Short News

ಜೆಡಿಎಸ್‌ ಸೇರಿದ ಮಾಜಿ ಶಾಸಕ ಹೇಮಚಂದ್ರ ಸಾಗರ್

ಜೆಡಿಎಸ್‌ ಸೇರಿದ ಮಾಜಿ ಶಾಸಕ ಹೇಮಚಂದ್ರ ಸಾಗರ್

ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಾಯಕ ಹೇಮಚಂದ್ರ ಸಾಗರ್ ಜೆಡಿಎಸ್ ಸೇರಿದರು. 2008ರ ಚುನಾವಣೆಯಲ್ಲಿ ಅವರು 40,252 ಮತಗಳನ್ನು ಪಡೆದು ಚಿಕ್ಕಪೇಟೆಯಲ್ಲಿ ಜಯಗಳಿಸಿದ್ದರು. 2013ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. 2018ರ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿ ಉದಯ್ ಗರುಡಾಚಾರ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಆದ್ದರಿಂದ. ಹೇಮಚಂದ್ರ ಸಾಗರ್ ಅವರು ಬಿಜೆಪಿ ತೊರೆದಿದ್ದರು. ಇಂದು ಟಿ.ಎ.ಶರವಣ ಸಮ್ಮುಖದಲ್ಲಿ ಅವರು ಜೆಡಿಎಸ್ ಸೇರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

16 ವರ್ಷದ ಶಾಲಾ ಬಾಲಕಿಯ ಮೇಲೆ ಸಹಪಾಠಿಗಳಿಂದಲೇ ಸಾಮೂಹಿಕ ಅತ್ಯಾಚಾರ

16 ವರ್ಷದ ಶಾಲಾ ಬಾಲಕಿಯ ಮೇಲೆ ಸಹಪಾಠಿಗಳಿಂದಲೇ ಸಾಮೂಹಿಕ ಅತ್ಯಾಚಾರ

16 ವರ್ಷದ ಶಾಲಾ ಬಾಲಕಿಯ ಮೇಲೆ ಆಕೆಯದ್ದೇ ಸಹಪಾಠಿಗಳು ಸೇರಿಕೊಂಡು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಗ್ರೇಟರ್ ನೊಯ್ಡಾದಲ್ಲಿ ಈ ದುಷ್ಕೃತ್ಯ ನಡೆದಿದ್ದು, ಘಟನೆಯಿಂದ ಆಘಾತಕ್ಕೊಳಗಾಗಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಲಾ ಬಸ್ ಮಿಸ್ ಮಾಡಿಕೊಂಡ 16 ವರ್ಷದ ಬಾಲಕಿ ನಡೆದುಕೊಂಡು ಮನೆ ಕಡೆಗೆ ಹೋಗುತ್ತಿದ್ದಾಗ, ಕಾರಿನಲ್ಲಿ ಬಂದ ಆಕೆಯ ಸ್ನೇಹಿತರು ಡ್ರಾಫ್ ಕೊಡುವುದಾಗಿ ಹೇಳಿ ಕಾರಲ್ಲಿ ಹತ್ತಿಸಿಕೊಂಡಿದ್ದಾರೆ. ಬಳಿಕ ಬಲವಂತವಾಗಿ ಮದ್ಯ ಕುಡಿಸಿ ಗಂಟೆಗಟ್ಟಲೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ರಸ್ತೆ ಬದಿಯಲ್ಲಿ ಆಕೆಯನ್ನು ಇಳಿಸಿ ಪರಾರಿಯಾಗಿದ್ದಾರೆ.
ಹೇರ್ ಸ್ಟೈಲ್ ಕಿಂಗ್ ಧೋನಿ, ಸೂಪರ್ ಲುಕ್ ಎಂದ ಫ್ಯಾನ್ಸ್

ಹೇರ್ ಸ್ಟೈಲ್ ಕಿಂಗ್ ಧೋನಿ, ಸೂಪರ್ ಲುಕ್ ಎಂದ ಫ್ಯಾನ್ಸ್

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಎಂ.ಎಸ್.ದೋನಿ ಅವರು ಮತ್ತೊಮ್ಮೆ ಹೊಸ ವಿನೂತನ ಕೇಶ ವಿನ್ಯಾಸದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಹೊಸ ಹೊಸ ಹೇರ್ ಸ್ಟೈಲ್ ಮಾಡಿಕೊಂಡು ಮೈದಾನದಲ್ಲಿ ಕಾಣಿಸಿಕೊಳ್ಳುವ ಧೋನಿ ಅವರು ಈ ಬಾರಿ ಯಾವ ಸ್ಟೈಲ್ ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆ ನಡೆದಿತ್ತು. ಕೊನೆಗೆ ಧೋನಿ ಅವರ ಕೇಶ ವಿನ್ಯಾಸ ಮಾಡುವ ಸಪ್ನ ಮೋತಿ ಭವ್ನಾನಿ ಅವರು ಗೊಂದಲ ಪರಿಹರಿಸಿದ್ದು, ಇದು ಮೋಹ್ವಕ್ ಸ್ಟೈಲ್ ಅಲ್ಲ , 'ವೈಕಿಂಗ್' ಸ್ಟೈಲ್‌ ಎಂದಿದ್ದಾರೆ. ಎಂಎಸ್ ಧೋನಿ ಅಲ್ಲದೆ, ವಿರಾಟ್ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಉಮೇಶ್‌ ಯಾದವ್‌ ಹೊಸ ಕೇಶ ವಿನ್ಯಾಸದ ಮೂಲಕ ಗಮನ ಸೆಳೆಯುತ್ತಾರೆ.
ಇಐಎಲ್ ನಲ್ಲಿ 67 ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ... ಬಂಪರ್ ಸ್ಯಾಲರಿ ಆಫರ್!

ಇಐಎಲ್ ನಲ್ಲಿ 67 ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ... ಬಂಪರ್ ಸ್ಯಾಲರಿ ಆಫರ್!

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಒಟ್ಟು 67ಟ್ರೈನೀ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ2. ಅಭ್ಯರ್ಥಿಗಳ ಆಯ್ಕೆಯಾದ ಬಳಿಕ ಒಂದು ವರ್ಷ ಟ್ರೈನಿಂಗ್ ನೀಡಲಾಗುವುದು ಈ ಟೈಂನಲ್ಲಿ ಅಭ್ಯರ್ಥಿಗಳಿಗೆ ವಸತಿ ಹಾಗೂ ಸಾರಿಗೆಯನ್ನ ಹೊರತುಪಡಿಸಿ, 35,000 ರೂ ವೇತನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಟ್ರೈನಿಂಗ್ ಮುಗಿದ ಬಳಿಕ 60,000 ರೂ ಯಿಂದ 180000ರೂ ವೇತನ ನೀಡಲಾಗುವುದು. ಆಸಕ್ತ ಇಂಜಿನಿಯರ್ ಅಭ್ಯರ್ಥಿಗಳು ಹಾಗೂ ಈಗಷ್ಟೇ ಕೊನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.