Short News

ಮುಖ್ಯಮಂತ್ರಿ ಮಾತಿಗೆ ರಾಜ ಮಾತೆ ಪ್ರಮೋದಾದೇವಿ ಎಂಥ ಉತ್ತರ!

ಮುಖ್ಯಮಂತ್ರಿ ಮಾತಿಗೆ ರಾಜ ಮಾತೆ ಪ್ರಮೋದಾದೇವಿ ಎಂಥ ಉತ್ತರ!

"ಯಾರ ಆಡಳಿತ ಹೇಗಿತ್ತು ಎಂಬುದು ಜನ ತೀರ್ಮಾನ ಮಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಅರ್ಥದಲ್ಲಿ, ಯಾವ ಸಂದರ್ಭದಲ್ಲಿ ಇದನ್ನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಆಡಳಿತಗಳ ಬಗ್ಗೆ ಜನ ತೀರ್ಮಾನ ಕೊಡುತ್ತಾರೆ" ಎಂದು ಮೈಸೂರಿನ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ. ಕಳೆದ ವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಮಹಾರಾಜರ ನಂತರ ನಮ್ಮ ಸರಕಾರವೇ ಹೆಚ್ಚು ಕೆಲಸ ಮಾಡಿದ್ದು ಎಂಬ ಹೇಳಿಕೆ ನೀಡಿದ್ದರು. ಸದ್ಯ ಆ ಹೇಳಿಕೆ ಬಹುಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾಗಿ ಬುಧವಾರ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಪ್ರತಿಕ್ರಿಯಿಸಿದ್ದಾರೆ.
LG ಯ G7, G7+ ಸ್ಮಾರ್ಟ್‌ಫೋನ್ ಫೋಟೋ ಲೀಕ್..! ಬೆಲೆ 54,700 ಮತ್ತು 60,700 ರೂ.

LG ಯ G7, G7+ ಸ್ಮಾರ್ಟ್‌ಫೋನ್ ಫೋಟೋ ಲೀಕ್..! ಬೆಲೆ 54,700 ಮತ್ತು 60,700 ರೂ.

LG ಕಂಪನಿಯು G7 ಮತ್ತು G7 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಸನಿಹದಲ್ಲಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳು ಹೇಗೆ ಕಾಣಿಸಲಿವೆ ಎನ್ನುವ ಪ್ರೋಮೊಷನ್ ಫೋಟೋವೊಂದನ್ನು ಬಿಡುಗಡೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ LG G7 ಮತ್ತು G7 ಪ್ಲಸ್ ಸ್ಮಾರ್ಟ್‌ಫೋನ್‌ ಲೆಮನ್ ಗ್ರೀನ್ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜೂನ್ ನಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಡ್ಯುಯಲ್ ಕ್ಯಾಮೆರಾ, LEDಫ್ಲಾಷ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್, 6.1 ಇಂಚಿನ 19.5:9ಅನುಪಾತದ ಡಿಸ್‌ಪ್ಲೇ ಅಳವಡಿಲಾಗಿದ್ದು, MLED+ ಡಿಸ್‌ಪ್ಲೇ ಇದಾಗಿದೆ. FHD+ಗುಣಮಟ್ಟವನ್ನು ಈ ಡಿಸ್‌ಪ್ಲೇ ಹೊಂದಿದೆ.
ಪೌರಕಾರ್ಮಿಕ 48 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪೌರಕಾರ್ಮಿಕ 48 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪುರಸಭೆಯಲ್ಲಿ ಖಾಲಿ ಇರುವ ಈ ಕೆಳಕಂಡ ಪೌರಕಾರ್ಮಿಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 31, 2018. ಈ ಹುದ್ದೆಗೆ ಯಾವುದೇ ವಿದ್ಯಾರ್ಹತೆ ಅನ್ವಯಿಸುವುದಿಲ್ಲ. ಕನ್ನಡ ಮಾತನಾಡಲು ಬರುವ ಯಾರಾದರೂ ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಕೆಲಕ್ಕೆ ಅರ್ಜಿ ಸಲ್ಲಿಸುವವರ ಗರಿಷ್ಟ ವಯಸ್ಸು 45 ವರ್ಷ ಆಗಿರಬೇಕು.
ಮೈಸೂರು-ಬೆಂಗಳೂರಿನ ವೊಡಾಫೋನ್ ಬಳಕೆದಾರರಿಗೆ ಸಂತಸದ ಸುದ್ದಿ..!

ಮೈಸೂರು-ಬೆಂಗಳೂರಿನ ವೊಡಾಫೋನ್ ಬಳಕೆದಾರರಿಗೆ ಸಂತಸದ ಸುದ್ದಿ..!

ವೊಡಾಫೋನ್ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 4G VoLTE ಯನ್ನು ನೀಡುವ ಯೋಜನೆಯನ್ನು ರೂಪಿಸಿದೆ. ಇದೇ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ 4G VoLTEಸೇವೆಯನ್ನು ವೊಡಾಫೋನ್ ಶುರು ಮಾಡಿದೆ. ಇದಲ್ಲದೇ ಮೈಸೂರು ಮತ್ತು ಬೆಳಗಾವಿಯಲ್ಲಿಯೂ 4G VoLTEಸೇವೆಯನ್ನು ಆರಂಭ ಮಾಡುತ್ತಿದೆ. ಸದ್ಯ ವೋಡಾಫೋನ್ 4G VoLTE ಸೇವೆಯೂ ಮುಂಬೈ, ದೆಹಲಿ, ಗುಜರಾತ್, ರಾಜಸ್ಥಾನ, ಪಶ್ವಿಮ ಬಂಗಾಳ, ಮಹಾರಾಷ್ಟ್ರ, ಗೋವಾ, ಹರಿಯಾಣ, ತಮಿಳುನಾಡು, ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಲಭ್ಯವಿದ್ದು, ಶೀಘ್ರವೇ ಪ್ಯಾನ್ ಇಂಡಿಯಾದಲ್ಲಿ ತನ್ನ ಸೇವೆಯನ್ನು ಆರಂಭಿಸಲು ವೊಡಾಫೋನ್ ಯೋಜನೆಯನ್ನು ಹಾಕಿಕೊಂಡಿದೆ.