Short News

ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಮೆಹಬೂಬ ಮುಫ್ತಿ

ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಮೆಹಬೂಬ ಮುಫ್ತಿ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಪಿಡಿಪಿಯನ್ನು ಒಡೆಯಲು ಯತ್ನಿಸಿದರೆ ಬಿಜೆಪಿ ಗಂಭೀರ ಪರಿಣಾಮ ಎದುರಿಸಲು ತಯಾರಾಗಬೇಕಾಗುತ್ತದೆ ಎಂದು ಗುಡುಗಿದ್ದಾರೆ. 1987ರಲ್ಲಿ ಏನಾಯಿತೆನ್ನುವುದನ್ನು ಬಿಜೆಪಿ ನೆನೆಸಿಕೊಳ್ಳಬೇಕು ಎಂದು ಹೇಳಿರುವ ಮುಫ್ತಿ ಕಾಶ್ಮೀರ ಬಿಜೆಪಿ ಮಾಡಿದ ಕೆಲಸದಿಂದ ಎಂತಹಾ ಪರಿಣಾಮ ಎದುರಿಸಬೇಕಾಯಿತು ಎನ್ನುವುದನ್ನು ಮರೆಯಬಾರದು ಎಂದಿದ್ದಾರೆ. ಹುತಾತ್ಮರ ದಿನಾಚರಣೆಯ ಸ್ಮರಣಾರ್ಥವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಹೀಗೆಂದಿದ್ದಾರೆ.
ಬಿಎಸ್ಎನ್ಎಲ್  ಆಫರ್! ತಿಂಗಳಿಗೆ 1500 ಜಿಬಿ ಡೇಟಾ ಸೌಲಭ್ಯ

ಬಿಎಸ್ಎನ್ಎಲ್ ಆಫರ್! ತಿಂಗಳಿಗೆ 1500 ಜಿಬಿ ಡೇಟಾ ಸೌಲಭ್ಯ

  • ಜಿಯೋ ಘೋಷಿಸುವ ಪ್ಲಾನ್ ಗಳಿಗೆ ಟಕ್ಕರ್ ನೀಡಲು ಇತರೆ ಟೆಲಿಕಾಂ ಕಂಪನಿಗಳು ಕೂಡ ಹಿಂದೆ ಬಿದ್ದಿಲ್ಲ. ಜಿಯೋ ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಪ್ಲಾನ್ ಘೋಷಣೆ ಮಾಡಿದ ನಂತರ ಇದಕ್ಕೆ ವಿರುದ್ದವಾಗಿ ಬಿಎಸ್ಎನ್ಎಲ್ ತನ್ನ ಯೋಜನೆಯಲ್ಲಿ ಬದಲಾವಣೆ ತಂದಿದೆ. ಬಿಎಸ್ಎನ್ಎಲ್ ರೂ. 5000ಗೆ 1500 ಜಿಬಿ ಡೇಟಾ ನೀಡಲಿದ್ದು, ಇದಕ್ಕೂ ಮೊದಲು 1000 ಜಿಬಿ ಡೇಟಾ ನೀಡುತ್ತಿತ್ತು. ತನ್ನ FTTH ಪ್ಲಾನ್ ನ FUP ಮಿತಿಯನ್ನು ಹೆಚ್ಚಿಸಿದೆ.
  • FTTH ULD ರೂ.4999 ಯೋಜನೆಯಡಿ ಗ್ರಾಹಕರಿಗೆ 100 ಎಂಬಿಪಿಎಸ್ ವೇಗದಲ್ಲಿ 1500 ಜಿಬಿ ಡೇಟಾ ಸಿಗಲಿದೆ.

ಒಂದು ಮಿಲಿಯನ್ ಜನರ ಪ್ರೀತಿ ಪಡೆದ 'ಅಯೋಗ್ಯ'

ಒಂದು ಮಿಲಿಯನ್ ಜನರ ಪ್ರೀತಿ ಪಡೆದ 'ಅಯೋಗ್ಯ'

ಮಂಡ್ಯ ಮಾತ್ರವಲ್ಲ ಎಲ್ಲ ಕಡೆ ಈಗ 'ಏನಮ್ಮಿ ಏನಮ್ಮಿ..' ಎಂದು ಎಲ್ಲರೂ ಹಾಡುವ ಹಾಗೆ ಆಗಿದೆ. 'ಅಯೋಗ್ಯ' ಸಿನಿಮಾದ ಮೊದಲ ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಆ ಹಾಡು ಈಗ ಸೂಪರ್ ಹಿಟ್ ಆಗಿದೆ. ಸತೀಶ್ ನೀನಾಸಂ ನಟನೆಯ 'ಅಯೋಗ್ಯ' ಸಿನಿಮಾದ 'ಏನಮ್ಮಿ ಏನಮ್ಮಿ..' ಹಾಡು ಈಗ ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ಹಿಟ್ಸ್ ಪಡೆದಿದೆ. ಒಂದು ವಾರದ ಹಿಂದೆ ಬಿಡುಗಡೆಯಾಗಿದ್ದ ಈ ಹಾಡನ್ನು ಎಲ್ಲರು ಕೇಳಿ ಇಷ್ಟ ಪಟ್ಟಿದ್ದಾರೆ. ಹಾಡಿನ ಅನೇಕ ಡಬ್ ಸ್ಮಾಶ್ ಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 'ಏನಮ್ಮಿ ಏನಮ್ಮಿ..' ಹಾಡನ್ನು ನಟ ಧ್ರುವ ಸರ್ಜಾ ರಿಲೀಸ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು.
ಇಂಗ್ಲೆಂಡ್ vs ಭಾರತ 3ನೇ ODI-Live: ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ

ಇಂಗ್ಲೆಂಡ್ vs ಭಾರತ 3ನೇ ODI-Live: ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಇಂದು (ಜು. 17) ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯಕ್ಕಾಗಿ ಕಣಕ್ಕಿಳಿದಿದೆ. ಟಾಸ್ ಈಗಾಗಲೇ ಮುಗಿದಿದ್ದು, ಟಾಸ್ ಗೆದ್ದಿರುವ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿದೆ. ಮೊದಲ ಪಂದ್ಯವನ್ನು 8 ವಿಕೆಟ್ ನಿಂದ ಗೆದ್ದಿದ್ದ ಭಾರತ ಎರಡನೇ ಪಂದ್ಯದಲ್ಲಿ 86 ರನ್ ಹೀನಾಯ ಸೋಲು ಕಂಡಿತ್ತು. ಎರಡೂ ತಂಡಗಳು 1-1 ಪಂದ್ಯ ಗೆದ್ದಿರುವುದರಿಂದ ಇಂದಿನ ಪಂದ್ಯ ನಿರ್ಣಾಯವಾಗಲಿದೆ. ಭಾರತ ಇಂದಿನ ಪಂದ್ಯ ಗೆಲ್ಲವ ವಿಶ್ವಾಸದಲ್ಲಿದೆ. 
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more