Short News

ಮಹಾರಾಷ್ಟ್ರದಲ್ಲಿ ಮಲ್ಟಿಪ್ಲೆಕ್ಸ್ ಗೆ ಗುನ್ನ, ಕರ್ನಾಟಕ ಸರ್ಕಾರ ಚಿನ್ನ

ಮಹಾರಾಷ್ಟ್ರದಲ್ಲಿ ಮಲ್ಟಿಪ್ಲೆಕ್ಸ್ ಗೆ ಗುನ್ನ, ಕರ್ನಾಟಕ ಸರ್ಕಾರ ಚಿನ್ನ

ಮಹಾರಾಷ್ಟ್ರ ರಾಜ್ಯ ಸರಕಾರ ಒಂದೊಳ್ಳೆ ಆದೇಶ ಹೊರಡಿಸಿದೆ. ಅದು ಜುಲೈ ಹದಿಮೂರರ ಶುಕ್ರವಾರದಿಂದಲೇ ಜಾರಿಗೂ ಬರ್ತಿದೆ. ಇಷ್ಟು ಕಾಲ ಮಲ್ಟಿಪ್ಲೆಕ್ಸ್ ಗಳೊಳಗೆ ಹೊರಗಿನ ಆಹಾರ ಪದಾರ್ಥ ತೆಗೆದುಕೊಂಡು ಹೋಗಲು ಅನುಮತಿ ಇರಲಿಲ್ಲ. ಇನ್ನು ಮುಂದೆ ಹಾಗಲ್ಲ. ಮಹಾರಾಷ್ಟ್ರದಲ್ಲಿ ತಡೆ ಮಾಡುವಂತಿಲ್ಲ. ಹಾಗೆ ತಡೆದರೆ ಅಂಥ ಮಲ್ಟಿಪ್ಲೆಕ್ಸ್ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಸರಕಾರ ಹೇಳಿದೆ. ಅಷ್ಟೇ ಅಲ್ಲ, ಮಲ್ಟಿಪ್ಲೆಕ್ಸ್ ನಲ್ಲಿ ಪಾನೀಯ ಹಾಗೂ ಆಹಾರ ಪದಾರ್ಥಗಳ ಬೆಲೆ ಹೆಚ್ಚಿದೆ ಎಂಬ ಆರೋಪದ ಬಗ್ಗೆ ಗಮನ ಇದ್ದು, ಶೀಘ್ರದಲ್ಲೇ ಅದನ್ನೂ ಬಗೆಹರಿಸುತ್ತೀವಿ ಎಂದು ಅಲ್ಲಿನ ಸಚಿವ ರವೀಂದ್ರ ಚವಾಣ್ ಹೇಳಿದ್ದಾರೆ.
ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದ ಹೋಂಡಾ ನವಿ..

ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದ ಹೋಂಡಾ ನವಿ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ 2018ರ ಹೊಸ ನವಿ ಸ್ಕೂಟರ್ ಅನ್ನು ಬಿಡುಗೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 44,775 ಸಾವಿರಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ. ಮಾರುಕಟ್ಟೆಗೆ ಮತ್ತೊಮ್ಮೆ ಲಗ್ಗೆಯಿಟ್ಟ ಹೋಂಡಾ ನವಿ ಸ್ಕೂಟರ್‍ ಈ ಬಾರಿ ಹೊಸ ವಿನ್ಯಾಸನವನ್ನು ಪಡೆದುಕೊಂಡಿದೆ. 2018ರ ಹೊಸ ಹೋಂಡಾ ನವಿ ಸ್ಕೂಟರ್ ತನ್ನ ಹಳೆಯ ಮಾದರಿಗಿಂತ ಬೆಲೆಯಲ್ಲಿ ರೂ.1991 ಸಾವಿರ ಅಧಿಕವಿದ್ದು, ಈ ಮೋಟೊ ಸ್ಕೂಟರ್‍ ಅನ್ನು ಸಂಪೂರ್ಣವಾಗಿ ಹೋಂಡಾ ರಿಸರ್ಚ್ ಆಂಡ್ ಡೆವೆಲಪ್‍‍ಮೆಂಟ್ ವಿನ್ಯಾಸ ಮಾಡಲಾಗಿದೆ. 
ಲೋಕಸಭೆಯಲ್ಲಿ ವಿಶ್ವಾಸ ಮತ ಗೆದ್ದ ಪ್ರಧಾನಿ ಮೋದಿ

ಲೋಕಸಭೆಯಲ್ಲಿ ವಿಶ್ವಾಸ ಮತ ಗೆದ್ದ ಪ್ರಧಾನಿ ಮೋದಿ

ಇಂದು ಬೆಳಗ್ಗಿನಿಂದ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಕುರಿತಂತೆ ಚರ್ಚೆ ನಡೆದಿದ್ದು, ಈಗ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದರು. ನಂತರ ಬಟನ್ ಒತ್ತುವ ಮೂಲಕ ವೋಟಿಂಗ್ ಮಾಡಿದ ಸದಸ್ಯರು 325 ಮಂದಿ ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ. 126 ಮಂದಿ ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಾಸ ಮತ ಗೆದ್ದಿದ್ದಾರೆ. ಲೋಕಸಭೆಯಲ್ಲಿ ಬಹುಮತ ಸಾಬೀತು ಪಡೆಯಲು 226 ಸದಸ್ಯರ ಬೆಂಬಲ ಬೇಕು.
ಪೊಲೀಸ್ ವೃತ್ತಿ ಪುರುಷ ಪ್ರಧಾನ: ರೂಪಾ ಮೌದ್ಗಿಲ್

ಪೊಲೀಸ್ ವೃತ್ತಿ ಪುರುಷ ಪ್ರಧಾನ: ರೂಪಾ ಮೌದ್ಗಿಲ್

ಪೊಲೀಸ್ ವೃತ್ತಿಯಲ್ಲಿರುವ ಮಹಿಳೆಯರ ಮನೋಭಾವ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ ಎಂದು ಐಪಿಎಸ್ ಅಧಿಕಾರಿ ರೂಪಾ ಡಿ. ಮೌದ್ಗಿಲ್ ಹೇಳಿದ್ದಾರೆ. ಐಐಎಂ-ಬಿ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಐಐಎಂಬ್ಯೂ 2018 ಲೀಡರ್‌ಶಿಪ್ ಸಮಾವೇಶದಲ್ಲಿ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ಮಹಿಳೆಯರು ಹೆಚ್ಚು ಧೈರ್ಯ ಮತ್ತು ತೊಂದರೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ರೂಪಾ ಪ್ರತಿಪಾದಿಸಿದರು. ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸುಲ್ ಜನರಲ್ ದಾನಾ ಕುರ್ಶ್ ಮತ್ತು ಬೆಂಗಳೂರು ವಿಜ್ಞಾನ ಗ್ಯಾಲರಿಯ ಸಂಸ್ಥಾಪಕ ನಿರ್ದೇಶಕಿ ಜಾಹ್ನವಿ ಫಾಲ್ಕೆ ಕೂಡ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more