Short News

ಫೆ. 19ರಂದು ರಾಜ್ಯಕ್ಕೆ ಮತ್ತೊಮ್ಮೆ ಮೋದಿ, ಮೈಸೂರಿನಲ್ಲಿ ಸಮಾವೇಶ

ಫೆ. 19ರಂದು ರಾಜ್ಯಕ್ಕೆ ಮತ್ತೊಮ್ಮೆ ಮೋದಿ, ಮೈಸೂರಿನಲ್ಲಿ ಸಮಾವೇಶ

2018ರ ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಫೆಬ್ರವರಿ 4ರಂದು ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಕರ್ನಾಟಕಕ್ಕೆ ಇನ್ನೂ ನಾಲ್ಕು ಬಾರಿ ಬರಲಿದ್ದಾರೆ. ಫೆಬ್ರವರಿ 19ರಂದು ಮೈಸೂರಿನಲ್ಲಿ ಮೊದಲ ಕಾರ್ಯಕ್ರಮ ನಿಗದಿಯಾಗಿದೆ. ಅಂದು ಮೈಸೂರಿಗೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಮೈಸೂರು-ರಾಜಸ್ಥಾನ ನಡುವಿನ ಹಮ್ ಸಫರ್ ಹಾಗೂ ಮೈಸೂರು-ಬೆಂಗಳೂರು ನಡುವಿನ ಎಲೆಕ್ಟ್ರಿಕ್ ಟ್ರೈನ್ ಗೆ ಚಾಲನೆ ನೀಡಲಿದ್ದಾರೆ.
ಶಿವಸೇನೆ ನಾಯಕ ಸಚಿನ್ ಸಾವಂತ್ ಗುಂಡಿಕ್ಕಿ ಹತ್ಯೆ

ಶಿವಸೇನೆ ನಾಯಕ ಸಚಿನ್ ಸಾವಂತ್ ಗುಂಡಿಕ್ಕಿ ಹತ್ಯೆ

ಶಿವಸೇನೆ ನಾಯಕ ಸಚಿನ್ ಸಾವಂತ್ ಹತ್ಯೆಯಾಗಿದ್ದಾರೆ. ಭಾನುವಾರ ರಾತ್ರಿ ಬೈಕ್ ನಲ್ಲಿ ಇಬ್ಬರು ಅಪರಿಚಿತರು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮುಂಬೈ ಉಪನಗರದ ಕಂಡಿವಾಲಿಯಲ್ಲಿ ಈ ಘಟನೆ ನಡೆದಿದೆ.
ಭಾನವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಗೋಕುಲ್ ನಗರ ಪ್ರದೇಶದಲ್ಲಿದ್ದ ವೇಳೆ ಸಾವಂತ್ ಮೇಲೆ ಬೈಕ್ ನಲ್ಲಿ ಬಂದ ಅಪರಿಚಿತರು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ.
ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ಸಾವಂತ್ ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ: ಮತ್ತೊಮ್ಮೆ ಸೂಚನೆ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ: ಮತ್ತೊಮ್ಮೆ ಸೂಚನೆ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್

ಬ್ಯಾಂಕ್‌ ಖಾತೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸ್ಪಷ್ಟಡಿಸಿದೆ. ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ನಿಯಮದ ಪ್ರಕಾರ ಪ್ರತಿಯೊಬ್ಬರೂ ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ವಿವಿಧ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ರಂದು ಗಡುವು ನೀಡಲಾಗಿದ್ದು, ಇದನ್ನು ಸಂವಿಧಾನಾತ್ಮಕ ಪೀಠದ ತೀರ್ಪು ಬರುವವರೆಗೂ ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ಮೊದಲಿಗೆ ಪ್ಯಾನ್ ಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ರ ಗಡುವು ನೀಡಲಾಗಿತ್ತು. ಕಲ್ಯಾಣ ಯೋಜನೆಗಳಿಗೆ ಜೂನ್ 30 ರೊಳಗೆ ಆಧಾರ್ ಲಿಂಕ್ ಮಾಡಬೇಕಿದೆ.
ಮಾಧ್ಯಮಗಳ ಎದುರು ಹೇಳಿಕೆ ನೀಡುವುದಕ್ಕೂ ಮುನ್ನ ಸ್ಪಷ್ಟತೆ ಇರಲಿ ಖಡಕ್ ವಾರ್ನಿಂಗ್ ಕೊಟ್ಟ ಮೋದಿ

ಮಾಧ್ಯಮಗಳ ಎದುರು ಹೇಳಿಕೆ ನೀಡುವುದಕ್ಕೂ ಮುನ್ನ ಸ್ಪಷ್ಟತೆ ಇರಲಿ ಖಡಕ್ ವಾರ್ನಿಂಗ್ ಕೊಟ್ಟ ಮೋದಿ

ಬಿಜೆಪಿಯ ಕೆಲವು ಸಂಸದರು, ಸಚಿವರು, ಶಾಸಕರು ನೀಡುತ್ತಿರುವ ಹೇಳಿಕೆಗಳು ಬಿಜೆಪಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಪ್ ಮೂಲಕ ಎಚ್ಚರಿಕೆ ನೀಡಿ ವಿವಾದಾತ್ಮಕ ಹೇಳಿಕೆ ನೀಡಬೇಡಿ ಎಂದಿದ್ದಾರೆ. ನಾವು ತಪ್ಪು ಮಾಡಿ ಮಾಧ್ಯಮಗಳಿಗೆ ಚರ್ಚೆಯ ಸರಕನ್ನು ಒದಗಿಸುತ್ತೇವೆ, ಕ್ಯಾಮರಾಗಳನ್ನು ನೋಡುತ್ತಿದ್ದಂತೆಯೇ ನಾವು ದೊಡ್ಡ ಸಮಾಜ ವಿಜ್ಞಾನಿಗಳು, ತಜ್ಞರು ಎಂಬಂತೆ ಹೇಳಿಕೆ ನೀಡಲು ಪ್ರಾರಂಭಿಸುತ್ತೇವೆ. ಇದರಿಂದ ಆಗುವ ಪ್ರಮಾದವನ್ನು ಮಾಧ್ಯಮಗಳು ಬಳಸಿಕೊಳ್ಳುತ್ತವೆ, ಆದರೆ ಅದು ಮಾಧ್ಯಮಗಳ ತಪ್ಪೂ ಅಲ್ಲ, ಹೇಳಿಕೆ ನೀಡಬೇಕಾದರೆ ಸ್ಪಷ್ಟತೆ ಇರಲಿ ಎಂದಿದ್ದಾರೆ ಮೋದಿ.