Short News

ಸಲಿಂಗಕಾಮ ಅಪರಾಧವೆಂಬ ಪರಿಧಿಯಿಂದ ಮುಕ್ತವಾದರೆ ಎಲ್ಲಾ ಸಾಮಾಜಿಕ ಕಳಂಕದಿಂದ ಮುಕ್ತ: ಸುಪ್ರೀಂ

ಸಲಿಂಗಕಾಮ ಅಪರಾಧವೆಂಬ ಪರಿಧಿಯಿಂದ ಮುಕ್ತವಾದರೆ ಎಲ್ಲಾ ಸಾಮಾಜಿಕ ಕಳಂಕದಿಂದ ಮುಕ್ತ: ಸುಪ್ರೀಂ

ಸಲಿಂಗಕಾಮವೆಂಬುದು ಅಪರಾಧದ ಪರಿಧಿಯಿಂದ ಮುಕ್ತವಾದರೆ, ಸಾಮಾಜಿಕ ಕಳಂಕ ಎಂಬ ಭಾವನೆಯೂ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೆಕ್ಷನ್ 377 ರ ಕುರಿತು ಅಭಿಪ್ರಯಿಸಿದೆ. ಭಾರತದ ಸಮಾಜದಲ್ಲಿ ನಿರ್ಮಾಣವಾಗಿರುವ ವಾತಾವರಣದಿಂದಾಗಿ ಸಲಿಂಗಕಾಮವನ್ನು ಬೆಂಬಲಿಸುವ ಸಮುದಾಯದ ವಿರುದ್ಧ ತಾರತಮ್ಯ ಆಳವಾಗಿ ಬೇರೂರುವಂತೆ ಮಾಡಿದೆ ಎಂದು ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಹೇಳಿದ್ದು, ತಾರಮ್ಯ, ಸಲಿಂಗ ಕಾಮವೆಂಬುದು ಸಾಮಾಜಿಕ ಕಳಂಕ ಎಂಬ ಭಾವನೆ ಸಲಿಂಗಿಗಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಒಳ ಉಡುಪು: ನೀವು ಕೂಡ ಇಂತಹ ತಪ್ಪುಗಳನ್ನು ಮಾಡುತ್ತಿರಬಹುದು!!

ಒಳ ಉಡುಪು: ನೀವು ಕೂಡ ಇಂತಹ ತಪ್ಪುಗಳನ್ನು ಮಾಡುತ್ತಿರಬಹುದು!!

ಸಾಮಾನ್ಯವಾಗಿ ಒಳ ಉಡುಪುಗಳ ಬಗ್ಗೆ ನಾವು ಹೆಚ್ಚಿನ ಗಮನ ನೀಡುವುದಿಲ್ಲ, ಗಮನವೇನಿದ್ದರೂ ಇದರ ಮೇಲೆ ತೊಡುವ ಪ್ರಮುಖ ಉಡುಗೆಗಳ ಬಗ್ಗೆಯೇ ಇರುತ್ತದೆ. ವಿಕ್ಟೋರಿಯಾ ಉತ್ಪನ್ನದ ಗುಟ್ಟಿನ ರೂಪದರ್ಶಿ ನಾವಾಗಿಲ್ಲದಿದ್ದರೂ ಏನಾಯಿತು, ಹೊರ ಉಡುಪುಗಳಿಗೆ ನಾವು ಹೆಚ್ಚೇ ಮಹತ್ವ ನೀಡುತ್ತೇವೆ. ವಿಶೇಷವಾಗಿ ಮಹಿಳೆಯರಿಗೆ, ತಾವು ತೊಟ್ಟಿರುವ ಉಡುಗೆಗಳು ಎಲ್ಲಾ ಬಗೆಯಿಂದಲೂ ಒಪ್ಪುವಂತಿರಬೇಕು ಹಾಗೂ ಜೊತೆಗೆ ಬಳಸುವ ಉಡುಗೆಗಳೂ ಒಪ್ಪುವಂತಹ ಬಣ್ಣ, ವಿನ್ಯಾಸವನ್ನೇ ಹೊಂದಿರಬೇಕು. ಆಪ್ಪಿ ತಪ್ಪಿ ಹೊಂದಿಕೆಯಾಗದ ಬಣ್ಣದ ದಾವಣಿಯನ್ನೋ ಅಥವಾ ಬೇರಾವುದೋ ಉಡುಗೆ ತೊಟ್ಟರೆ ಮುಗಿಯಿತು ಕಥೆ, ಹೇಳುವವರ ಬಾಯಿಗೆ ಉಪ್ಪಿನಕಾಯಿ ಕೊಟ್ಟಂತಾಗುತ್ತದೆ.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ಮೋಟಾರ್ ಸ್ಪೋರ್ಟ್ ಕುರಿತಾಗಿ ಪ್ರತಿಯೊಬ್ಬರಿಗೂ ಕ್ರೇಜ್ ಇದ್ದೆ ಇರುತ್ತೆ. ಆದ್ರೆ ಟ್ರ್ಯಾಕ್‌‌ಗೆ ಬಂದಾಗ ಬಹುತೇಕರಿಗೆ ಅದು ಅಸಾಧ್ಯವಾಗದ ಮಾತು. ಇದೇ ಕಾರಣಕ್ಕೆ ಅದೆಷ್ಟೋ ಮೋಟಾರ್ ಸ್ಪೋರ್ಟ್ ಉತ್ಸಾಹಿಗಳು ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುವುದೇ ಇಲ್ಲ. ಇಂತಹ ಕಠಿಣ ಕ್ಷೇತ್ರದಲ್ಲೂ ಇದೀಗ ಬೆಂಗಳೂರಿನ 15 ವರ್ಷದ ಬಾಲಕನೊಬ್ಬ ಅದ್ಭುತ ಪ್ರದರ್ಶನ ತೊರುತ್ತಿದ್ದಾನೆ. ಬೆಂಗಳೂರು ಮೂಲದ ಟಿಜಿಲ್ ರಾವ್ ಸದ್ಯ 2018ರ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅದ್ಬುತ ಪ್ರದರ್ಶನ ತೋರುತ್ತಿದ್ದು, ಚೆನ್ನೈ ಮೂಲದ ಮೊಮೆಂಟಮ್ ಮೋಟಾರ್‌ಸ್ಪೋರ್ಟ್ಸ್ ತಂಡವನ್ನ ಪ್ರತಿನಿಧಿಸತ್ತಿದ್ದಾರೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಸೆಕ್ಯುರಿಟಿ ಹುದ್ದೆಗೆ ಅರ್ಜಿ ಆಹ್ವಾನ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಸೆಕ್ಯುರಿಟಿ ಹುದ್ದೆಗೆ ಅರ್ಜಿ ಆಹ್ವಾನ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹವಿಲ್ದಾರ್ (ಸೆಕ್ಯುರಿಟಿ) ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 14, 2018 ಕೊನೆಯ ದಿನಾಂಕ. ಅರ್ಜಿ ಸಲ್ಲಿಕೆಗೆ ಜುಲೈ 19, 2018 ಆರಂಭ ದಿನಾಂಕ. 10ನೇ ತರಗತಿ ಪಾಸಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೇ ಫಿಸಿಕಲ್ ಫಿಟ್ ನೆಸ್ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹುದ್ದೆ ಬಗೆಗಿನ ಹೆಚ್ಚಿನ ಮಾಹಿತಿಗಾಗಿ http://bel-india.in/ ಗೆ ಭೇಟಿ ನೀಡಿ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more