Short News

ಕತುವಾ ಪ್ರಕರಣ: ಸಂತ್ರಸ್ಥೆ ಕುಟುಂಬದ ವಕೀಲರಿಗೆ ಕೊಲೆ ಬೆದರಿಕೆ

ಕತುವಾ ಪ್ರಕರಣ: ಸಂತ್ರಸ್ಥೆ ಕುಟುಂಬದ ವಕೀಲರಿಗೆ ಕೊಲೆ ಬೆದರಿಕೆ

ದೇಶದಾದ್ಯಂತ ಕಿಚ್ಚು ಹೊತ್ತಿಸಿರುವ ಜಮ್ಮು ಕಾಶ್ಮೀರದ ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯ ಕುಟುಂಬದ ಪರ ವಕಾಲತ್ತು ವಹಿಸಿದ್ದ ವಕೀಲರಿಗೆ ಕೊಲೆ ಬೆದರಕೆ ಕರೆಗಳು ಬಂದಿವೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲೆ ದೀಪಿಕಾ ಎಸ್ ರಾಜಾವತ್, "ನಾನು ಅಪಾಯದಲ್ಲಿದ್ದೇನೆ. ನನ್ನನ್ನು ಯಾವಾಗ ಬೇಕಾದರೂ ಅತ್ಯಾಚಾರ ಮಾಡಬಹುದುದ, ಕೊಲ್ಲಬಹುದು. ನನಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದಾರೆ" ಎಂದು ಹೇಳಿದ್ದಾರೆ.
1032 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಒಎನ್‌ಜಿಸಿ

1032 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಒಎನ್‌ಜಿಸಿ

ಒಎನ್‌ಜಿಸಿ 1032 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಮೇ 3, 2018 ಅಂತಿಮ ದಿನವಾಗಿದೆ. ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ಒಎನ್‌ಜಿಸಿ) ಕೆಮಿಸ್ಟ್, ಟ್ರಾನ್ಸ್‌ಪೋರ್ಟ್ ಆಫೀಸರ್ ಸೇರಿದಂತೆ 1032 ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಕೆಮಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಸಾಯನ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಶೇ 60ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿಯ 5 ಪ್ರಶ್ನೆಗಳು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿಯ 5 ಪ್ರಶ್ನೆಗಳು

ಕಾಂಗ್ರೆಸ್ ಖೋಜ್ ನ ಕೊನೆ ಹಂತವಾಗಿ ರಾಹುಲ್ ಗಾಂಧಿ ಅವರು ಕರ್ನಾಟಕದ ಪ್ರವಾಸ ಮಾಡುತ್ತಿದ್ದಾರೆ. ಅವರ ಈ ಪ್ರವಾಸದ ಸಂದರ್ಭದಲ್ಲಿ ನಮ್ಮದು ಐದು ಪ್ರಶ್ನೆಗಳಿವೆ. ಅದಕ್ಕೆ ಅವರು ಉತ್ತರ ಹೇಳುತ್ತಾರಾ ಎಂಬ ನಿರೀಕ್ಷೆಯಿಂದ ಇವುಗಳನ್ನು ಕೇಳುತ್ತಿದ್ದೇವೆ ಎಂದುಕೇಂದ್ರ ಸಚಿವ, ಬಿಜೆಪಿ ನಾಯಕ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳನ್ನು ಕೇಳಿದರು.

ರಾಹುಲ್ ಗಾಂಧಿ ಅವರು ರಾಜಕೀಯ ಕಾಲಿಟ್ಟ ಹೊಸತರಲ್ಲಿ ಭಾರತ್ ಖೋಜ್ ಎಂಬ ಅಭಿಯಾನ ಆರಂಭಿಸಿದ್ದರು. ಅದರ ಅಡಿಯಲ್ಲಿ ನಾನಾ ರಾಜ್ಯಗಳ ಪ್ರವಾಸ ಮಾಡಿದ್ದರು. ಇದೀಗ ಅದು ಕಾಂಗ್ರೆಸ್ ಖೋಜ್ ಆಗಿದೆ ಎಂದು ಕೇಂದ್ರ ಸಚಿವ, ಬಿಜೆಪಿ ನಾಯಕ ಬುಧವಾರ ವ್ಯಂಗ್ಯವಾಡಿದ್ದಾರೆ.

ಮೈಸೂರಲ್ಲಿ ಗೆಲ್ಲಬೇಕಿರುವುದು 11 ಜನ: 197 ನಾಮಪತ್ರ ಸಲ್ಲಿಕೆ!

ಮೈಸೂರಲ್ಲಿ ಗೆಲ್ಲಬೇಕಿರುವುದು 11 ಜನ: 197 ನಾಮಪತ್ರ ಸಲ್ಲಿಕೆ!

ಇದೇ ಮೇ.12ರಂದು ನಡೆಯಲಿರುವ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಗಡುವು ನಿನ್ನೆ ಕೊನೆಗೊಂಡಿದೆ. ಹೈ ವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಒಟ್ಟು ಬರೋಬ್ಬರಿ 197 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕೊನೆಯ ದಿನವಾದ ಮಂಗಳವಾರವೂ ಕೆಲವು ಕ್ಷೇತ್ರಗಳಲ್ಲಿ ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ ಜೋರಾಗಿಯೇ ನಡೆಯಿತು. ಸುಮಾರು 100ಕ್ಕೂ ಅಧಿಕ ಮಂದಿ ಅಂತಿಮ ದಿನ ನಾಮಪತ್ರ ಸಲ್ಲಿಸಿದರು. ಏ. 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ವಾಪಸ್‌ ಪಡೆಯಲು ಏ.27 ಕಡೆಯ ದಿನವಾಗಿದೆ.