Short News

ಬೆಂಗಳೂರಲ್ಲಿ ಅವತರಿಸಿದ ದೇವರ ಸ್ವಂತ ರಾಜ್ಯ ಕೇರಳ

ಬೆಂಗಳೂರಲ್ಲಿ ಅವತರಿಸಿದ ದೇವರ ಸ್ವಂತ ರಾಜ್ಯ ಕೇರಳ

ಬೆಂಗಳೂರು, ಫೆಬ್ರವರಿ 13: ಜವಾಬ್ದಾರಿಯುತ ಪ್ರವಾಸೋದ್ಯಮ ಹೆಸರಿನಲ್ಲಿ ಕೇರಳ ರಾಜ್ಯವೂ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿದೆ. ಕೇರಳ ಪ್ರವಾಸೋದ್ಯಮ ಪ್ರಚಾರಕ್ಕೆ ಬೆಂಗಳೂರಿನಲ್ಲಿ ಪ್ರದರ್ಶನವನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಆಯೋಜಿಸಿತ್ತು.

ನಗರದ ಎಂ.ಜಿ.ರಸ್ತೆಯ ತಾಜ್ ವಿವಾಂತಾದಲ್ಲಿ ಕೇರಳ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೇರಳದ ಜಾನಪದ ಕಲೆ, ಪ್ರವಾಸೋದ್ಯಮ ಸಂಬಂಧಿತ ವಸ್ತು ಪ್ರದರ್ಶನ, ಕಲೆ, ನೃತ್ಯಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕೇರಳ ಸಂಸ್ಕೃತಿಯ ಪರಿಚಯವನ್ನು ಕರ್ನಾಟಕದ ಜನರಿಗೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

BSNL ನಿಂದ ಗ್ರಾಹಕರಿಗೆ ಹೊಸ ರೂ.99 ಪ್ಲಾನ್

BSNL ನಿಂದ ಗ್ರಾಹಕರಿಗೆ ಹೊಸ ರೂ.99 ಪ್ಲಾನ್

ಇಡೀ ದೇಶದಲ್ಲಿ ಇರುವ ಎಲ್ಲಾ BSNL ಬಳಕೆದಾರರಿಗೆ ಈ ಆಫರ್ ಅನ್ನು ಲಾಂಚ್ ಮಾಡಿರುವ ರೂ.99 ಆಫರ್ ನಲ್ಲಿ 26 ದಿನಗಳ ವ್ಯಾಲಿಡಿಟಿಯನ್ನು ನೀಡಿದ್ದು, ಸಂಪೂರ್ಣವಾಗಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಲ್ಲದೇ BSNL ಬಳಕೆದಾರರಿಗೆ ಮತ್ತೊಂದು ಆಫರ್ ಅನ್ನು ನೀಡಿದ್ದು, ರೂ.319ಕ್ಕೆ ರಿಚಾರ್ಜ್ ಮಾಡಿಸಿದರೆ 90 ದಿನಗಳ ಅವಧಿಗೆ ಸಂಪೂರ್ಣವಾಗಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.
ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕೊನೆಗೂ ಪೊಲೀಸರಿಗೆ ಶರಣು

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕೊನೆಗೂ ಪೊಲೀಸರಿಗೆ ಶರಣು

ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದಾನೆ. ಸತತ 37 ಗಂಟೆ ನಲಪಾಡ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಫೆ.17 ರಂದು ಹಲ್ಲೆ ನಡೆಸಿ ನಾಪತ್ತೆಯಾಗಿದ್ದ ನಲಪಾಡ್ ಇಂದು ಖುದ್ದು ಪೊಲೀಸರಿಗೆ ಶರಣಾಗಿದ್ದಾನೆ. ಮೊಹಮ್ಮದ್ ನಲಪಾಡ್ ಮೇಲೆ ಐಪಿಸಿ 506 ದೂರು ದಾಖಲಿಸಲಾಗಿದೆ ಹಾಕಲಾದ ಗೂಂಡಾಗಿರಿ ಪ್ರಕರಣವು ಬೇಲೇಬಲ್ ಪ್ರಕರಣವಾಗಿದೆ.
ಬ್ಯಾಂಕಿಗೆ 800 ಕೋಟಿ ರೂ. ವಂಚಿಸಿದ ಮತ್ತೋರ್ವ ಉದ್ಯಮಿ

ಬ್ಯಾಂಕಿಗೆ 800 ಕೋಟಿ ರೂ. ವಂಚಿಸಿದ ಮತ್ತೋರ್ವ ಉದ್ಯಮಿ

ವಜ್ರಾಭರಣದ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಕೋಟಿ ಗಟ್ಟಲೆ ವಂಚಿಸಿದ ಮಾದರಿಯಲ್ಲೇ ವಂಚನೆ ನಡೆಸಿದ ಮತ್ತೋರ್ವ ಉದ್ಯಮಿ ಮೇಲೆ ಇದೀಗ ಸಿಬಿಐ ಎಫ್ಐಆರ್ ದಾಖಲಿಸಿದೆ. 'ರೋಟೊಮ್ಯಾಕ್ ಪೆನ್ಸ್' ಕಂಪನಿ ಮುಖ್ಯಸ್ಥ ವಿಕ್ರಂ ಕೊಠಾರಿ ಮತ್ತು ಇತರರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಮಾತ್ರವಲ್ಲ ಬೆಳ್ಳಂಬೆಳಗ್ಗೆ ವಿಕ್ರಂ ಕೊಠಾರಿಗೆ ಸೇರಿದ ಕಾನ್ಪುರದ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.