Short News

ದೆಹಲಿಯಲ್ಲಿ ಸೆರೆ ಸಿಕ್ಕ ಇಂಡಿಯನ್ ಮುಜಾಹಿದೀನ್ ಉಗ್ರ

ದೆಹಲಿಯಲ್ಲಿ ಸೆರೆ ಸಿಕ್ಕ ಇಂಡಿಯನ್ ಮುಜಾಹಿದೀನ್ ಉಗ್ರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದಕನನ್ನು ಬಂಧಿಸಲಾಗಿದೆ. 5ಕ್ಕೂ ಹೆಚ್ಚು ಸ್ಫೋಟ ಪ್ರಕರಣದಲ್ಲಿ ಉಗ್ರ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.2008ರಿಂದ ಈತ ತಲೆಮರೆಸಿಕೊಂಡಿದ್ದ. ದೆಹಲಿ ಪೊಲೀಸ್ ವಿಶೇಷ ವಿಭಾಗದ ತಂಡ ಬುಧವಾರ ದೆಹಲಿಯಲ್ಲಿ ಆರಿಜ್ ಖಾನ್ ಅಲಿಯಾಸ್ ಜುನೈದ್ ಎಂಬ ಭಯೋತ್ಪಾದಕನನ್ನು ಬಂಧಿಸಿದೆ. ಜುನೈದ್‌ಗಾಗಿ ಎನ್‌ಐಎ ಮತ್ತು ದೆಹಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಜುನೈದ್ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಸದಸ್ಯನಾಗಿದ್ದಾನೆ. 5ಕ್ಕೂ ಹೆಚ್ಚು ಸ್ಫೋಟ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ.
ಎಂಜಲಿನ ಗ್ಲಾಸು ತೊಳೆಯುತ್ತಿದ್ದ ಅಂದಿನ ಅಸಾರಾಂ, ಈಗ ಮೈ ತುಂಬಾ ಹಗರಣ ಹೊತ್ತಿರುವ ಸ್ವಯಂ ಘೋಷಿತ ದೇವ ಮಾನವ!

ಎಂಜಲಿನ ಗ್ಲಾಸು ತೊಳೆಯುತ್ತಿದ್ದ ಅಂದಿನ ಅಸಾರಾಂ, ಈಗ ಮೈ ತುಂಬಾ ಹಗರಣ ಹೊತ್ತಿರುವ ಸ್ವಯಂ ಘೋಷಿತ ದೇವ ಮಾನವ!

ಚಹಾದಂಗಡಿಯಲ್ಲಿ ಗ್ಲಾಸು ತೊಳೆಯುತ್ತಿದ್ದ ಅಸಾರಾಂ 1971ರಲ್ಲಿ ಮೊದಲ ಬಾರಿಗೆ ಧಾರ್ಮಿಕ ಬೋಧನೆ ಆರಂಭಿಸಿದ್ದ ಬಳಿಕ ದೇಶ,ವಿದೇಶಗಳಲ್ಲಿ ಆಶ್ರಮಗಳನ್ನು ಸ್ಥಾಪಿಸಿ 2008ರ ಹೊತ್ತಿಗೆ 5000ಕೋಟಿ ರೂ ಒಡೆಯನಾದ. ಸದ್ಯ ಜೋಧಪುರದ ಮಾಣಾಯಿ ಆಶ್ರಮದಲ್ಲಿ 16ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿದ ಆರೋಪವಿದೆ. 2008ರಲ್ಲಿ ಸಾಬರಮತಿ ದಡದಲ್ಲಿ ಅಸಾರಾಂ ಆಶ್ರಮದ ಸಮೀಪ ಇಬ್ಬರು ಅಪ್ರಾಪ್ತ ಬಾಲಕರ ಪ್ರಮುಖ ಅಂಗಾಂಗವಿಲ್ಲದ ಮೃತದೇಹ ಪತ್ತೆಯಾಗಿತ್ತು. ಅಸಾರಾಂ ಕೊಲೆ ಮಾಡಿದ್ದಾಗಿ ಆರೋಪವಿತ್ತು. ಈ ಸಂಬಂಧ 2009ರಲ್ಲಿ ಈತನ 7ಅನುಯಾಯಿಗಳ ವಿರುದ್ಧ ಪ್ರಕರಣ ದಾಖಲಾಗಿ,2012ರಲ್ಲಿ ಚಾರ್ಜ್ ಶೀಟ್ ಆಗಿತ್ತು. ಇದಲ್ಲದೆ ಭೂಕಬಳಿಕೆ ಆರೋಪವಿದೆ.
ಪರೇಶ್ ಮೇಸ್ತ ಹತ್ಯೆ ಪ್ರಕರಣ : ಸಿಬಿಐನಿಂದ ಎಫ್‌ಐಆರ್

ಪರೇಶ್ ಮೇಸ್ತ ಹತ್ಯೆ ಪ್ರಕರಣ : ಸಿಬಿಐನಿಂದ ಎಫ್‌ಐಆರ್

ಪರೇಶ್ ಮೇಸ್ತ ಕೊಲೆ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ಸಿಬಿಐಗೆ ವಹಿಸಿತ್ತು. ನಾಲ್ಕು ತಿಂಗಳ ಬಳಿಕ ಸಿಬಿಐ ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದೆ. 2017ರ ಡಿಸೆಂಬರ್‌ನಲ್ಲಿ ಪರೇಶ್ ಮೇಸ್ತ ಹತ್ಯೆ ನಡೆದಿತ್ತು. 2017ರ ಡಿಸೆಂಬರ್‌ 6 ರಂದು ಹೊನ್ನಾವರದಿಂದ 19 ವರ್ಷದ ಪರೇಶ್ ಮೇಸ್ತ ನಾಪತ್ತೆಯಾಗಿದ್ದ. ಎರಡು ದಿನಗಳ ಬಳಿಕ ಆತನ ಶವ ಕೆರೆಯಲ್ಲಿ ಪತ್ತೆಯಾಗಿತ್ತು. ಮೇಸ್ತ ತಂದೆ ಕಮಲಾಕೆ ಮೇಸ್ತ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ 5 ಜನರ ವಿರುದ್ಧ ದೂರು ದಾಖಲಿಸಿದ್ದರು. ಪರೇಶ್ ಮೇಸ್ತ ಸಾವು ಖಂಡಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು.
ವಾಹನಗಳಲ್ಲಿ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ: ಒಂದು ವರ್ಷ ಅವಕಾಶ

ವಾಹನಗಳಲ್ಲಿ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ: ಒಂದು ವರ್ಷ ಅವಕಾಶ

ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಪ್ಯಾಸೆಂಜರ್ ವಾಹನಗಳಲ್ಲಿ ಟ್ರ್ಯಾಕಿಂಗ್ ಯುನಿಟ್ ಮತ್ತು ಪ್ಯಾನಿಕ್ ಬಟನ್ ಕಡ್ಡಾಯ ಆದೇಶವನ್ನು 2019ರ ಏಪ್ರಿಲ್ 1ರವರೆಗೆ ಮುಂದೂಡಿದೆ. ಈ ನಿರ್ಧಾರದಿಂದ ಪ್ಯಾಸೆಂಜರ್ ಟ್ಯಾಕ್ಸಿ ಮಾಲೀಕರು, ರಾಜ್ಯ ರಸ್ತೆ ಸಾರಿಗೆ ನಿಗಮಗಳು ನಿರಾಳವಾಗಿದೆ. ನಿರ್ಭಯಾ ಪ್ರಕರಣ ನಂತರ ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 23ಸೀಟಿಗಿಂತ ಅಧಿಕವಿರುವ ಬಸ್ ಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯ ಆದೇಶವನ್ನು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಮೊಟ್ಟ ಮೊದಲು ಮಾಡಿತ್ತು.