Short News

ಮೋದಿ ಫಿಟ್ನೆಸ್ ವಿಡಿಯೋ ನೋಡಿ ಮನಸಾರೆ ನಕ್ಕ ರಾಹುಲ್ ಗಾಂಧಿ!

ಮೋದಿ ಫಿಟ್ನೆಸ್ ವಿಡಿಯೋ ನೋಡಿ ಮನಸಾರೆ ನಕ್ಕ ರಾಹುಲ್ ಗಾಂಧಿ!

ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಮ್ ಫಿಟ್ ತೋ ಇಂಡಿಯಾ ಫುಟ್ ಹ್ಯಾಶ್ ಟ್ಯಾಗ್ ನಲ್ಲಿ ಪೋಸ್ಟ್ ಮಾಡಿದ್ದ ಫಿಟ್ನೆಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಹುಲ್ ಗಾಂಧಿ, ಮೋದಿ ವಿಡಿಯೋ ವಿಲಕ್ಷಣ ಮತ್ತು ಹಾಸ್ಯಾಸ್ಪದ ಎಂದು ನಕ್ಕಿದ್ದಾರೆ! ದೆಹಲಿಯ ಐಷಾರಾಮಿ ಹೊಟೇಲ್ ವೊಂದರಲ್ಲಿ ಅವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಹಲವು ಮುಖಂಡರೆದುರು ಅವರು ಮೋದಿಯವರನ್ನು ಆಡಿಕೊಂಡು ನಕ್ಕರು! ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.
ಫಿಲ್ಮ್ ಚೇಂಬರ್ ಕಡೆಯಿಂದ ಸಿ.ಎಂ ಎಚ್.ಡಿ.ಕುಮಾರಸ್ವಾಮಿಗೆ ಸನ್ಮಾನ

ಫಿಲ್ಮ್ ಚೇಂಬರ್ ಕಡೆಯಿಂದ ಸಿ.ಎಂ ಎಚ್.ಡಿ.ಕುಮಾರಸ್ವಾಮಿಗೆ ಸನ್ಮಾನ

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಡೆಯಿಂದ ಇಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದು ನೇತೃತ್ವದಲ್ಲಿ ಸನ್ಮಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು, ಕಲಾವಿದರು ಹಾಗೂ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಸಾಕ್ಷಿಯಾದರು.

ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಎಚ್.ಡಿ.ಕುಮಾರಸ್ವಾಮಿ ನಡೆದು ಬಂದ ದಾರಿಯನ್ನು ಮೆಲುಕು ಹಾಕುವ ವಿಡಿಯೋ ಪ್ರದರ್ಶನ ಮಾಡಿ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ನಿಕ್ ಜೊನಾಸ್ ಜೊತೆಗೆ ನಟಿ ಪ್ರಿಯಾಂಕಾ ಲಿವ್-ಇನ್ ರಿಲೇಶನ್ ಶಿಪ್.?

ನಿಕ್ ಜೊನಾಸ್ ಜೊತೆಗೆ ನಟಿ ಪ್ರಿಯಾಂಕಾ ಲಿವ್-ಇನ್ ರಿಲೇಶನ್ ಶಿಪ್.?

ಇತ್ತೀಚೆಗಂತೂ ವೈಯುಕ್ತಿಕ ವಿಚಾರಗಳಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಸದ್ದು ಮಾಡುತ್ತಿದ್ದಾರೆ. ಬೇಸ್ ಬಾಲ್ ಗೇಮ್ ನೋಡಲು Dodgers ಸ್ಟೇಡಿಯಂಗೆ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೋನಾಸ್ ಒಟ್ಟಿಗೆ ಹೋದ್ಮೇಲಂತೂ ಎಲ್ಲರ ಕಣ್ಣು ಇವರಿಬ್ಬರ ಮೇಲೆ ಬಿದ್ದಿದೆ. ಪ್ರಿಯಾಂಕಾ-ನಿಕ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಗಾಳಿಸುದ್ದಿ ಎಲ್ಲಾ ಕಡೆ ಗಿರಕಿ ಹೊಡೆಯುತ್ತಿದೆ. ಆದ್ರೆ, ತಮ್ಮಿಬ್ಬರ ನಡುವೆ ಇರುವ ನಂಟಿನ ಬಗ್ಗೆ ಪ್ರಿಯಾಂಕಾ ಆಗಲಿ, ನಿಕ್ ಆಗಲಿ ಸ್ಪಷ್ಟನೆ ಕೊಟ್ಟಿಲ್ಲ. ಹೊಸ ಗಾಸಿಪ್ ಒಂದರ ಪ್ರಕಾರ ತಮ್ಮೊಂದಿಗೆ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿ ಇರುವಂತೆ ಪ್ರಿಯಾಂಕಾ ಛೋಪ್ರಾಗೆ ನಿಕ್ ಜೋನಾಸ್ ಕೇಳಿಕೊಂಡಿದ್ದಾರಂತೆ.
ತೆಲಂಗಾಣ ಕೈ ಉಸ್ತುವಾರಿಗಳಾಗಿ ಕರ್ನಾಟಕದ ಬೋಸ್ ರಾಜು, ಸಲೀಂ ಅಹ್ಮದ್

ತೆಲಂಗಾಣ ಕೈ ಉಸ್ತುವಾರಿಗಳಾಗಿ ಕರ್ನಾಟಕದ ಬೋಸ್ ರಾಜು, ಸಲೀಂ ಅಹ್ಮದ್

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಅವರ ಜಾಗಕ್ಕೆ ಈಗ ಕರ್ನಾಟಕದ ಇಬ್ಬರು ಸೇರಿ, ಕೇರಳದ ಒಬ್ಬರನ್ನು ನೇಮಿಸಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸತೀಶ್ ಜಾರಕಿಹೊಳಿಯವರಿಗೆ ತೆಲಂಗಾಣ ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನೂ ನೀಡಲಾಗಿತ್ತು. ಆದರೆ ಅವರು ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಸ್ಥಾನವೂ ಖಾಲಿಯಾಗಿತ್ತು.
ಇದೀಗ ಮೂವರನ್ನು ಎಐಸಿಸಿ ಕಾರ್ಯದರ್ಶಿಗಳಾಗಿ ನೇಮಿಸಲಾಗಿದ್ದು, ಮೂವರಿಗೆ ಜಂಟಿಯಾಗಿ ತೆಲಂಗಾಣ ರಾಜ್ಯದ ಉಸ್ತುವಾರಿ ನೀಡಲಾಗಿದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more