Short News

ರಿಪೋರ್ಟ್: ಅಂಬಾನಿಗಿರೋ ದುಡ್ಡಲ್ಲಿ 20 ದಿನ ದೇಶವನ್ನೇ ನಡೆಸಬಹುದಂತೆರೀ!

ರಿಪೋರ್ಟ್: ಅಂಬಾನಿಗಿರೋ ದುಡ್ಡಲ್ಲಿ 20 ದಿನ ದೇಶವನ್ನೇ ನಡೆಸಬಹುದಂತೆರೀ!

ವಿಶ್ವದ 49ದೇಶಗಳ 49ಸಿರಿವಂತರ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಅವರಿಗಿರುವ ಸಂಪತ್ತಿನಲ್ಲಿ ಎಷ್ಟು ದಿನ ದೇಶದ ಆಡಳಿತವನ್ನು ನಡೆಸಬಹುದೆನ್ನುವ ರಾಬಿನ್ ಹುಡ್ ಇಂಡೆಕ್ಸ್-2018ನ್ನು ಬಿಡುಗಡೆ ಮಾಡಲಾಗಿದೆ. ವರದಿಯನ್ವಯ ಭಾರತದ ಕುಬೇರ, ಶತಕೋಟಿ ಸರದಾರ ಮುಕೇಶ್ ಅಂಬಾನಿ, ಇಪ್ಪತ್ತು ದಿನ ದೇಶವನ್ನು ತನ್ನ ದುಡ್ಡಿನಿಂದ ನಡೆಸಬಲ್ಲರು. ಆಯಾಯ ದೇಶಗಳ ಜನಸಂಖ್ಯೆ, ಆಡಳಿತಾತ್ಮಕ ವಿಷಯಗಳು, ಸರಕಾರ ನಡೆಸಲು ತಗಲುವ ದೈನಂದಿನ ಖರ್ಚುವೆಚ್ಚಗಳನ್ನು ಕ್ರೋಢೀಕರಿಸಿ, ಆ ದೇಶದ ಸಿರಿವಂತ ವ್ಯಕ್ತಿಯ ಒಟ್ಟು ಆಸ್ತಿ ಲೆಕ್ಕಾಹಾಕಿ, ಈ ಪಟ್ಟಿಯನ್ನು ಬ್ಲೂಮ್ ಬರ್ಗ್ ಸಿದ್ದಪಡಿಸಿದೆ.
ಪೈಲ್ವಾನ್ ನ್ ಗಾಗಿ ಥೈಲ್ಯಾಂಡ್ ಗೆ ಹೊರಟ ಕಿಚ್ಚ

ಪೈಲ್ವಾನ್ ನ್ ಗಾಗಿ ಥೈಲ್ಯಾಂಡ್ ಗೆ ಹೊರಟ ಕಿಚ್ಚ

ಕಿಚ್ಚ ಸುದೀಪ್ ತಮ್ಮ ಮುಂದಿನ ಚಿತ್ರದ ತಯಾರಿಗಾಗಿ ಥೈಲ್ಯಾಂಡ್ ಗೆ ಹಾರಲಿದ್ದಾರೆ. ತಮ್ಮ ಟ್ರೈನರ್ ಜೀತ್ ದೇವಯ್ಯ ಅವರ ಜೊತೆ ಥೈಲ್ಯಾಂಡ್ ನ ಹಳ್ಳಿಯಲ್ಲಿ ಬಾಕ್ಸಿಂಗ್ ಕಲಿಯಲಿದ್ದಾರೆ. ಈಗಾಗಲೇ ವರ್ಕ್ ಔಟ್ ಶುರು ಮಾಡಿದ ನಂತರ ವಿಭಿನ್ನವಾಗಿ ಕಾಣಿಸುತ್ತಿರುವ ಕಿಚ್ಚ ಬಾಕ್ಸರ್ ಲುಕ್ ನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕೃಷ್ಣ ಹಾಗೂ ಸುದೀಪ್ ಕಾಂಬಿನೇಶನ್ ನಲ್ಲಿ ಈಗಾಗಲೇ ಹಿಟ್ ಚಿತ್ರ ಪ್ರೇಕ್ಷಕರಿಗೆ ಸಿಕ್ಕಿದ್ದು ಹೆಬ್ಬುಲಿ ಸಿನಿಮಾಗಾಗಿಯೂ ಸುದೀಪ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಅದೇ ರೀತಿಯಲ್ಲಿ ಈ ಬಾರಿಯೂ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್

ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್

ನಲಪಾಡ್ ಅಹ್ಮದ್ ಹ್ಯಾರೀಸ್ -ಶಾಂತಿನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ. ಸುಮಾರು ಎರಡೂವರೆ ಲಕ್ಷ ಜನರ ಪ್ರತಿನಿಧಿ. ತಮ್ಮ ಪುತ್ರ ಮೊಹಮ್ಮದ್ ಹ್ಯಾರೀಸ್ ನಲಪಾಡ್ ಅವರ ಮೇಲೆ ತುಂಬಾ ಭರವಸೆ ಇಟ್ಟುಕೊಂಡವರು. ಕಾಂಗ್ರೆಸ್ ಪಕ್ಷದ ಯುವ ನಾಯಕರಾಗುವ ಹೊತ್ತಲ್ಲೇ ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ಆರೋಪಿಯಾಗಿ ಬಂಧಿತರಾಗಿದ್ದಾರೆ.

ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ ಎನ್.ಎ ಹ್ಯಾರೀಸ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಸರಕಾರಿ ಶಾಲೆಗಳ ಕಟ್ಟಡ ನಿರ್ಮಾಣ, ವ್ಯಾಯಾಮ ಶಾಲೆ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ.

ಶಿವಣ್ಣನ ಸಿನಿಮಾ ಪ್ರೀತಿಗೆ 32 ವರ್ಷದ ಸಂಭ್ರಮ

ಶಿವಣ್ಣನ ಸಿನಿಮಾ ಪ್ರೀತಿಗೆ 32 ವರ್ಷದ ಸಂಭ್ರಮ

ಕನ್ನಡ ಸಿನಿಮಾರಂಗದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಇದೇ ಶುಕ್ರವಾರ ಶಿವರಾಜ್ ಕುಮಾರ್ ಅಭಿನಯದ ಭಾರಿ ನಿರೀಕ್ಷೆ ಮೂಡಿಸಿರುವ ಟಗರು ಚಿತ್ರ ಬಿಡುಗಡೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಕನ್ನಡ ಸಿನಿಮಾರಂಗಕ್ಕೆ ಬಂದು ಇಂದಿಗೆ 32 ವರ್ಷಗಳು ಪೂರೈಸುತ್ತಿದ್ದಾರೆ. ಇಂದಿಗೂ ಕೂಡ ಚಿರ ಯುವಕನಂತಿರುವ ಶಿವರಾಜ್ ಕುಮಾರ್ ಅಭಿನಯದ ಇಲ್ಲಿಯರೆಗೂ 118 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆನಂದ್ ಸಿನಿಮಾ ಮಹೂರ್ತ ಫೆಬ್ರವರಿ 19-1986ನಲ್ಲಿ ನಡೆದಿತ್ತು. ಅಂದಿನಿಂದ ಇಂದಿನ ವರೆಗೂ ಶಿವರಾಜ್ ಕುಮಾರ್ ಅಭಿಮಾನಿಗಳನ್ನ ರಂಜಿಸುತ್ತಲೇ ಇದ್ದಾರೆ.