Short News

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಬದಲಾವಣೆ ಇಲ್ಲ: ಮಧು ಬಂಗಾರಪ್ಪ

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಬದಲಾವಣೆ ಇಲ್ಲ: ಮಧು ಬಂಗಾರಪ್ಪ

ಜೆಡಿಎಸ್ ಈಗ ಘೋಷಿಸಿರುವ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿವಮೊಗ್ಗ ನಗರ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಮುಖಂಡ, ಶಾಸಕ ಮಧು ಬಂಗಾರಪ್ಪ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಜೆಡಿಎಸ್ ತನ್ನ 126 ಕ್ಷೇತ್ರಕ್ಕೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಶೇ.80 ರಿಂದ 90 ಭಾಗ ಗೆಲುವು ಸಾಧಿಸುವ ಅಭ್ಯರ್ಥಿಗಳನ್ನೇ ವರಿಷ್ಟರು ಕಣಕ್ಕೆ ಇಳಿಸಿದ್ದಾರೆ ಇವುಗಳಲ್ಲಿ ಯಾವ ಬದಲಾವಣೆಯೂ ಆಗದು ಎಂದು ಅವರು ಹೇಳಿದ್ದಾರೆ.

ಬಹುಕೋಟಿ ಮೇವು ಹಗರಣದ ನಾಲ್ಕನೇ ಪ್ರಕರಣ: ಲಾಲೂ ಯಾದವ್ ದೋಷಿ ಎಂದು ತೀರ್ಪು

ಬಹುಕೋಟಿ ಮೇವು ಹಗರಣದ ನಾಲ್ಕನೇ ಪ್ರಕರಣ: ಲಾಲೂ ಯಾದವ್ ದೋಷಿ ಎಂದು ತೀರ್ಪು

ಬಹುಕೋಟಿ ಮೇವು ಹಗರಣದ ನಾಲ್ಕನೇ ಪ್ರಕರಣದಲ್ಲೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್​ ಯಾದವ್​ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ​ ತೀರ್ಪು ನೀಡಿದೆ. ಜಾರ್ಖಂಡ್ ನ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯದಿಂದ ಈ ತೀರ್ಪು ಪ್ರಕಟವಾಗಿದ್ದು, ಲಾಲೂ ಜೊತೆಗೆ ಅರುಣ್ ಸಿಂಹ, ಅಜಿತ್ ವರ್ಮಾ ದೋಷಿ ಎಂದು ನ್ಯಾಯಾಲಯ ಹೇಳಿದೆ. ಈಗಾಗಲೇ ಆರ್ ಜೆಡಿ ಮುಖಂಡ ಲಾಲೂ ಅವರನ್ನು ಮೇವು ಹಗರಣದ ಮೂರು ಆರೋಪಗಳಲ್ಲಿ ದೋಷಿ ಎಂದು ಪರಿಗಣಿಸಿರುವ ಸಿಬಿಐ ವಿಶೇಷ ನ್ಯಾಯಾಲಯ, ಮೂರು ಪ್ರಕರಣಗಳಿಂದ ಒಟ್ಟು 13.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಎನ್’ಡಿಎ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಹಿನ್ನಡೆ: ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ

ಎನ್’ಡಿಎ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಹಿನ್ನಡೆ: ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ

ಪ್ರಧಾನಿ ಮೋದಿ ನೇತೃತ್ವದ ಎನ್'ಡಿಎ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಉಭಯ ಸದನಗಳಲ್ಲಿ ತೀವ್ರ ಗದ್ದಲ ಉಂಟಾಗಿ, ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಎನ್'ಡಿಎ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ವೈ.ವಿ.ಸುಬ್ಬಾ ರೆಡ್ಡಿಯವರು ಲೋಕಸಭೆ ಕಾರ್ಯದರ್ಶಿಗಳಿಗೆ ಈ ಹಿಂದೆ ಪತ್ರ ಬರೆದಿದ್ದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿತ್ತು. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು CM ಚಂದ್ರಬಾಬು ನಾಯ್ಡು ಪಟ್ಟು ಹಿಡಿದಿದ್ದು, ಬೇಡಿಕೆ ಈಡೇರಿಸದ ಕಾರಣ ಎನ್ ಡಿಎ ಮೈತ್ರಿಯಿಂದ ಹೊರ ಬಂದಿದ್ದರು.
ಗ್ಯಾಲಕ್ಸಿ ಎಸ್ 9+ VS ಐಫೋನ್ 10 'ಡ್ರಾಪ್ ಟೆಸ್ಟ್'!!(ವಿಡಿಯೊ)
<iframe width="600" height="450" src="https://www.youtube.com/embed/p7LWUVtrnOA" frameborder="0" allow="autoplay; encrypted-media" allowfullscreen></iframe>

ಗ್ಯಾಲಕ್ಸಿ ಎಸ್ 9+ VS ಐಫೋನ್ 10 'ಡ್ರಾಪ್ ಟೆಸ್ಟ್'!!(ವಿಡಿಯೊ)

ಪ್ರಸಿದ್ದ ಯೂಟ್ಯೂಬ್ ಚಾನಲ್ ಫೋನ್ ಬಫ್ ಯಾವಾಗಲೂ ವಿಶೇಷವಾಗಿಯೇ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ನೀಡುವುದರಿಂದ ಈ ಬಾರಿಯೂ ಅಂತಹುದೇ ವಿಶೇಷತೆಯನ್ನು ನಾವು ಎದುರುನೋಡಿದ್ದೇವೆ. ಇತ್ತೀಚಿಗೆ ಬಿಡುಗಡೆಯಾಗಿರುವ ವಿಶ್ವದ ಟಾಪ್ ಎರಡು ಸ್ಮಾರ್ಟ್‌ಫೋನ್‌ಗಳ ನಡುವೆ ಪೋನ್‌ ಬಫ್ 'ಡ್ರಾಪ್ ಟೆಸ್ಟ್' ನಡೆಸಿ ಗಮನಸೆಳೆದಿದೆ.!!

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 9 + ಮತ್ತು ಐಫೋನ್ 10 ನಂತಹ ದುಬಾರಿ ಸ್ಮಾರ್ಟ್‌ಫೋನ್‌ಗಳು ವಿವಿಧ ರೀತಿಯಲ್ಲಿ ಕೆಡವಿ ಯಾವ ಫೋನ್ ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂದು ಫೋನ್ ಬಫ್ ತನ್ನ ಅಂಕಗಳನ್ನು ನೀಡಿದೆ.!