Short News

ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಅಬ್ಬರಿಸಲಿದ್ದಾನೆ ವರುಣ

ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಅಬ್ಬರಿಸಲಿದ್ದಾನೆ ವರುಣ

ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಭಾರೀ ಮಳೆಯಾಘುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ನೈರುತ್ಯ ಮುಂಗಾರು ಮಾರುತಗಳು ಮುಂಬೈನ ಥಾಣೆ, ಅಹ್ಮದ್ ನಗರ, ಬುಲ್ಧಾನಾ, ಅಮ್ರೋಟಿ, ಗೋಂಡಿಯಾ, ಟಿಟ್ಲಾ ಗರ್, ಕಟಕ್, ಮಿಡ್ನಾಪುರ, ಗೋಲ್ ಪಾರಾ ಮತ್ತು ಬಗ್ಡೋಗ್ರಾ ಮೂಲಕ ಹಾದುಹೋಗಿವೆ. ಮುಂಗಾರು ಮಾರುತಗಳು ಮುಂದಿನ ಒಂದು ವಾರ ದುರ್ಬಲವಾಗಲಿದ್ದು, ಹೆಚ್ಚಿನ ಮಳೆ ಸುರಿಯಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ.
ಈ 10 ಆಂಡ್ರಾಯ್ಡ್‌ ಆಪ್‌ಗಳು ನಿಮ್ಮ ಜೀವನ ಬದಲಿಸುಬಹುದು..!

ಈ 10 ಆಂಡ್ರಾಯ್ಡ್‌ ಆಪ್‌ಗಳು ನಿಮ್ಮ ಜೀವನ ಬದಲಿಸುಬಹುದು..!

ಆಂಡ್ರಾಯ್ಡ್ ಮೊಬೈಲ್ ಫೋನ್ ಗಳನ್ನು ಹೆಚ್ಚಿನ ಮಂದಿ ಇಷ್ಟ ಪಡುತ್ತಾರೆ ಯಾಕೆಂದರೆ ಈ ಪ್ಲಾಟ್ ಫಾರ್ಮ್ ನಲ್ಲಿ ಹಲವು ರೀತಿಯ ಟೂಲ್ ಗಳಿದ್ದು ಅವುಗಳು ನಮ್ಮ ದಿನನಿತ್ಯದ ಹಲವಾರು ಕೆಲಸಗಳಿಗೆ ಬಳಕೆಗೆ ಬರುತ್ತದೆ. ಹಾಗಾಗಿ ನಾವು ಕೆಲವು ಆಪ್ ಗಳು ನಿಮ್ಮ ಜೀವನವನ್ನು ಹೇಗೆ ಏಳಿಗೆ ಕಾಣಿಸುತ್ತವೆ ಎಂಬುದನ್ನು ಇದರಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ, ಕೇವಲ ಮಾತುಕತೆಗಾಗಿ ಮಾತ್ರ ಫೋನನ್ನು ಬಳಕೆ ಮಾಡುವ ಕಾಲ ಹೋಗಿ ಬಹಳಷ್ಟು ದಿನಗಳಾದವು. ನಾವು ಯಾವ ಪ್ರಪಂಚದಲ್ಲಿ ಬದುಕಿದ್ದೇವೆ ಎಂದರೆ, ನಮ್ಮ ಸ್ಮಾರ್ಟ್ ಫೋನ್ ಗಳು ಈಗ ಒಂದು ಬಲಿಷ್ಟ ಕಂಪ್ಯೂಟರ್ ನಂತೆ ವರ್ತಿಸುತ್ತವೆ.

ಫಿಲ್ಮ್ ಚೇಂಬರ್ ಕಡೆಯಿಂದ ಸಿ.ಎಂ ಎಚ್.ಡಿ.ಕುಮಾರಸ್ವಾಮಿಗೆ ಸನ್ಮಾನ

ಫಿಲ್ಮ್ ಚೇಂಬರ್ ಕಡೆಯಿಂದ ಸಿ.ಎಂ ಎಚ್.ಡಿ.ಕುಮಾರಸ್ವಾಮಿಗೆ ಸನ್ಮಾನ

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಡೆಯಿಂದ ಇಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದು ನೇತೃತ್ವದಲ್ಲಿ ಸನ್ಮಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು, ಕಲಾವಿದರು ಹಾಗೂ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಸಾಕ್ಷಿಯಾದರು.

ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಎಚ್.ಡಿ.ಕುಮಾರಸ್ವಾಮಿ ನಡೆದು ಬಂದ ದಾರಿಯನ್ನು ಮೆಲುಕು ಹಾಕುವ ವಿಡಿಯೋ ಪ್ರದರ್ಶನ ಮಾಡಿ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ನಿಕ್ ಜೊನಾಸ್ ಜೊತೆಗೆ ನಟಿ ಪ್ರಿಯಾಂಕಾ ಲಿವ್-ಇನ್ ರಿಲೇಶನ್ ಶಿಪ್.?

ನಿಕ್ ಜೊನಾಸ್ ಜೊತೆಗೆ ನಟಿ ಪ್ರಿಯಾಂಕಾ ಲಿವ್-ಇನ್ ರಿಲೇಶನ್ ಶಿಪ್.?

ಇತ್ತೀಚೆಗಂತೂ ವೈಯುಕ್ತಿಕ ವಿಚಾರಗಳಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಸದ್ದು ಮಾಡುತ್ತಿದ್ದಾರೆ. ಬೇಸ್ ಬಾಲ್ ಗೇಮ್ ನೋಡಲು Dodgers ಸ್ಟೇಡಿಯಂಗೆ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೋನಾಸ್ ಒಟ್ಟಿಗೆ ಹೋದ್ಮೇಲಂತೂ ಎಲ್ಲರ ಕಣ್ಣು ಇವರಿಬ್ಬರ ಮೇಲೆ ಬಿದ್ದಿದೆ. ಪ್ರಿಯಾಂಕಾ-ನಿಕ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಗಾಳಿಸುದ್ದಿ ಎಲ್ಲಾ ಕಡೆ ಗಿರಕಿ ಹೊಡೆಯುತ್ತಿದೆ. ಆದ್ರೆ, ತಮ್ಮಿಬ್ಬರ ನಡುವೆ ಇರುವ ನಂಟಿನ ಬಗ್ಗೆ ಪ್ರಿಯಾಂಕಾ ಆಗಲಿ, ನಿಕ್ ಆಗಲಿ ಸ್ಪಷ್ಟನೆ ಕೊಟ್ಟಿಲ್ಲ. ಹೊಸ ಗಾಸಿಪ್ ಒಂದರ ಪ್ರಕಾರ ತಮ್ಮೊಂದಿಗೆ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿ ಇರುವಂತೆ ಪ್ರಿಯಾಂಕಾ ಛೋಪ್ರಾಗೆ ನಿಕ್ ಜೋನಾಸ್ ಕೇಳಿಕೊಂಡಿದ್ದಾರಂತೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more