Short News

ರಾಜಕೀಯಕ್ಕೆ ಬಂದ ಬಳಿಕ ನಾನು ಸಿನೆಮಾ ಮಾಡಲ್ಲ: ಕಮಲ್ ಹಾಸನ್

ರಾಜಕೀಯಕ್ಕೆ ಬಂದ ಬಳಿಕ ನಾನು ಸಿನೆಮಾ ಮಾಡಲ್ಲ: ಕಮಲ್ ಹಾಸನ್

ತಮಿಳುನಾಡು ಜನತೆಗಾಗಿ ನಾನು ರಾಜಕೀಯ ಪ್ರವೇಶಿಸುವುದು ಅಂತಿಮವಾಗಿದ್ದು, ಈ ನಿರ್ಧಾರದಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಬಹುಭಾಷಾ ತಾರೆ ನಟ ಕಮಲ್ ಹಾಸನ್ ಹೇಳಿದ್ದಾರೆ. ಇದೇ ತಿಂಗಳು ತಮ್ಮ ಪಕ್ಷ ಮತ್ತು ಅದರ ತತ್ವಗಳನ್ನು ಪ್ರಕಟಿಸಲಿದ್ದೇನೆ ಎಂದು ಹೇಳಿರುವ ಕಮಲ್ ತಯಾರಿ ಹಂತದಲ್ಲಿರುವ ಎರಡು ಚಿತ್ರಗಳನ್ನು ಹೊರತುಪಡಿಸಿ ಮುಂದಿನ ದಿನಗಳಲ್ಲಿ ಯಾವುದೇ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಜೊತೆಗೆ ಹಿಂದೂ ಭಯೋತ್ಪಾದನೆ ಒಂದು ಬೆದರಿಕೆಯಾಗಿದ್ದು ಆ ಬಗ್ಗೆ ಆರೋಪಿಸಿಕೊಂಡು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಚೆನ್ನೈ ವಿರುದ್ಧ ನಿಧಾನಗತಿ ಬೌಲಿಂಗ್, ವಿರಾಟ್ ಕೊಹ್ಲಿಗೆ 12 ಲಕ್ಷ ದಂಡ

ಚೆನ್ನೈ ವಿರುದ್ಧ ನಿಧಾನಗತಿ ಬೌಲಿಂಗ್, ವಿರಾಟ್ ಕೊಹ್ಲಿಗೆ 12 ಲಕ್ಷ ದಂಡ

ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ದಂಡ ವಿಧಿಸಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರಿನಲ್ಲಿ ಕಳೆದ ರಾತ್ರಿ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಗೆ ಸಂಬಂಧಪಟ್ಟಂತೆ ಕನಿಷ್ಠ ನಿಧಾನಗತಿಯ ದಂಡಗಳಲ್ಲಿ ಇದು ರಾಯಲ್ ಚಾಲೆಂಜರ್ಸ್ ದಂಡದ ವಿರುದ್ಧ ಹಾಕಲಾಗಿರುವ ಮೊದಲ ದಂಡವಾಗಿದ್ದು, ವಿರಾಟ್ ಕೊಹ್ಲಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ನ ಪತ್ರಿಕಾ ಹೇಳಿಕೆ ತಿಳಿಸಿದೆ.
ದೇಶದ ಮೊಟ್ಟ ಮೊದಲ ಮಹಿಳಾ ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ಇಂದು ಮಲ್ಹೋತ್ರಾ ನೇಮಕ

ದೇಶದ ಮೊಟ್ಟ ಮೊದಲ ಮಹಿಳಾ ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ಇಂದು ಮಲ್ಹೋತ್ರಾ ನೇಮಕ

ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ಹಿರಿಯ ವಕೀಲೆ ಇಂದು ಮಲ್ಹೋತ್ರಾ ರನ್ನು ನೇಮಕ ಮಾಡಲಾಗಿದೆ. ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸುಪ್ರೀಂ ಕೋರ್ಟ್ ವಕೀಲೆಯೊಬ್ಬರನ್ನು ನ್ಯಾಯಾಧೀಶೆಯಾಗಿ ನೇಮಕಗೊಳಿಸಲಾಗಿದೆ. ಜ.22ರಂದು ಪ್ರಸ್ತುತ ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾ. ಕೆ.ಎಂ. ಜೋಸೆಫ್‌ ಮತ್ತು ಇಂದು ಮಲ್ಹೋತ್ರಾ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಪದನ್ನೋತಿಗಾಗಿ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಆದರೆ, ಮಲ್ಹೋತ್ರಾ ಅವರನ್ನು ಮಾತ್ರ ನೇಮಿಸಲು ಸರ್ಕಾರ ಉದ್ದೇಶಿಸಿದ್ದರಿಂದ ಫೆಬ್ರುವರಿ ಮೊದಲ ವಾರದಲ್ಲೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ್ದರೂ ನಿರ್ಧಾರ ಪ್ರಕಟಿಸಿರಲಿಲ್ಲ.
ಹಾಂಕಾಂಗ್ ನಿಂದಲೂ  ಸಾಲಗಾರ ನೀರವ್ ಮೋದಿ ಎಸ್ಕೇಪ್ !

ಹಾಂಕಾಂಗ್ ನಿಂದಲೂ ಸಾಲಗಾರ ನೀರವ್ ಮೋದಿ ಎಸ್ಕೇಪ್ !

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ರೂ ವಂಚಿಸಿ ಭಾರತ ಬಿಟ್ಟು ಓಡಿ ಹೋಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಇಷ್ಟು ದಿನ ಹಾಂಕಾಂಗ್ ನಲ್ಲಿ ನೆಲೆಸಿದ್ದಾನೆಂದು ಹೇಳಲಾಗಿತ್ತು. ಆದರೆ ಇದೀಗ ಹಾಂಕಾಂಗ್ ನಿಂದಲೂ ಪರಾರಿಯಾಗಿದ್ದಾನೆಂದು ವರದಿ ತಿಳಿಸಿದೆ. ಪಿಎನ್ ಬಿ ಹಗರಣ ಬಹಿರಂಗವಾಗುವುದಕ್ಕೂ ಮುನ್ನ ನೀರವ್ ಮೋದಿ ಭಾರತದಿಂದ ಕಾಲ್ಕಿತ್ತು ದುಬೈ ಮೂಲಕ ಹಾಂಕಾಂಗ್ ಗೆ ಪರಾರಿಯಾಗಿದ್ದ. ಇತ್ತೀಚೆಗೆ ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿ ದೇಶ ಬಿಟ್ಟಿರುವವರ ಆಸ್ತಿಯನ್ನು ಯಾವುದೇ ವಿಚಾರಣೆ ನಡೆಸದೆ ಮುಟ್ಟಗೋಲು ಹಾಕಿಕೊಳ್ಳಬಹುದೆಂಬ ಕಾನೂನು ಜಾರಿಗೆ ತಂದಿದೆ.