Short News

ಮಾಜಿ ಕಾರ್ಪೊರೇಟರ್ ಕದಿರೇಶ್ ಹತ್ಯೆ, ಇಬ್ಬರು ಶರಣು

ಮಾಜಿ ಕಾರ್ಪೊರೇಟರ್ ಕದಿರೇಶ್ ಹತ್ಯೆ, ಇಬ್ಬರು ಶರಣು

ಮಾಜಿ ಕಾರ್ಪೊರೇಟರ್ ಕದಿರೇಶ್ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಕೋರ್ಟ್ ಆರೋಪಿಗಳನ್ನು 10ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.

ಹತ್ಯೆ ಪ್ರಕರಣದ ಆರೋಪಿಗಳಾದ ನವೀನ್ ಮತ್ತು ವಿನಯ್ ಸೋಮವಾರ ಮಧ್ಯಾಹ್ನ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಶರಣಾದರು. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಕೋರ್ಟ್ 10 ದಿನಗಳ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿತು.

ಗರ್ಭಾವಸ್ಥೆಯಲ್ಲಿ ಪೆಲ್ವಿಕ್ ನೋವನ್ನು ನಿವಾರಿಸುವುದು ಹೇಗೆ?

ಗರ್ಭಾವಸ್ಥೆಯಲ್ಲಿ ಪೆಲ್ವಿಕ್ ನೋವನ್ನು ನಿವಾರಿಸುವುದು ಹೇಗೆ?

ಪೆಲ್ವಿಕ್ ಮೂಳೆಗಳಲ್ಲಿ ಕಾಣಿಸಿಕೊಳ್ಳುವ ಅಹಿತಕರವಾದ ನೋವನ್ನು ಪೆಲ್ವಿಕ್ ನೋವು ಎಂದು ಕರೆಯಲಾಗುತ್ತದೆ. ಗರ್ಭಿಣಿಯರು ಸಾಮಾನ್ಯವಾಗಿ ಈ ಸಮಸ್ಯೆ ಅಥವಾ ನೋವನ್ನು ಅನುಭವಿಸುತ್ತಾರೆ. ಇದನ್ನು ಗರ್ಭಧಾರಣೆಯ ಸಂಬಂಧಿತ ಶ್ರೋಣಿ ಕುರುಹುಗಳು ಎಂದು ಕರೆಯಲಾಗುತ್ತದೆ. ಇದು ಪ್ರಸವದ ನೋವಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಈ ನೋವು ಮಗುವಿನ ಬೆಳವಣಿಗೆ ಅಥವಾ ಮಗುವಿಗೆ ಯಾವುದೇ ರೀತಿಯ ತೊಂದರೆ ಉಂಟುಮಾಡದು. ಆದರೆ ತಾಯಿಯ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುವುದು.

ಗ್ರಾಹಕರ ನೆಚ್ಚಿನ ರಾಯಲ್ ಎನ್‌ಫೀಲ್ಡ್ ಬೈಕ್ ನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತೆ ಈ ತೊಂದರೆ!

ಗ್ರಾಹಕರ ನೆಚ್ಚಿನ ರಾಯಲ್ ಎನ್‌ಫೀಲ್ಡ್ ಬೈಕ್ ನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತೆ ಈ ತೊಂದರೆ!

ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳಲ್ಲಿ ಗೇರ್‌ಬಾಕ್ಸ್ ಆಯಿಲ್ ಲಿಕ್, ಎಲೆಕ್ಟ್ರಿಕ್ ವೈರ್‌ಗಳಲ್ಲಿ ತೊಂದರೆಗಳು, ಕನ್‌ಸೊಲ್ ತೊಂದರೆಗಳು ಮತ್ತು ಬ್ರೇಕಿಂಗ್ ವಿಭಾಗದಲ್ಲಿ ಪದೇ ಪದೇ ತೊಂದರೆ ಕಾಣಿಸಿಕೊಳ್ಳುತ್ತವೆ ಎನ್ನುವುದು ಗ್ರಾಹಕರ ದೂರು. ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡುವುದು ಎಷ್ಟು ಸುಲಭವೋ ಅಷ್ಟೇ ಪ್ರಮಾಣದಲ್ಲಿ ಅದರ ಬಿಡಿಭಾಗಗಳ ರೀಪೆರಿ ಪ್ರಕ್ರಿಯೆಯೂ ಕೂಡಾ ಕಠಿಣವಾಗಿದೆ. ಯಾಕೇಂದ್ರೆ ಅಧಿಕೃತ ಸರ್ವಿಸ್ ಸೇಂಟರ್‌ಗಳನ್ನು ಹೊರತುಪಡಿಸಿ ಬೇರೆಯಡೆ ಸರ್ವಿಸ್ ಮಾಡಿದಲ್ಲಿ ಮತ್ತಷ್ಟು ತೊಂದರೆ ತಪ್ಪಿದ್ದಲ್ಲ ಎನ್ನಬಹುದು.
'ಕಾಮಿಡಿ ಕಿಲಾಡಿ' ನಯನಗೆ ದರ್ಶನ್ ಕಡೆಯಿಂದ ಬಂತು ಬಿಗ್ ಆಫರ್

'ಕಾಮಿಡಿ ಕಿಲಾಡಿ' ನಯನಗೆ ದರ್ಶನ್ ಕಡೆಯಿಂದ ಬಂತು ಬಿಗ್ ಆಫರ್

'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಗೆ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಹೆಚ್ಚು ಅವಕಾಶ ಸಿಗುತ್ತಿದೆ. ಇತ್ತೀಚಿಗಷ್ಟೆ ನಯನ ಕಾಣಿಸಿಕೊಂಡಿದ್ದ 'ಜಂತರ್ ಮಂತರ್' ಸಿನಿಮಾ ತೆರೆಕಂಡಿತ್ತು. ಈ ಮಧ್ಯೆ ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದಲ್ಲಿ ನಯನ ನಟಿಸುತ್ತಿದ್ದಾರೆ. ಇದೀಗ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 51ನೇ ಸಿನಿಮಾದಲ್ಲಿ ನಯನಗೆ ಅವಕಾಶ ಸಿಕ್ಕಿದೆ. ಶೈಲಜಾ ನಾಗ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಯಜಮಾನ' ಚಿತ್ರದಲ್ಲಿ ನಯನ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.