Short News

ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ಯಂತ್ರ

ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ಯಂತ್ರ

ರೈಲಿನಲ್ಲಿ ಸ್ವಚ್ಛತೆಯ ಬಗ್ಗೆ ಮಹಿಳೆಯರಿಗೆ ಜಾಗೃತಿ ಮೂಡಿಸುವ ಹಾಗೂ ಮಹಿಳೆಯರಿಗೆ ಉತ್ತಮ ಪ್ರಯಾಣ ಅನುಭವ ನೀಡುವ ದೃಷ್ಟಿಯಿಂದ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪರಿಸರ ಸ್ನೇಹಿ ಆಟೋಮೆಟಿಕ್ ಸ್ಯಾನಿಟರಿ ನ್ಯಾಪ್ ಕಿನ್ ಯಂತ್ರವನ್ನು ಅಳವಡಿಸಿದೆ. 

ಸ್ಯಾನಿಟರಿ ನ್ಯಾಪ್ ಕಿನ್ ಉತ್ಪಾದಿಸುವ ಯಂತ್ರ ಮತ್ತು ನ್ಯಾಪ್ ಕಿನ್ ಗಳನ್ನು ಹೊರಹಾಕಲು ಇರುವ ಪರಿಸರ ಸ್ನೇಹಿ ಯಂತ್ರವನ್ನು ಪ್ರಯೋಗಾರ್ಥವಾಗಿ ಅಳವಡಿಸಲಾಗಿದೆ. ಎರಡು ಉಪಕರಣಗಳನ್ನು ನಗರದ ಎರಡು ನಿಲ್ದಾಣಗಳಲ್ಲಿರುವ ಮಹಿಳೆಯರ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯದಲ್ಲಿ ಇಡಲಿದೆ. 

ದೇಶದಲ್ಲಿ ಪ್ರತೀ ನಾಲ್ಕು ಗಂಟೆಗೊಬ್ಬ ಬ್ಯಾಂಕ್ ಅಧಿಕಾರಿಯಿಂದ ವಂಚನೆ

ದೇಶದಲ್ಲಿ ಪ್ರತೀ ನಾಲ್ಕು ಗಂಟೆಗೊಬ್ಬ ಬ್ಯಾಂಕ್ ಅಧಿಕಾರಿಯಿಂದ ವಂಚನೆ

ಆರ್‌ಬಿಐ ಅಂಕಿಅಂಶಗಳ ಪ್ರಕಾರ ಪ್ರತಿ ನಾಲ್ಕು ಗಂಟೆಗೆ ಒಬ್ಬ ಬ್ಯಾಂಕ್‌ ಉದ್ಯೋಗಿ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾನೆ ಎನ್ನುವ ಹೊಸ ಆಘಾತಕಾರಿ ಅಂಶ ಬಯಲಿಗೆ ಬಂದಿದೆ. 2015ರಿಂದ 2017ರ ಮಾರ್ಚ್ ತಿಂಗಳವರೆಗಿನ ಸಮಯದಲ್ಲಿ ಬರೋಬ್ಬರಿ 5,200 ಬ್ಯಾಂಕಿಂಗ್ ಅಧಿಕಾರಿಗಳನ್ನು ವಂಚನೆ ಪ್ರಕರಣದಡಿ ಬಂಧಿಸಿದ್ದು, ಈ ಪ್ರಕರಣಗಳಲ್ಲಿ ಅವರಿಗೆ ದಂಡನೆ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ 1,538 ಅಧಿಕಾರಿಗಳು ಕಳೆದ ಮೂರು ವರ್ಷಗಳಲ್ಲಿ ವಂಚನೆಯಾರೋಪದಡಿ ಕಠಿಣ ಕ್ರಮ ಎದುರಿಸಿದ್ದಾರೆ.
ಗೂಂಡಾಗಿರಿ ಪ್ರಕರಣ: ಶಾಸಕ ಹ್ಯಾರಿಸ್ ಪುತ್ರ ಪೊಲೀಸರಿಗೆ ಶರಣು

ಗೂಂಡಾಗಿರಿ ಪ್ರಕರಣ: ಶಾಸಕ ಹ್ಯಾರಿಸ್ ಪುತ್ರ ಪೊಲೀಸರಿಗೆ ಶರಣು

ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದಾನೆ. ಸತತ 37ಗಂಟೆ ನಲಪಾಡ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಫೆ.17ರಂದು ವಿದ್ವತ್ ಎಂಬಾತನ ಮೇಲೆ ಹಲ್ಲೆ ನಡೆಸಿ ನಾಪತ್ತೆಯಾಗಿದ್ದ ನಲಪಾಡ್ ಸೋಮವಾರ ಖುದ್ದು ಪೊಲೀಸರಿಗೆ ಶರಣಾಗಿದ್ದಾನೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಈ ರೀತಿ ಮಾಡಲು ಅವನಿಗೆ ಅವಕಾಶ ನೀಡಿರಲಿಲ್ಲ. ನನ್ನ ಮಗನ ಕೃತ್ಯದಿಂದಾಗಿ ನನಗೂ ನೋವಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಇದಕ್ಕೂ ನನಗೂ ಸಂಬಂಧವಿಲ್ಲ. ನಾನು ತಪ್ಪು ಮಾಡಿಲ್ಲ, ಎಂದು ಶಾಸಕ ಹ್ಯಾರಿಸ್ ಹೇಳಿದ್ದರು.
BSNL ನಿಂದ ಗ್ರಾಹಕರಿಗೆ ಹೊಸ ರೂ.99 ಪ್ಲಾನ್

BSNL ನಿಂದ ಗ್ರಾಹಕರಿಗೆ ಹೊಸ ರೂ.99 ಪ್ಲಾನ್

ಇಡೀ ದೇಶದಲ್ಲಿ ಇರುವ ಎಲ್ಲಾ BSNL ಬಳಕೆದಾರರಿಗೆ ಈ ಆಫರ್ ಅನ್ನು ಲಾಂಚ್ ಮಾಡಿರುವ ರೂ.99 ಆಫರ್ ನಲ್ಲಿ 26 ದಿನಗಳ ವ್ಯಾಲಿಡಿಟಿಯನ್ನು ನೀಡಿದ್ದು, ಸಂಪೂರ್ಣವಾಗಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಲ್ಲದೇ BSNL ಬಳಕೆದಾರರಿಗೆ ಮತ್ತೊಂದು ಆಫರ್ ಅನ್ನು ನೀಡಿದ್ದು, ರೂ.319ಕ್ಕೆ ರಿಚಾರ್ಜ್ ಮಾಡಿಸಿದರೆ 90 ದಿನಗಳ ಅವಧಿಗೆ ಸಂಪೂರ್ಣವಾಗಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.