿಕ್ಕರೆ ಅನುಷ್ಠಾನ:ಎಚ್‌ಡಿಕೆ

ಅಭಿವೃದ್ಧಿ ನೀಲನಕ್ಷೆ ರೆಡಿ, ಅಧಿಕಾರ ಸಿಕ್ಕರೆ ಅನುಷ್ಠಾನ:ಎಚ್‌ಡಿಕೆ

ನಗರದಲ್ಲಿ ಆಯೋಜಿಸಿದ್ದ ಆಟೋ, ಲಾರಿ ಚಾಲಕರು ಮತ್ತು ಮಾಲೀಕರೊಂದಿಗೆ ನಡೆಸಿದ ಸಂವಾದದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಸ್‌ಡಿ ಕುಮಾರಸ್ವಾಮಿ ಅವರು ಭಾವುಕರಾಗಿ ಕಣ್ಣೀರು ಹಾಕಿದರು.

ಕುಮಾರಸ್ವಾಮಿ ಅವರ ನೆರವಿನಿಂದ ತಮ್ಮ ಮಗುವನ್ನು ಉಳಿಸಿಕೊಂಡ ದಂಪತಿಯೊಂದು ವೇದಿಕೆ ಮೇಲೆ ಬಂದು ಕುಮಾರಸ್ವಾಮಿ ಅವರ ಸಹಾಯಕ್ಕೆ ತುಂಬು ಹೃದಯದಿಂದ ಕೃತಜ್ಞತೆ ಅರ್ಪಿಸಿ ಕಾಲಿಗೆರಗಿದಾಗ ಗದ್ಗದಿತರಾದ ಕುಮಾರಸ್ವಾಮಿ ವೇದಿಕೆ ಮೇಲೆಯೇ ಕಣ್ಣೀರು ಹಾಕಿದರು.

ಅಣ್ಣಾವ್ರ ಜನುಮದಿನ, ವಿಶೇಷ ಶುಭಕೋರಿದ ಸಿನಿತಾರೆಯರು

ಅಣ್ಣಾವ್ರ ಜನುಮದಿನ, ವಿಶೇಷ ಶುಭಕೋರಿದ ಸಿನಿತಾರೆಯರು

ಡಾ.ರಾಜ್ ಕುಮಾರ್ ಅವರು ಎಲ್ಲರಿಗೂ ದೇವರು. ಆದ್ರೆ, ರಾಜ್ ಕುಮಾರ್ ಅವರಿಗೆ ಮಾತ್ರ ಅಭಿಮಾನಿಗಳೇ ದೇವರು. ಅಭಿಮಾನಿಗಳನ್ನ ದೇವರೆಂದು ಕರೆದು ಕೋಟ್ಯಾಂತರ ಜನರ ಹೃದಯ ಸಿಂಹಾಸನದಲ್ಲಿ ರಾಜನಾಗಿ ರಾಜಣ್ಣನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು  ವಿಭಿನ್ನವಾಗಿ ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ. ಅಭಿಮಾನಿಗಳು ಅಂದ್ರೆ,ಕೇವಲ ಜನಸಾಮಾನ್ಯರು ಮಾತ್ರವಲ್ಲ. ಸಿನಿಮಾ ಕಲಾವಿದರು ಕೂಡ ರಾಜ್ ಅವರ ಅಪ್ಪಟ ಅಭಿಮಾನಿಗಳು. ಅಣ್ಣಾವ್ರ ಹುಟ್ಟುಹಬ್ಬಕ್ಕೆ ಹಲವು ನಟ-ನಟಿಯರು ವಿಶ್ ಮಾಡಿದ್ದಾರೆ. ಜಗ್ಗೇಶ್, ಉಪೇಂದ್ರ, ರವಿಶಂಕರ್ ಗೌಡ, ಶಾನ್ವಿ ಶ್ರೀವಾಸ್ತವ ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ವರನಟನಿಗೆ ನಮನ ಸಲ್ಲಿಸಿದ್ದಾರೆ.
ಮೋದಿ ಯಾವಾಗ 15 ಲಕ್ಷ ನಮ್ಮ ಅಕೌಂಟ್ ಗೆ ಹಾಕ್ತಾರೆ ದಿನಾಂಕ ತಿಳಿಸಿ ಎಂದು RTIಗೆ ಅರ್ಜಿ ಹಾಕಿದ ವ್ಯಕ್ತಿ

ಮೋದಿ ಯಾವಾಗ 15 ಲಕ್ಷ ನಮ್ಮ ಅಕೌಂಟ್ ಗೆ ಹಾಕ್ತಾರೆ ದಿನಾಂಕ ತಿಳಿಸಿ ಎಂದು RTIಗೆ ಅರ್ಜಿ ಹಾಕಿದ ವ್ಯಕ್ತಿ

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಲೋಕಸಭೆ ಚುವಾವಣೆ ವೇಳ ಜನರ ಬ್ಯಾಂಕ್ ಖಾತೆಗೆ 15 ಲಕ್ಷ ರುಪಾಯಿ ಹಾಕುತ್ತೇನೆ ಎಂದು ಭರವಸೆ ನೀಡಿದ್ದರು. ಈ ಕುರಿತು ಆರ್ ಟಿಐ ಪ್ರಶ್ನೆ ಕೇಳಿ ಆರ್ ಟಿಐ ಕಾರ್ಯಕರ್ತ ಮೋಹನ್ ಕುಮಾರ್ ಶರ್ಮಾ ಅವರು ಮೋದಿ ಜನರ ಖಾತೆಗೆ ಹಣ ಜಮೆ ಮಾಡುವ ದಿನಾಂಕದ ಬಗ್ಗೆ ಮಾಹಿತಿ ಕೊಡಿ ಎಂದಿದ್ದಾರೆ. ಇದಕ್ಕೆ ಪ್ರಧಾನಮಂತ್ರಿಗಳ ಕಾರ್ಯಾಲಯ ಸೋಮವಾರ ಉತ್ತರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆ ಮಾಹಿತಿ ಹಕ್ಕು ಕಾಯ್ದೆ(ಆರ್ ಟಿಐ)ಯ ವ್ಯಾಖ್ಯಾನದ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗಕ್ಕೆ ಸ್ಪಷ್ಟಪಡಿಸಿದೆ.
ಜೆಸ್ಸಿಕಾ ಲಾಲ್‌ ಕೊಲೆಗಾರನಿಗೆ ಮತ್ತೆ ಮತ್ತೆ ಪರೋಲ್

ಜೆಸ್ಸಿಕಾ ಲಾಲ್‌ ಕೊಲೆಗಾರನಿಗೆ ಮತ್ತೆ ಮತ್ತೆ ಪರೋಲ್

ಜೆಸ್ಸಿಕಾ ಲಾಲ್‌ ಕೊಲೆ ಪ್ರಕರಣ ಸಂಬಂಧ ತಿಹಾರ್‌ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮನು ಶರ್ಮಾ 2009ರಿಂದ ಈವರೆಗೆ ಕನಿ‍ಷ್ಠ 7ಪರೋಲ್ ಪಡೆದಿದ್ದಾನೆ.  ಪ್ರತಿ ಬಾರಿ ಪರೋಲ್ ಪಡೆದು ಜೈಲಿನಿಂದ ಹೊರಬಂದಿರುವಾಗ ಶರ್ಮಾನ ಹೆಸರು ಹಲವು ಪ್ರಕರಣಗಳಲ್ಲಿ ತಳುಕು ಹಾಕಿಕೊಂಡಿದೆ. ಒಂದು ಸಲ ತಾಯಿಗೆ ತೀವ್ರ ಅನಾರೋಗ್ಯದ ಕಾರಣ ಒಟ್ಟಿ ಪರೋಲ್ ಪಡೆದುಕೊಂಡಿದ್ದ ಆತ ಬಳಿಕ ನೈಟ್‌ಕ್ಲಬ್‌ ಒಂದರಲ್ಲಿ ಪತ್ತೆಯಾಗಿದ್ದ. ಇದಾದ ಬಳಿಕ ಹಲವು ಬಾರಿ ಪರೋಲ್ ಪಡೆದಿದ್ದಾನೆ. ಅಲ್ಲದೆ ಕಳೆದ ಅಕ್ಟೋಬರ್‌ನಲ್ಲಿ ಶರ್ಮಾನನ್ನು ತೆರೆದ ಜೈಲಿಗೆ ಕಳುಹಿಸಲಾಗಿದ್ದು, ಅಲ್ಲಿನ ಕೈದಿಗಳು ಬೆಳಗ್ಗೆ ಹೊರಹೋಗಿ ಸಂಜೆ ವಾಪಸ್ ಬರಬಹುದಾಗಿದೆ.