Short News

ಕರ್ನಾಟಕ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ಹಿಂತೆಗೆದ ಗೋವಾ!

ಕರ್ನಾಟಕ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ಹಿಂತೆಗೆದ ಗೋವಾ!

ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಗೋವಾ ಸರ್ಕಾರ ಕರ್ನಾಟಕದ ವಿರುದ್ದ ನ್ಯಾಯಾಧೀಕರಣಕ್ಕೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಾಪಾಸ್‌ ಪಡೆದಿದೆ. ಗೋವಾ ಸರಕಾರದ ತಕರಾರು ಅರ್ಜಿ ವಿರುದ್ಧ ಆಕ್ಷೇಪ ಸಲ್ಲಿಸಿದ್ದ ಕರ್ನಾಟಕ ನದಿ ನೀರನ್ನು ತಿರುವು ಮಾಡಲಿಲ್ಲ.ಜೊತೆಗೆ ನ್ಯಾಯಾಧೀಕರಣಕ್ಕೆ ಅರ್ಜಿ ವಿಚಾರಣೆ ನಡೆಸುವ ಅಧಿಕಾರ ಇಲ್ಲ ಎಂದು ಹೇಳಿತ್ತು. ಇಂದು ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆ ಗೋವಾ ವಕೀಲರು ಅರ್ಜಿಯನ್ನು ವಾಪಾಸ್‌ ಪಡೆಯುವುದಾಗಿ ಹೇಳಿದ್ದಾರೆ.
ಭಾರತೀಯರಿಗಾಗಿಯೇ ಬಜೆಟ್ ಬೆಲೆಯಲ್ಲಿ ಐಫೋನ್..?

ಭಾರತೀಯರಿಗಾಗಿಯೇ ಬಜೆಟ್ ಬೆಲೆಯಲ್ಲಿ ಐಫೋನ್..?

ಆಪಲ್ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ಹೊಸ ಮಾದರಿಯಲ್ಲಿ ಬಜೆಟ್ ಬೆಲೆಯಲ್ಲಿ ಐಫೋನ್ ವೊಂದನ್ನು ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ. ಭಾರತದಲ್ಲಿ ನಿರ್ಮಾಣವಾಗುತ್ತಿರುವ ಐಫೋನ್ SE ಮುಂದುವರೆದ ಆವೃತ್ತಿಯನ್ನು ಮಾರುಕಟ್ಟೆಗೆ ತರಲು ಆಪಲ್ ಚಿಂತನೆ ನಡೆಸಿದೆ. ಭಾರತದಲ್ಲಿ ಈಗಾಗಲೇ ಐಫೋನ್ ಬೇಡಿಕೆಯೂ ಹೆಚ್ಚಾಗುತ್ತಿದೆ. ಅಲ್ಲದೇ ದುಬಾರಿ ಬೆಲೆಯ ಐಫೋನ್ X ಸಹ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿತ್ತು. ಈ ಹಿನ್ನಲೆಯಲ್ಲಿ ಆಪಲ್ ಐಫೋನ್ SE 2 ಅನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದರಲ್ಲಿ 2GB RAM ಮತ್ತು 32/128GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದೆ.
ಸೆಟ್ಟೇರುವ ಮುಂಚೆಯೇ ಕಿಚ್ಚನ ಚಿತ್ರಕ್ಕೆ ಡಿಮ್ಯಾಂಡ್

ಸೆಟ್ಟೇರುವ ಮುಂಚೆಯೇ ಕಿಚ್ಚನ ಚಿತ್ರಕ್ಕೆ ಡಿಮ್ಯಾಂಡ್

ಸುದೀಪ್ ಅಭಿನಯದ ಇನ್ನೂ ಪ್ರಾರಂಭ ಆಗದ ಕೋಟಿಗೊಬ್ಬ3 ಸಿನಿಮಾದ ಆಡಿಯೋ ಹಕ್ಕು ಈಗಾಗಲೇ ಮಾರಾಟವಾಗಿದೆ. ಕೋಟಿಗೊಬ್ಬ3 ಚಿತ್ರದ ಮಹೂರ್ತ ಮಾ.2ರಂದು ನಡೆಯಲಿದೆ. ಸೂರಪ್ಪ ಬಾಬು ಸಿನಿಮಾವನ್ನ ನಿರ್ಮಾಣ ಮಾಡಲಿದ್ದು ಶಿವ ಕಾರ್ತಿಕ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಕೋಟಿಗೊಬ್ಬ2 ಚಿತ್ರದ ಆಡಿಯೋ ಸೂಪರ್ ಹಿಟ್ ಆದ ಹಿನ್ನಲೆಯಲ್ಲಿ ಆನಂದ್ ಆಡಿಯೋ ಸಂಸ್ಥೆ ಈಗಾಗಲೇ ಚಿತ್ರದ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕೋಟಿಗೊಬ್ಬ2 ನಲ್ಲಿ ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ ಹಾಡು ಕಳೆದ ವರ್ಷದ ಸೂಪರ್ ಹಿಟ್ ಸಾಂಗ್ ಗಳ ಲೀಸ್ಟ್ ನಲ್ಲಿ ಪ್ರಥಮ ಸ್ಥಾನಗಳಿಸಿತ್ತು.
2018ರಲ್ಲಿ ವಿಶ್ವಸಂಸ್ಥೆಯ ಬಜೆಟ್ ಎಷ್ಟು ಗೊತ್ತಾ? ಇದರಲ್ಲಿ ಭಾರತದ ಪಾಲು 117 ಕೋಟಿ ರೂ.

2018ರಲ್ಲಿ ವಿಶ್ವಸಂಸ್ಥೆಯ ಬಜೆಟ್ ಎಷ್ಟು ಗೊತ್ತಾ? ಇದರಲ್ಲಿ ಭಾರತದ ಪಾಲು 117 ಕೋಟಿ ರೂ.

ಈ ಆರ್ಥಿಕ ವರ್ಷದ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಸುಮಾರು 2.5ಶತಕೋಟಿ ಡಾಲರ್‌(163ಶತಕೋಟಿ ರೂ.)ಹಣ ಹರಿದು ಬಂದಿದೆ. ವಿಶ್ವಸಂಸ್ಥೆಯ ಈ ಬಜೆಟ್‌ಗೆ ಸದಸ್ಯ ರಾಷ್ಟ್ರಗಳು ದೇಣಿಗೆ ನೀಡುತ್ತವೆ. ಈ ಸಾಲಿನ ಬಜೆಟ್‌ಗೆ ದೇಣಿಗೆ ನೀಡಲು ಫೆಬ್ರವರಿ ಕಡೆಯ ದಿನವಾಗಿತ್ತು. ಭಾರತವು ಸೇರಿದಂತೆ 48ದೇಶಗಳು ಸರಿಯಾದ ಸಮಯಕ್ಕೆ ದೇಣಿಗೆ ಪಾವತಿಸಿವೆ. 5ದೇಶಗಳು ಅವಧಿ ಕಳೆದ ಸ್ವಲ್ಪ ದಿನದ ನಂತರ ದೇಣಿಗೆ ಪಾವತಿಸಿವೆ. ಭಾರತವು 18ದಶಲಕ್ಷ ಡಾಲರ್‌(117 ಕೋಟಿ ರೂ.)ಮೊತ್ತ ದೇಣಿಗೆ ಕೊಟ್ಟಿದೆ. ವಿಶ್ವಸಂಸ್ಥೆಗೆ ಅತಿದೊಡ್ಡ ಕೊಡುಗೆದಾರ ಅಮೆರಿಕವಾಗಿದ್ದು,590ದಶಲಕ್ಷ ಡಾವರ್‌ ಮೊತ್ತವನ್ನು ವಿಶ್ವಸಂಸ್ಥೆಗೆ ದೇಣಿಗೆಯಾಗಿ ನೀಡಿದೆ.