ಕತುವಾ ಪ್ರಕರಣ ಜಮ್ಮು-ಕಾಶ್ಮೀರದಿಂದ ವರ್ಗಾಯಿಸಿ: ಸುಪ್ರೀಂಗೆ ಮನವಿ
ತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಜಮ್ಮು-ಕಾಶ್ಮೀರದ ಆಚೆ ವಿಚಾರಣೆ ನಡೆಸಲು ವರ್ಗಾಯಿಸವುಂತೆ ಕೋರಿ ಸಂತ್ರಸ್ಥೆಯ ತಂದೆ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದಾರೆ.
ಭದ್ರತೆ ನೀಡುವಂತೆಯೂ ಸಂತ್ರಸ್ಥೆಯ ತಂದೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದು, ಈ ಕುರಿತಂತೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮಧ್ಯಾಹ್ನ 2 ಗಂಟೆಗೆ ನಡೆಸಲಿದೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಎಂಟು ಆರೋಪಿಗಳನ್ನು ಇಲ್ಲಿನ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಇಂದಿನಿಂದ ವಿಚಾರಣೆ ನಡೆಸಲಾಗುತ್ತಿದೆ.