Short News

ಕೆಐಎಎಲ್ ಮಾರ್ಗದಲ್ಲಿ ಇನ್ನು ಮುಂದೆ ಎರಡೂ ಬದಿ ಟೋಲ್ ಕಟ್ಟಬೇಕು!

ಕೆಐಎಎಲ್ ಮಾರ್ಗದಲ್ಲಿ ಇನ್ನು ಮುಂದೆ ಎರಡೂ ಬದಿ ಟೋಲ್ ಕಟ್ಟಬೇಕು!

ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಗೆ ಹೋಗುವ ಸಾರ್ವಜನಿಕರು ಇನ್ನುಮುಂದೆ ಸಾದಹಳ್ಳಿ ಟೋಲ್ ನಲ್ಲಿ ಎರಡು ಬಾರಿ ಟೋಲ್ ಕಟ್ಟಬೇಕಾಗುತ್ತದೆ. ಇದುವರೆಗೆ ಸಾದಹಳ್ಳಿ ಟೋಲ್ ಬಳಿ ಏರ್ ಪೋರ್ಟ್ ಗೆ ಹೋಗುವ ವೇಳೆ ನೇರ ಸಾಗಿ, ಬರುವಾಗ ಅಪ್ ಅಂಡ್ ಡೌನ್ ಮಾರ್ಗದ ಹಣ ಪಾವತಿ ಮಾಡುವ ವ್ಯವಸ್ಥೆ ಇತ್ತು. ಅದು 24 ಗಂಟೆಯ ವ್ಯಾಲಿಡಿಟಿಯನ್ನು ಹೊಂದಿರುತ್ತಿತ್ತು. ಆದರೆ, ಏರ್ ಪೋರ್ಟ್ ಗೆ ಪರ್ಯಾಯ ಮಾರ್ಗ ಆರಂಭಗೊಂಡಿರುವ ಹಿನ್ನೆಯೆಲ್ಲಿ ಟೋಲ್ ಪ್ಲಾಜಾಗೆ ನಷ್ಟ ಉಂಟಾಗುತ್ತಿದೆ. ಹೀಗಾಗಿ ಎರಡೂ ಬದಿಯೂ ಟೋಲ್ ದರ ಪಡೆಯುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.
ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ: ತೀರ್ಪು ಕಾಯ್ದಿರಿಸಿ ಸ್ಪೀಕರ್

ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ: ತೀರ್ಪು ಕಾಯ್ದಿರಿಸಿ ಸ್ಪೀಕರ್

ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು,ಸ್ಪೀಕರ್‌ ಕೆ.ಬಿ.ಕೋಳಿವಾಡ ತೀರ್ಪು ಕಾಯ್ದಿರಿಸಿದ್ದಾರೆ. ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದ 7ಮಂದಿ ಶಾಸಕರನ್ನು ರಾಜ್ಯ ವಿಧಾನಸಭೆಯ (ಪಕ್ಷಾಂತರ ಆಧಾರದ ಮೇಲೆ ಸದಸ್ಯರ ಅನರ್ಹತೆ)1986 ನಿಯಮದನ್ವಯ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಜೆಡಿಎಸ್‌ ಪಕ್ಷ ದೂರು ನೀಡಿತ್ತು. ಆದರೆ 2 ವರ್ಷ ಕಳೆದರೂ ಸ್ಪೀಕರ್‌ ತೀರ್ಮಾನ ಪ್ರಕಟಿಸಿರಲಿಲ್ಲ. ಈ ಬಗ್ಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಕ್ಷಣ ವಿಚಾರಣೆ ನಡೆಸದಿದ್ದರೆ ನ್ಯಾಯ ಕೇಳಿ ಹೈಕೋರ್ಟ್‌ ಮೆಟ್ಟಿಲೇರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಬಹುಕೋಟಿ ಮೇವು ಹಗರಣದ ನಾಲ್ಕನೇ ಪ್ರಕರಣ: ಲಾಲೂ ಯಾದವ್ ದೋಷಿ ಎಂದು ತೀರ್ಪು

ಬಹುಕೋಟಿ ಮೇವು ಹಗರಣದ ನಾಲ್ಕನೇ ಪ್ರಕರಣ: ಲಾಲೂ ಯಾದವ್ ದೋಷಿ ಎಂದು ತೀರ್ಪು

ಬಹುಕೋಟಿ ಮೇವು ಹಗರಣದ ನಾಲ್ಕನೇ ಪ್ರಕರಣದಲ್ಲೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್​ ಯಾದವ್​ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ​ ತೀರ್ಪು ನೀಡಿದೆ. ಜಾರ್ಖಂಡ್ ನ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯದಿಂದ ಈ ತೀರ್ಪು ಪ್ರಕಟವಾಗಿದ್ದು, ಲಾಲೂ ಜೊತೆಗೆ ಅರುಣ್ ಸಿಂಹ, ಅಜಿತ್ ವರ್ಮಾ ದೋಷಿ ಎಂದು ನ್ಯಾಯಾಲಯ ಹೇಳಿದೆ. ಈಗಾಗಲೇ ಆರ್ ಜೆಡಿ ಮುಖಂಡ ಲಾಲೂ ಅವರನ್ನು ಮೇವು ಹಗರಣದ ಮೂರು ಆರೋಪಗಳಲ್ಲಿ ದೋಷಿ ಎಂದು ಪರಿಗಣಿಸಿರುವ ಸಿಬಿಐ ವಿಶೇಷ ನ್ಯಾಯಾಲಯ, ಮೂರು ಪ್ರಕರಣಗಳಿಂದ ಒಟ್ಟು 13.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ರಾಹುಲ್ ಗಾಂಧಿ ಸ್ವಾಗತಕ್ಕೆ ಕರಾವಳಿಯಲ್ಲಿ ಭರ್ಜರಿ ಸಿದ್ದತೆ

ರಾಹುಲ್ ಗಾಂಧಿ ಸ್ವಾಗತಕ್ಕೆ ಕರಾವಳಿಯಲ್ಲಿ ಭರ್ಜರಿ ಸಿದ್ದತೆ

ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳ ಭರಾಟೆ ಕರಾವಳಿಯಲ್ಲಿ ಜೋರಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರವಾಸ, ಬಿಜೆಪಿ ಸಂಸದರ ಜನರಕ್ಷಾ ಯಾತ್ರೆ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಬಳಿಕ ಇದೀಗ ಕಾಂಗ್ರೆಸ್ ನವರು ಪ್ರಚಾರಕ್ಕೆ ಧುಮುಕಿದ್ದಾರೆ. ರಾಜ್ಯ ಕರಾವಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿರುವುದು ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ. ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ರಾಜ್ಯದ ಕರಾವಳಿಗೆ ಭೇಟಿ ನೀಡುತ್ತಿದ್ದಾರೆ.