Short News

9 ಗಜದ ಸೀರೆಯುಟ್ಟು ಸ್ಕೈ ಡೈವಿಂಗ್ ಮಾಡಿದ ದಿಟ್ಟ ಮಹಿಳೆ ಶೀತಲ್‌ ಮಹಾಜನ್

9 ಗಜದ ಸೀರೆಯುಟ್ಟು ಸ್ಕೈ ಡೈವಿಂಗ್ ಮಾಡಿದ ದಿಟ್ಟ ಮಹಿಳೆ ಶೀತಲ್‌ ಮಹಾಜನ್

ಭಾರತದ ಸ್ಕೈಡೈವಿಂಗ್ ಪಟು, ಶೀತಲ್‌ ಮಹಾಜನ್ ಥಾಯ್ಲೆಂಡ್‌ನ ಪಟ್ಟಾಯದಲ್ಲಿರುವ ಥಾಯ್ ಸ್ಕೈಡೈವಿಂಗ್ ಕೇಂದ್ರದಲ್ಲಿ ಭಾನುವಾರ ಮಹಾರಾಷ್ಟ್ರದ ಸಾಂಪ್ರದಾಯಿಕ ನೌವಾರಿ ಸೀರೆ (ಒಂಭತ್ತು ಗಜ) ಉಟ್ಟು, 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವಿಂಗ್ ಮಾಡಿದ್ದಾರೆ. ‘ಏನಾದರೂ ವಿಭಿನ್ನವಾದುದನ್ನು ಮಾಡಲು ಬಯಸಿದ್ದೆ. ಅದನ್ನು ನೌವಾರಿ ಸೀರೆ ಉಟ್ಟು ಸ್ಕೈಡೈವಿಂಗ್ ಮಾಡುವ ಮೂಲಕ ಸಾಧಿಸಿದ್ದೇನೆ. ಇದು ಬರಲಿರುವ ವಿಶ್ವ ಮಹಿಳಾ ದಿನಕ್ಕೆ ನನ್ನ ಕಾಣಿಕೆ' ಎಂದು 37 ವರ್ಷದ ಶೀತಲ್ ತಮ್ಮ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.‌
7ನೇ ತರಗತಿ ವಿದ್ಯಾರ್ಥಿಯಿಂದ ಶಿಕ್ಷಕಿ ಮತ್ತಾಕೆ ಮಗಳ ಮೇಲೆ ರೇಪ್ ಬೆದರಿಕೆ

7ನೇ ತರಗತಿ ವಿದ್ಯಾರ್ಥಿಯಿಂದ ಶಿಕ್ಷಕಿ ಮತ್ತಾಕೆ ಮಗಳ ಮೇಲೆ ರೇಪ್ ಬೆದರಿಕೆ

ಗುರುಗ್ರಾಮ್‌ನ ಖಾಸಗಿ ಶಾಲೆಯ ಓರ್ವ ವಿದ್ಯಾರ್ಥಿ ತನ್ನ ಶಿಕ್ಷಕಿ ಮತ್ತು ಆಕೆಯ ಮಗಳಿಗೆ ಅತ್ಯಾಚಾರದ ಬೆದರಿಕೆಯೊಡ್ಡಿದ್ದಾನೆ. 7ನೇ ತರಗತಿಯಲ್ಲಿ ಓದುತ್ತಿರುವ ಹುಡುಗ ಇಂಟರ್ನೆಟ್ ಪೋಸ್ಟ್ ಮೂಲಕ ಹೀಗೆ ಬೆದರಿಕೆಯೊಡ್ಡಿದ್ದು, ಬಾಲಕಿ ಹುಡುಗ ಕ್ಲಾಸ್‌ಮೆಟ್ ಆಗಿದ್ದಾಳೆ. ಈ ಪ್ರಕರಣದ ನಂತರವೂ ಶಿಕ್ಷಕಿ ಶಾಲೆಗೆ ಬರುತ್ತಿದ್ದು, ಅವರ ಮಗಳು ಮಾತ್ರ ಹೆದರಿಕೊಂಡು ಶಾಲೆಗೆ ಬರುವುದನ್ನೇ ನಿಲ್ಲಿಸಿದ್ದಾಳೆ. ಹಾಗೇ ಇದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ತನ್ನ ಶಿಕ್ಷಕಿಗೆ ಕ್ಯಾಂಡಲ್ ಲೈಟ್ ಡಿನ್ನರ್ ಗೆ ಬರುವಂತೆ ಆಹ್ವಾನ ನೀಡಿದ್ದಾನೆ. ಈ ಕುರಿತಂತೆ ಮಕ್ಕಳಿಕೆ ಕೌನ್ಸಿಲಿಂಗ್ ನಡೆಸಲಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ನೀರವ್ 6 ಫ್ಲ್ಯಾಟ್ ಬೆಲೆ ಜಸ್ಟ್ 900ಕೋಟಿ!

ನೀರವ್ 6 ಫ್ಲ್ಯಾಟ್ ಬೆಲೆ ಜಸ್ಟ್ 900ಕೋಟಿ!

ಮುಂಬೈನ ವರ್ಲಿಯಲ್ಲಿರುವ ಸಮುದ್ರ ಮಹಲ್ ನಲ್ಲಿ ಸಮುದ್ರಾಭಿಮುಖವಾಗಿರುವ 6 ಫ್ಲ್ಯಾಟ್ ಗಳು ನೀರವ್ ಮೋದಿ ಮತ್ತು ಅವರ ಪತ್ನಿ ಅಮಿ ಮೋದಿ ಹೆಸರಿನಲ್ಲಿದೆ. ಈ ಪ್ರತೀ ಫ್ಲ್ಯಾಟ್ ಗಳ ಬೆಲೆ ತಲಾ 150 ಕೋಟಿ ರೂಪಾಯಿ ಎಂದು ಐಟಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ಜ್ಯುವೆಲ್ಲರಿ ಉದ್ಯಮಿ ನೀರವ್ ಮೋದಿಗೆ ಸೇರಿದ 29 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಇದರಲ್ಲಿ ಕೇವಲ ಈ 6 ಫ್ಲ್ಯಾಟ್ ಗಳ ಬೆಲೆಯೇ 900 ಕೋಟಿ ರೂಪಾಯಿ ದಾಟುತ್ತದೆ ಎಂದು ಐಟಿ ಅಂದಾಜಿಸಿದೆ.

'ಕಾಂಗ್ರೆಸ್ ದೀಪ ರಾಜ್ಯವನ್ನೇ ಸುಡುತ್ತಿದೆ':

'ಕಾಂಗ್ರೆಸ್ ದೀಪ ರಾಜ್ಯವನ್ನೇ ಸುಡುತ್ತಿದೆ':

ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ ರಾಜ್ಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪರಸ್ಪರ ಕೆಸರೆರಚಾಟ ಮುಂದುವರಿದಿದೆ.

ಪಿಎನ್ ಬಿ ಹಗರಣವನ್ನಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಬೆಳಿಗ್ಗೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.