Short News

ದೆಹಲಿಯಲ್ಲಿ ಸೆರೆ ಸಿಕ್ಕ ಇಂಡಿಯನ್ ಮುಜಾಹಿದೀನ್ ಉಗ್ರ

ದೆಹಲಿಯಲ್ಲಿ ಸೆರೆ ಸಿಕ್ಕ ಇಂಡಿಯನ್ ಮುಜಾಹಿದೀನ್ ಉಗ್ರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದಕನನ್ನು ಬಂಧಿಸಲಾಗಿದೆ. 5ಕ್ಕೂ ಹೆಚ್ಚ ಸ್ಫೋಟ ಪ್ರಕರಣದಲ್ಲಿ ಉಗ್ರ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.

ದೆಹಲಿ ಪೊಲೀಸ್ ವಿಶೇಷ ವಿಭಾಗದ ತಂಡ ಬುಧವಾರ ದೆಹಲಿಯಲ್ಲಿ ಆರಿಜ್ ಖಾನ್ ಅಲಿಯಾಸ್ ಜುನೈದ್ ಎಂಬ ಭಯೋತ್ಪಾದಕನನ್ನು ಬಂಧಿಸಿದೆ.

ಜಯನೈದ್ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಸದಸ್ಯನಾಗಿದ್ದಾನೆ. 5ಕ್ಕೂ ಹೆಚ್ಚು ಸ್ಫೋಟ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.

ಜಿಯೋ ವಿರುದ್ಧ ಬೆಸ್ಟ್ ಆಫರ್ ಕೊಟ್ಟ ಏರ್ ಟೆಲ್

ಜಿಯೋ ವಿರುದ್ಧ ಬೆಸ್ಟ್ ಆಫರ್ ಕೊಟ್ಟ ಏರ್ ಟೆಲ್

ಏರ್ ಟೆಲ್ ಬಳಕೆದಾರರು ಈ ಪ್ಲಾನ್ ಅನ್ನು ಮೈ ಏರ್ ಟೆಲ್ ಆಪ್ ಮೂಲಕವೂ ಪಡೆದುಕೊಳ್ಳಬಹುದಾಗಿದೆ. ಒಂದು ದಿನದಕ್ಕಾಗಿ ಅಗತ್ಯವಾಗಿ ಯಾವುದಾದರು ಸೇವೆ ಬೇಕಾಗಿದ್ದಲ್ಲಿ ಈ ಪ್ಲಾನ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ಏರ್ ಟೆಲ್ ಅನ್ ಲಿಮಿಟೆಡ್ ಕರೆ ಮತ್ತು ಉಚಿರ ರೋಮಿಂಗ್ ಕರೆಗಳು ಮತ್ತು 100SMS ಮತ್ತು 200 MB 3G/4G ಡೇಟಾವನ್ನು ಒಂದು ದಿನದ ವ್ಯಾಲಿಡಿಟಿಗೆ ರೂ.19ಕ್ಕೆ ನೀಡುತ್ತಿದೆ. ಇದೇ ಮಾದರಿಯಲ್ಲಿ ಜಿಯೋ, 20 SMS, 0.15GB ಡೇಟಾವನ್ನು ಮಾತ್ರವೇ ನೀಡುತ್ತಿದೆ.
ಹೊಸ ಆವೃತ್ತಿಯೊಂದಿಗೆ ನೋಕಿಯಾ 6 ಸ್ಮಾರ್ಟ್ ಫೋನ್ ಲಾಂಚ್

ಹೊಸ ಆವೃತ್ತಿಯೊಂದಿಗೆ ನೋಕಿಯಾ 6 ಸ್ಮಾರ್ಟ್ ಫೋನ್ ಲಾಂಚ್

ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ನೋಕಿಯಾ 6 ಸ್ಮಾರ್ಟ್ ಫೋನಿನ ನೂತನ ಆವೃತ್ತಿ ಬಿಡುಗಡೆಯಾಗಿದ್ದು, ರೂ.16,999ಕ್ಕೆ ದೊರೆಯುತ್ತಿದೆ. ಈ ಸ್ಮಾರ್ಟ್ ಫೋನ್ ಹೊಸದಾಗಿ 4GB RAM ಮತ್ತು 64GB ಇಂಟರ್ ನಲ್ ಮೆಮೊರಿಯೊಂದಿಗೆ ಕಾಣಿಸಿಕೊಂಡಿದ್ದು, ಫೆಬ್ರವರಿ 20ನೇ ತಾರೀಖಿನಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ಅದಲ್ಲದೇ ಎಕ್ಸ್ ಕ್ಲೂಸಿವ್ ಆಗಿ ಫ್ಲಿಪ್ ಕಾರ್ಟ್ ನಲ್ಲಿ ಮಾತ್ರವೇ ಮಾರಾಟವಾಗುತ್ತಿದೆ. ಈ ಹಿಂದೆ ನೋಕಿಯಾ 6 ಅಮೆಜಾನ್ ನಲ್ಲಿ ಕಾಣಿಸಿಕೊಂಡಿತ್ತು, ನೂತನ ಆವೃತ್ತಿ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ.
ಬಿಜೆಪಿ ಶಾಸಕ ಕಲ್ಯಾಣ್ ಸಿಂಗ್ ನಿಧನ

ಬಿಜೆಪಿ ಶಾಸಕ ಕಲ್ಯಾಣ್ ಸಿಂಗ್ ನಿಧನ

ರಾಜಸ್ಥಾನದ ನತದ್ವಾರದ ಬಿಜೆಪಿ ಶಾಸಕ ಕಲ್ಯಾಣ್ ಸಿಂಗ್ ಚೌಹಾಣ್(58) ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉದಯಪುರದ ಅಮೆರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು(ಫೆ.21) ಬೆಳಿಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ.

2013 ರ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ನತದ್ವಾರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಗೆಲುವು ಸಾಧಿಸಿದ್ದರು.