Short News

ಬಹುಮತ 'ಸೃಷ್ಟಿಸಲು' ರಾಜ್ಯಪಾಲರ ಅವಕಾಶ: ಚಿದಂಬರಂ ಕಿಡಿ

ಬಹುಮತ 'ಸೃಷ್ಟಿಸಲು' ರಾಜ್ಯಪಾಲರ ಅವಕಾಶ: ಚಿದಂಬರಂ ಕಿಡಿ

ಕರ್ನಾಟಕದ ರಾಜ್ಯಪಾಲ ವಜೂಭಾಯಿ ವಾಲಾ ಅವರು 104 ಸಂಖ್ಯೆಯನ್ನು 111ಕ್ಕೆ ಹೆಚ್ಚಿಸಿಕೊಳ್ಳಲು ಬಿ.ಎಸ್. ಯಡಿಯೂರಪ್ಪ ಅವರಿಗೆ 15 ದಿನಗಳ ಅವಕಾಶ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಕಿಡಿಕಾರಿದ್ದಾರೆ.

15 ದಿನಗಳಲ್ಲಿ ಬಹುಮತ ಸೃಷ್ಟಿಸಿಕೊಳ್ಳಲು ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ ಎಂದು ಬಿಜೆಪಿಯು ರಾಜ್ಯಪಾಲರಿಂದ ಬಂದ ಆಹ್ವಾನ ಪತ್ರದ ಪ್ರತಿಯನ್ನು ಬಹಿರಂಗಪಡಿಸಿದ ಬಳಿಕ ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಆಹ್ವಾನ ನೀಡದೆ ರಾಜ್ಯಪಾಲರು

ಕ್ರೊಮಾ ಸ್ಟೋರ್‌ನಲ್ಲಿಯೂ OnePlus 6 ಮಾರಾಟ...! ಎಂದಿನಿಂದ..?

ಕ್ರೊಮಾ ಸ್ಟೋರ್‌ನಲ್ಲಿಯೂ OnePlus 6 ಮಾರಾಟ...! ಎಂದಿನಿಂದ..?

ಆಸಕ್ತ ಖರೀದಿದಾರರು ಮೊದಲು ಇದರ ಅನುಭವ ಪಡೆದು ನಂತರ ಖರೀದಿಸಲು ಅವಕಾಶವಿದ್ದು, 112 ಕ್ರೋಮಾ ಸ್ಟೋರ್ ಗಳಲ್ಲಿ ಮೇ 22ರಿಂದ ಮಾರಾಟ ನಡೆಯಲಿದೆ. ಈ ಕಂಪೆನಿಗಳು ಪ್ರತಿದಿನವೂ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ನೀಡಲಿದ್ದು, ಈ ನಿಟ್ಟಿನಲ್ಲಿ HDFC ಬ್ಯಾಂಕ್, ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟೆಡ್, ಮತ್ತು ಪೆಟಿಎಂ ಗಳ ಜೊತೆ ಪಾರ್ಟನರ್ಶಿಪ್ ಹೊಂದಿದೆ. ಎಸ್ ಬಿಐ ಕಾರ್ಡ್ ಬಳಸುವವರಿಗೂ ಕೂಡ 2000 ರುಪಾಯಿಯ ಕ್ಯಾಷ್ ಬ್ಯಾಕ್ ಸಿಗಲಿದೆ. ಆದರೆ ಈ ಎಲ್ಲಾ ಆಫರ್ ಗಳು ಮಾರಾಟ ಆರಂಭವಾದ ಕೇವಲ ಒಂದು ವಾರ ಮಾತ್ರ ಇರಲಿವೆಯಂತೆ.

ಒನ್‍ಪ್ಲಸ್6 ಲೋಕಾರ್ಪಣೆ ಪಾಪ್-ಅಪ್ ಮಳಿಗೆಯಲ್ಲಿ ನೂಕು ನುಗ್ಗಲು

ಒನ್‍ಪ್ಲಸ್6 ಲೋಕಾರ್ಪಣೆ ಪಾಪ್-ಅಪ್ ಮಳಿಗೆಯಲ್ಲಿ ನೂಕು ನುಗ್ಗಲು

ಬಹು-ನಿರೀಕ್ಷಿತ ಒನ್ ಪ್ಲಸ್ 6ರ ಜಾಗತಿಕ ಲೋಕಾರ್ಪಣೆ ಬೆನ್ನಲ್ಲೇ, ಜನಪ್ರಿಯ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆಯು ಅಭಿಮಾನಿಗಳಿಗೆ ಒಂದು ಅದ್ಭುತ ಅವಕಾಶವನ್ನು ಕಲ್ಪಿಸಿದೆ. ಬ್ರಿಗೇಡ್ ರಸ್ತೆಯಲ್ಲಿರುವ ಒನ್‍ಪ್ಲಸ್ ಎಕ್ಸ್‍ಪೀರಿಯೆನ್ಸ್ ಸ್ಟೋರ್‍ನಲ್ಲಿ ಎರಡು - ದಿನಗಳ ಪಾಪ್-ಅಪ್ ಮಳಿಗೆಯಲ್ಲಿ ಕಂಪನಿಯ ಅತ್ಯಾಧುನಿಕ ಫ್ಲ್ಯಾಗ್‍ಶಿಪ್ ಡಿವೈಸ್ ಅನ್ನು ಅನುಭವಿಸುವ ಮತ್ತು ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ. ಬಹುನಿರೀಕ್ಷಿತ ಪಾಪ್-ಅಪ್ ಮಳಿಗೆಯ ಉದ್ಘಾಟನೆಯಲ್ಲಿ ನೂರಾರು ಸಂಖ್ಯೆಯ ಅಭಿಮಾನಿಗಳು ನೆರೆದಿದ್ದು ವಿಶೇಷವಾಗಿತ್ತು.
ಸದ್ಯದಲ್ಲೇ ತೆರೆಗೆ ಬರ್ತಿದೆ 'ಕನ್ನಡಕ್ಕಾಗಿ ಒಂದನ್ನು ಒತ್ತಿ'

ಸದ್ಯದಲ್ಲೇ ತೆರೆಗೆ ಬರ್ತಿದೆ 'ಕನ್ನಡಕ್ಕಾಗಿ ಒಂದನ್ನು ಒತ್ತಿ'

ಬಿಗ್ ಬಾಸ್ ಖ್ಯಾತಿ ಕೃಷಿ ತಾಪಂಡ, ಚಿಕ್ಕಣ್ಣ, ಅವಿನಾಶ್ ಎಸ್ ಶತಮರ್ಷಣ ಮುಖ್ಯ ಭೂಮಿಕೆಯಲ್ಲಿ ಅಭಿನಯದ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಚಿತ್ರ ಶೂಟಿಂಗ್, ಎಡಿಟಿಂಗ್ ಮುಗಿಸಿರುವ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದೆ. ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ ಸದ್ಯದಲ್ಲೇ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಚಿತ್ರದ ಹಾಡುಗಳನ್ನು ಯೂಟ್ಯೂಬ್ ನಲ್ಲೂ 5 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.