Short News

ಪ್ರೇಮಿಗಳ ದಿನ ಸ್ಪೆಷಲ್, ಬಾಡಿಗೆಗೆ ಸಿಗ್ತಾನೆ ಬಾಯ್ ಫ್ರೆಂಡ್!!

ಪ್ರೇಮಿಗಳ ದಿನ ಸ್ಪೆಷಲ್, ಬಾಡಿಗೆಗೆ ಸಿಗ್ತಾನೆ ಬಾಯ್ ಫ್ರೆಂಡ್!!

ಗುರ್ಗಾಂವ್ ನ ಯುವಕ 26 ವರ್ಷದ ಶಾಕುಲ್ ಗುಪ್ತಾ ಒಬ್ಬ ಉದ್ಯಮಿ. ಈತ ವ್ಯಾಲಂಟೈನ್ ಡೇ ದಿನಕ್ಕಾಗಿ ತನ್ನನ್ನೇ ತಾನು ಬಾಡಿಗೆಗೆ ಇಟ್ಟಿದ್ದಾನೆ. ಬಾಡಿಗೆ ಕೊಟ್ರೆ ಒಂದು ದಿನದ ಮಟ್ಟಿಗೆ ಈತ ಪ್ರೇಮಿಯಾಗಿರ್ತಾನೆ. ಕೈಹಿಡಿದುಕೊಳ್ಳೋದ್ರಿಂದ ಹಿಡಿದು ಏನ್ಬೇಕಾದ್ರೂ ಮಾಡ್ಬಹುದು, ಆದ್ರೆ ಇವೆಲ್ಲದಕ್ಕೂ ಪ್ಯಾಕೇಜ್ ಲೆಕ್ಕ ಇಟ್ಟಿದ್ದಾನೆ.ಅಷ್ಟೇ ಅಲ್ಲ ತನ್ನ ಜೊತೆ ಇರುವವರಿಗೆ ರುಚಿಯಾದ ಅಡುಗೆ ಮಾಡಿ ಬಡಿಸ್ತಾನಂತೆ. ಜೊತೆಯಾಗಿ ನೆಟ್ ಫ್ಲಿಕ್ಸ್ ನೋಡೋಣ ಎಂದು ಕೂಡ ಆಫರ್ ಕೊಟ್ಟಿದ್ದಾನೆ. ತಾನೊಬ್ಬ ಒಳ್ಳೆ ಹುಡುಗ ಅಂತಾ ಹೊಗಳಿಕೊಂಡಿರುವ ಈತ ನಿಮ್ಮಮ್ಮು ಫ್ರೀಯಾಗಿ ಆಡಿ ಕಾರಲ್ಲಿ ರೈಡ್ ಕರೆದುಕೊಂಎಉ ಹೋಗುತ್ತಾನಂತೆ.
ನಷ್ಟದಲ್ಲಿದ್ದರೂ ಬಳಕೆದಾರರಿಗೆ ಇಷ್ಟವಾಗುವ ಆಫರ್ ಕೊಟ್ಟ ಐಡಿಯಾ..!

ನಷ್ಟದಲ್ಲಿದ್ದರೂ ಬಳಕೆದಾರರಿಗೆ ಇಷ್ಟವಾಗುವ ಆಫರ್ ಕೊಟ್ಟ ಐಡಿಯಾ..!

ಐಡಿಯಾ ರೂ.109 ಪ್ಲಾನ್ ಜಾರಿಗೆ ತಂದಿದ್ದು, ಇದರಲ್ಲಿ ಬಳಕೆದಾರರಿಗೆ ವಾಯ್ಸ್, ಮೇಸೆಜ್ ಮತ್ತು ಡೇಟಾ ಆಫರ್ ಅನ್ನು ನೀಡುತ್ತಿದೆ ಎನ್ನಲಾಗಿದೆ. ಈ ಪ್ಲಾನ್ ನಲ್ಲಿ ಬಳಕೆದಾರರು 1 GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ದೊರೆಯಲಿದೆ. ಇದರೊಂದಿಗೆ ರೋಮಿಂಗ್ ಸಹ ಉಚಿತವಾಗಲಿದ್ದು, ಉಚಿತವಾಗಿ ಮೇಸೆಜ್ ಮಾಡುವ ಅವಕಾಶವು ದೊರೆಯಲಿದೆ. ಆದರೆ ಈ ಆಫರ್ ಕೇವಲ 14 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಮಕ್ಕಳು ಊಟ ಮಾಡುವಾಗ ಹಠ ಮಾಡುವುದು ಏಕೆ? ಇಲ್ಲಿದೆ ಕಾರಣಗಳು

ಮಕ್ಕಳು ಊಟ ಮಾಡುವಾಗ ಹಠ ಮಾಡುವುದು ಏಕೆ? ಇಲ್ಲಿದೆ ಕಾರಣಗಳು

ಮಗು ಎಂಬುದೆ ಆನಂದಕ್ಕೆ ಒಂದು ಪರ್ಯಾಯ ಪದ. ಅದು ಕುಳಿತರು ಆನಂದ, ನಿಂತರು ಆನಂದ, ಓಡಾಡಿಕೊಂಡು, ಆಟವಾಡಿದರೆ ಆನಂದವೋ, ಆನಂದ. ಆದರೂ ಸಹ ಅವರ ಊಟ ತಿಂಡಿಯ ಬಗೆಗೆ ಸ್ವಲ್ಪ ಮುತುವರ್ಜಿಯನ್ನು ವಹಿಸುವುದು ಅತ್ಯಗತ್ಯ. ಇನ್ನು ಮಗುವಿಗೆ ಎದೆಹಾಲನ್ನು ಕುಡಿಸಲು ಎದೆಗಾರಿಕೆಯೇ ಇರಬೇಕು. ಕಾಲ ಕ್ರಮೇಣ ಅವರಿಗೆ ವಯಸ್ಸಾದಂತೆ ಅವರಿಗು ಆಹಾರದ ರುಚಿಯನ್ನು ಕಂಡು ಹಿಡಿಯುವ ಪ್ರವೃತ್ತಿ ಬೆಳೆಯುತ್ತದೆ. ಕೆಲವೊಮ್ಮೆ ತಕ್ಷಣ ಮಕ್ಕಳಲ್ಲಿ ತಿನ್ನುವ ಚಪಲಗಳು ಮೂಡುವುದನ್ನು ನಾವು ಗಮನಿಸಬಹುದು. ಮಕ್ಕಳಿಗೆ ಊಟ ಮಾಡಿಸುವುದು ದಿನೇ ದಿನೇ ಕಷ್ಟವಾಗುತ್ತ ಸಾಗುವುದನ್ನು ನೀವು ಗಮನಿಸಬಹುದು.

ಕೋತಿಯನ್ನು ಗಲ್ಲಿಗೇರಿಸಿದ ರೈತ, ಯಾಕೆ ಗೊತ್ತಾ ?

ಕೋತಿಯನ್ನು ಗಲ್ಲಿಗೇರಿಸಿದ ರೈತ, ಯಾಕೆ ಗೊತ್ತಾ ?

ಕೋತಿಯ ಮೇಲೆ ಕೊಪಗೊಂಡ ರೈತನೊಬ್ಬ ಕೋತಿಯನ್ನು ಗಲ್ಲಿಗೇರಿಸಿರುವ ಘಟನೆ ಮಧ್ಯ ಪ್ರದೇಶದ ಬಿತುಲ್ ಜಿಲ್ಲೆಯಲ್ಲಿ ನಡೆದಿದೆ. ಹೌದು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕೋತಿ ಹಾಳು ಮಾಡಿತು ಎಂದು ರೊಚ್ಚಿಗೆದ್ದ ರೈತ ಕೋತಿಗೆ ನೇಣು ಬಿಗಿದಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಬಿರ್ಜು ಓಜಾ (38) ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆತುಲ್‌ನ ಶಾಹ್ಪುರ ಪ್ರದೇಶದಲ್ಲಿ ಎರಡು ವಾರಗಳ ಹಿಂದೆ ಗಲ್ಲಿಗೇರಿಸಿದ ಸ್ಥಿತಿಯಲ್ಲಿ ಕೋತಿಯೊಂದರ ಶವ ಪತ್ತೆಯಾಗಿತ್ತು. ನಂತರ ಈ ಪ್ರಕರಣ ಬಯಲಿಗೆ ಬಂದಿದೆ.