Short News

ಖ್ಯಾತ ಭೌತಶಾಸ್ತ್ರಜ್ಞ ಪ್ರೊ.ಸ್ಟಿಫನ್ ಹಾಕಿಂಗ್ ನಿಧನ

ಖ್ಯಾತ ಭೌತಶಾಸ್ತ್ರಜ್ಞ ಪ್ರೊ.ಸ್ಟಿಫನ್ ಹಾಕಿಂಗ್ ನಿಧನ

ವಿಶ್ವ ಪ್ರಸಿದ್ಧ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್(76) ನಿಧನರಾಗಿದ್ದಾರೆ ಎಂದು ಇಂಗ್ಲೆಂಡ್ ಮಾಧ್ಯಮಗಳು ವರದಿ ಮಾಡಿವೆ.

ಇಂಗ್ಲಿಷ್ ಭೌತಶಾಸ್ತ್ರಜ್ಞ, ಕಾಸ್ಮೊಲಾಜಿಸ್ಟ್ ಸ್ಟಿಫನ್ ಹಾಕಿಂಗ್ 40 ವರ್ಷಕ್ಕೂ ಅಧಿಕ ಕಾಲದಿಂದ ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು.

ಅವರ ನಿಧನದ ಸುದ್ದಿಯನ್ನು ಅವರ ಮಕ್ಕಳಾದ ಲ್ಯುಸಿ, ರಾಬರ್ಟ್ ಮತ್ತು ಟಿಮ್ ಖಚಿತಪಡಿಸಿದ್ದಾರೆ.

ಹಲವು ವರ್ಷಗಳಿಂದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ (ಅಥವಾ ALS)ಎಂಬ ತೀವ್ರತರದ ಸ್ನಾಯುಚಾಲಕ ನರಕೋಶದ ಖಾಯಿಲೆಗೆ ತುತ್ತಾಗಿ ವಿಪರೀತ ಅಶಕ್ತತೆ ಹೊಂದಿದ್ದರು.

ಎನ್’ಡಿಎ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಹಿನ್ನಡೆ: ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ

ಎನ್’ಡಿಎ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಹಿನ್ನಡೆ: ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ

ಪ್ರಧಾನಿ ಮೋದಿ ನೇತೃತ್ವದ ಎನ್'ಡಿಎ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಉಭಯ ಸದನಗಳಲ್ಲಿ ತೀವ್ರ ಗದ್ದಲ ಉಂಟಾಗಿ, ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಎನ್'ಡಿಎ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ವೈ.ವಿ.ಸುಬ್ಬಾ ರೆಡ್ಡಿಯವರು ಲೋಕಸಭೆ ಕಾರ್ಯದರ್ಶಿಗಳಿಗೆ ಈ ಹಿಂದೆ ಪತ್ರ ಬರೆದಿದ್ದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿತ್ತು. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು CM ಚಂದ್ರಬಾಬು ನಾಯ್ಡು ಪಟ್ಟು ಹಿಡಿದಿದ್ದು, ಬೇಡಿಕೆ ಈಡೇರಿಸದ ಕಾರಣ ಎನ್ ಡಿಎ ಮೈತ್ರಿಯಿಂದ ಹೊರ ಬಂದಿದ್ದರು.
ಗ್ಯಾಲಕ್ಸಿ ಎಸ್ 9+ VS ಐಫೋನ್ 10 'ಡ್ರಾಪ್ ಟೆಸ್ಟ್'!!(ವಿಡಿಯೊ)
<iframe width="600" height="450" src="https://www.youtube.com/embed/p7LWUVtrnOA" frameborder="0" allow="autoplay; encrypted-media" allowfullscreen></iframe>

ಗ್ಯಾಲಕ್ಸಿ ಎಸ್ 9+ VS ಐಫೋನ್ 10 'ಡ್ರಾಪ್ ಟೆಸ್ಟ್'!!(ವಿಡಿಯೊ)

ಪ್ರಸಿದ್ದ ಯೂಟ್ಯೂಬ್ ಚಾನಲ್ ಫೋನ್ ಬಫ್ ಯಾವಾಗಲೂ ವಿಶೇಷವಾಗಿಯೇ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ನೀಡುವುದರಿಂದ ಈ ಬಾರಿಯೂ ಅಂತಹುದೇ ವಿಶೇಷತೆಯನ್ನು ನಾವು ಎದುರುನೋಡಿದ್ದೇವೆ. ಇತ್ತೀಚಿಗೆ ಬಿಡುಗಡೆಯಾಗಿರುವ ವಿಶ್ವದ ಟಾಪ್ ಎರಡು ಸ್ಮಾರ್ಟ್‌ಫೋನ್‌ಗಳ ನಡುವೆ ಪೋನ್‌ ಬಫ್ 'ಡ್ರಾಪ್ ಟೆಸ್ಟ್' ನಡೆಸಿ ಗಮನಸೆಳೆದಿದೆ.!!

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 9 + ಮತ್ತು ಐಫೋನ್ 10 ನಂತಹ ದುಬಾರಿ ಸ್ಮಾರ್ಟ್‌ಫೋನ್‌ಗಳು ವಿವಿಧ ರೀತಿಯಲ್ಲಿ ಕೆಡವಿ ಯಾವ ಫೋನ್ ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂದು ಫೋನ್ ಬಫ್ ತನ್ನ ಅಂಕಗಳನ್ನು ನೀಡಿದೆ.!

ಕೋಬ್ರಾ ಕಿಸ್ಸರ್ ಖ್ಯಾತಿಯ ಹುಸೈನ್ ದುರಂತ ಅಂತ್ಯ

ಕೋಬ್ರಾ ಕಿಸ್ಸರ್ ಖ್ಯಾತಿಯ ಹುಸೈನ್ ದುರಂತ ಅಂತ್ಯ

ಕೋಬ್ರಾ ಕಿಸ್ಸರ್ ಎಂದೇ ಖ್ಯಾತಿ ಪಡೆದಿದ್ದ ಮಲೇಷ್ಯಾದ ಅಬು ಝರೀನ್ ಹುಸೈನ್ (33ವರ್ಷ) ವಿಷಪೂರಿತ ಹಾವು ಕಡಿದು ದುರಂತ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾವುಗಳೊಂದಿಗೆ ತೀವ್ರ ಒಡನಾಟ ಇಟ್ಟುಕೊಂಡಿದ್ದ ಹುಸೈನ್, ಹಾವುಗಳನ್ನು ಪಳಗಿಸೋದರಲ್ಲಿ ನಿಸ್ಸೀಮನಾಗಿದ್ದ. ಮಲೇಷ್ಯಾದ ಸ್ಥಳೀಯ ಅಗ್ನಿಶಾಮಕ ದಳದಲ್ಲಿ ಕಿಂಗ್ ಕೋಬ್ರಾ ಸ್ಕ್ವಾಡ್ ನ ಮುಖ್ಯಸ್ಥರಾಗಿ ಹುಸೈನ್ ಕಾರ್ಯನಿರ್ವಹಿಸುತ್ತಿದ್ದ. ವಿಪರ್ಯಾಸವೆಂದರೆ ಬೆನ್ ಟೋಂಗ್ ನಲ್ಲಿ ಹಾವು ಹಿಡಿಯುವ ಕಾರ್ಯಾಚರಣೆ ವೇಳೆಯೇ ವಿಷಪೂರಿತ ಹಾವೊಂದು ಹುಸೈನ್ ಗೆ ಕಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.