Short News

ಕತುವಾ ಪ್ರಕರಣ ಜಮ್ಮು-ಕಾಶ್ಮೀರದಿಂದ ವರ್ಗಾಯಿಸುವಂತೆ ಸುಪ್ರೀಂಗೆ ಮನವಿ

ಕತುವಾ ಪ್ರಕರಣ ಜಮ್ಮು-ಕಾಶ್ಮೀರದಿಂದ ವರ್ಗಾಯಿಸುವಂತೆ ಸುಪ್ರೀಂಗೆ ಮನವಿ

ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಜಮ್ಮು-ಕಾಶ್ಮೀರದ ಆಚೆ ವಿಚಾರಣೆ ನಡೆಸಲು ವರ್ಗಾಯಿಸವುಂತೆ ಕೋರಿ ಸಂತ್ರಸ್ಥೆಯ ತಂದೆ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದಾರೆ. ಭದ್ರತೆ ನೀಡುವಂತೆಯೂ ಸಂತ್ರಸ್ಥೆಯ ತಂದೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದು, ಈ ಕುರಿತಂತೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮಧ್ಯಾಹ್ನ 2 ಗಂಟೆಗೆ ನಡೆಸಲಿದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಎಂಟು ಆರೋಪಿಗಳನ್ನು ಇಲ್ಲಿನ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಇಂದಿನಿಂದ ವಿಚಾರಣೆ ನಡೆಸಲಾಗುತ್ತಿದೆ.
1032 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಒಎನ್‌ಜಿಸಿ

1032 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಒಎನ್‌ಜಿಸಿ

ಒಎನ್‌ಜಿಸಿ 1032 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಮೇ 3, 2018 ಅಂತಿಮ ದಿನವಾಗಿದೆ. ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ಒಎನ್‌ಜಿಸಿ) ಕೆಮಿಸ್ಟ್, ಟ್ರಾನ್ಸ್‌ಪೋರ್ಟ್ ಆಫೀಸರ್ ಸೇರಿದಂತೆ 1032 ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಕೆಮಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಸಾಯನ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಶೇ 60ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿಯ 5 ಪ್ರಶ್ನೆಗಳು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿಯ 5 ಪ್ರಶ್ನೆಗಳು

ಕಾಂಗ್ರೆಸ್ ಖೋಜ್ ನ ಕೊನೆ ಹಂತವಾಗಿ ರಾಹುಲ್ ಗಾಂಧಿ ಅವರು ಕರ್ನಾಟಕದ ಪ್ರವಾಸ ಮಾಡುತ್ತಿದ್ದಾರೆ. ಅವರ ಈ ಪ್ರವಾಸದ ಸಂದರ್ಭದಲ್ಲಿ ನಮ್ಮದು ಐದು ಪ್ರಶ್ನೆಗಳಿವೆ. ಅದಕ್ಕೆ ಅವರು ಉತ್ತರ ಹೇಳುತ್ತಾರಾ ಎಂಬ ನಿರೀಕ್ಷೆಯಿಂದ ಇವುಗಳನ್ನು ಕೇಳುತ್ತಿದ್ದೇವೆ ಎಂದುಕೇಂದ್ರ ಸಚಿವ, ಬಿಜೆಪಿ ನಾಯಕ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳನ್ನು ಕೇಳಿದರು.

ರಾಹುಲ್ ಗಾಂಧಿ ಅವರು ರಾಜಕೀಯ ಕಾಲಿಟ್ಟ ಹೊಸತರಲ್ಲಿ ಭಾರತ್ ಖೋಜ್ ಎಂಬ ಅಭಿಯಾನ ಆರಂಭಿಸಿದ್ದರು. ಅದರ ಅಡಿಯಲ್ಲಿ ನಾನಾ ರಾಜ್ಯಗಳ ಪ್ರವಾಸ ಮಾಡಿದ್ದರು. ಇದೀಗ ಅದು ಕಾಂಗ್ರೆಸ್ ಖೋಜ್ ಆಗಿದೆ ಎಂದು ಕೇಂದ್ರ ಸಚಿವ, ಬಿಜೆಪಿ ನಾಯಕ ಬುಧವಾರ ವ್ಯಂಗ್ಯವಾಡಿದ್ದಾರೆ.

ಮೈಸೂರಲ್ಲಿ ಗೆಲ್ಲಬೇಕಿರುವುದು 11 ಜನ: 197 ನಾಮಪತ್ರ ಸಲ್ಲಿಕೆ!

ಮೈಸೂರಲ್ಲಿ ಗೆಲ್ಲಬೇಕಿರುವುದು 11 ಜನ: 197 ನಾಮಪತ್ರ ಸಲ್ಲಿಕೆ!

ಇದೇ ಮೇ.12ರಂದು ನಡೆಯಲಿರುವ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಗಡುವು ನಿನ್ನೆ ಕೊನೆಗೊಂಡಿದೆ. ಹೈ ವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಒಟ್ಟು ಬರೋಬ್ಬರಿ 197 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕೊನೆಯ ದಿನವಾದ ಮಂಗಳವಾರವೂ ಕೆಲವು ಕ್ಷೇತ್ರಗಳಲ್ಲಿ ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ ಜೋರಾಗಿಯೇ ನಡೆಯಿತು. ಸುಮಾರು 100ಕ್ಕೂ ಅಧಿಕ ಮಂದಿ ಅಂತಿಮ ದಿನ ನಾಮಪತ್ರ ಸಲ್ಲಿಸಿದರು. ಏ. 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ವಾಪಸ್‌ ಪಡೆಯಲು ಏ.27 ಕಡೆಯ ದಿನವಾಗಿದೆ.