Short News

ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದಕ್ಕೆ ಪಾಕ್ ಗೆ ತಕ್ಕ ಶಾಸ್ತಿಯಾಗಲಿದೆ: ರಕ್ಷಣಾ ಸಚಿವೆ

ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದಕ್ಕೆ ಪಾಕ್ ಗೆ ತಕ್ಕ ಶಾಸ್ತಿಯಾಗಲಿದೆ: ರಕ್ಷಣಾ ಸಚಿವೆ

ಜಮ್ಮು ಕಾಶ್ಮೀರದ ಸಂಜ್ವಾನ್ ಸೇನಾ ಕ್ಯಾಂಪ್ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ಖಂಡಿಸಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಜಮ್ಮುವಿನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದ ಸಚಿವೆ ಈ ದಾಳೀಯ ಹಿಂದೆ ಭಯೋತ್ಪಾದಕ ಅಜರ್‌ ಮಹಮೂದ್ ಇದ್ದಾನೆ ಈತನಿಗೆ ಪಾಕ್ ರಕ್ಷಣೆ ನೀಡಿದೆ. ನಮ್ಮ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿರುವ ಪಾಕಿಸ್ತಾನ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ. ಜೊತೆಗೆ ಗಡಿಯಲ್ಲಿ ಶಾಂತಿ ನೆಲಸುವವರೆಗೆ ಪಾಕ್‌ನೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.
ಏರ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಡಾಕ್ಟರ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಏರ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಡಾಕ್ಟರ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಏರ್ ಇಂಡಿಯಾ ಡಾಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಎಪ್ರಿಲ್ 27 ರೊಳಗೆ ಅರ್ಜಿ ಸಲ್ಲಿಸಿ. ಏರ್ ಇಂಡಿಯಾ ನೇಮಕಾತಿಗೆ http://www.airindia.in/ ವೆಬ್ ನಲ್ಲಿ ಅಪ್ಲಿಕೇಶನ್ ಭರ್ತಿ ಮಾಡಿ ಅರ್ಜಿ ಜತೆ ನಿಮ್ಮ ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ರೂ 1000 ಡಿಮಾಂಡ್ ಡ್ರಾಫ್ಟ್ ಇಟ್ಟು ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಮುಂದಿನ ವಿಳಾಸಕ್ಕೆ ಕಳುಹಿಸಿ. General Manager-Personnel, Air India Limited: Western Region, Recruitment Section, Ground Floor, Technical (THQ) Bldg., Old Airport, Kalina, Santa Cruz East, Mumbai 400029.
ಇನ್ಮುಂದೆ ನಿಮ್ಮ ಹೀರೋ ಬೈಕಿಗೆ ಬೇಕಾದ ಸ್ಪೇರ್‌ಪಾರ್ಟ್‌ಗಳನ್ನು ಇಲ್ಲಿ ಖರೀದಿಸಿ

ಇನ್ಮುಂದೆ ನಿಮ್ಮ ಹೀರೋ ಬೈಕಿಗೆ ಬೇಕಾದ ಸ್ಪೇರ್‌ಪಾರ್ಟ್‌ಗಳನ್ನು ಇಲ್ಲಿ ಖರೀದಿಸಿ

ಪ್ರಪಂಚದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾಗಿರುವ ಹೀರೋ ಮೋಟೋಕಾರ್ಪ್ ಗ್ರಾಹಕರಿಗೆ ಅನುಕೂಲವಾಗುವಂತೆ ತಮ್ಮ ವಾಹನಗಳಿಗೆ ಬೇಕಾಗಿರುವ ಎಲ್ಲಾ ಸ್ಪೇರ್ ಪಾರ್ಟ್ ಗಳನ್ನು ಒಂದೆ ಜಾಗದಲ್ಲಿ ಖರೀದಿಸಲು ವೆಬ್‍‍ಸೈಟ್‍‍ವೊಂದನ್ನು ಬಿಡುಗಡೆ ಮಾಡಿದ್ದಾರೆ. ಹೀರೋ ಮೋಟೋಕಾರ್ಪ್ ಸಂಸ್ಥೆಯು ಬಿಡುಗಡೆಮಾಡಿರುವಂತಹ ವೆಬ್‍‍ಸೈಟ್‍‍ಗೆ HGP (ಹೀರೋ ಜೆನ್ಯೂನ್ ಪಾರ್ಟ್ಸ್) ಮಾರ್ಟ್ ಎಂದು ಹೆಸರಿಡಲಾಗಿದೆ. ಹೀರೋ ಮೋಟೋಕಾರ್ಪ್ ಸಂಸ್ಥೆಯು ಡೆಲ್ಹಿವರಿ ಎಂಬ ಇ ಕಾಮರ್ಸ್ ಎಂಬ ತಂಡದೊಂದಿಗೆ ಕೈ ಜೋಡಿಸಿದ್ದು, ಇದರ ಮೂಲಕವೆ ದೇಶದೆಲ್ಲೆಡೆ ಕಂಪೆನಿಯ ಸ್ಪೇರ್‍‍ಪಾರ್ಟ್‍ಗಳನ್ನು ಡೆಲಿವರಿ ಮಾಡಲಾಗುತ್ತದೆಯಂತೆ.
ಕರ್ನಾಟಕ ಎಲೆಕ್ಷನ್  : ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್

ಕರ್ನಾಟಕ ಎಲೆಕ್ಷನ್ : ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್

ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 126 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಶುಕ್ರವಾರ ಜೆಡಿಎಸ್‌ 58 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ವಲಸೆ ಬಂದ ಹಲವು ನಾಯಕರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜಿ.ಎಚ್.ರಾಮಚಂದ್ರ ಟಿಕೆಟ್ ಪಡೆದಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದ ನಟ ಶಶಿಕುಮಾರ್ ಹೊಸದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಪಡೆದಿದ್ದಾರೆ.