Short News

ಹುಣಸೂರು: ಜನ ಮತ ಬಹಿಷ್ಕಾರ ಮಾಡುತ್ತೇವೆ ಎನ್ನಲು ಕಾರಣ ಹಲವು

ಹುಣಸೂರು: ಜನ ಮತ ಬಹಿಷ್ಕಾರ ಮಾಡುತ್ತೇವೆ ಎನ್ನಲು ಕಾರಣ ಹಲವು

ಹನುಮಜಯಂತಿ ವಿಚಾರವಾಗಿ ಇತ್ತೀಚೆಗೆ ಸುದ್ದಿಯಾಗಿದ್ದ ಹುಣಸೂರಿನಲ್ಲಿ ಚುನಾವಣೆಯ ಪ್ರಭಾವ ಅಷ್ಟೇನೂ ದಟ್ಟವಾಗಿಲ್ಲ. ಕೋಮು ಗಲಭೆಯ ತಿರುವು ಪಡೆಯುತ್ತಿರುವ ಈ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕೈ ತೊರೆದು ತೆನೆ ಹೊತ್ತ ಪಕ್ಷಕ್ಕೆ ಸೇರಿದ ವಿಶ್ವನಾಥ್ ಸ್ಪರ್ಧೆಗಿಳಿಯಲಿದ್ದಾರೆ.

ಚುನಾವಣೆ ವೇಳೆ ಮನೆ – ಮನೆಗೂ ತೆರಳುತ್ತಿರುವ ಜನನಾಯಕರಿಗೆ ಇಲ್ಲಿನ ಮತದಾರ ಪ್ರಭು ಸಮಸ್ಯೆಗಳ ದೊಡ್ಡ ಪಟ್ಟಿಯನ್ನೇ ಸಿದ್ಧಮಾಡಿ ಕೊಡುತ್ತಿದ್ದಾನೆ. ಇನ್ನು ಇಲ್ಲಿನ ಜಗಲಿಕಟ್ಟೆಯ ಮೇಲೆ ಕುಳಿತ ಕೆಲವು ಹಿರಿಯರು ನಮ್ಮ ಸಮಸ್ಯೆ ಬಗೆಹರಿಸದ ಇವರಿಗೆ ನಾವೇಕೆ ಮತ ನೀಡಬೇಕೆಂದು ಪ್ರಶ್ನೆ ಮುಂದಿಡುತ್ತಿದ್ದಾರೆ.

ನಿರುದ್ಯೋಗ ಮುಕ್ತ ಜಯನಗರಕ್ಕೆ ಸೌಮ್ಯ ರೆಡ್ಡಿ ಸಂಕಲ್ಪ

ನಿರುದ್ಯೋಗ ಮುಕ್ತ ಜಯನಗರಕ್ಕೆ ಸೌಮ್ಯ ರೆಡ್ಡಿ ಸಂಕಲ್ಪ

ಜಯನಗರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಯವರು 'ನಿರುದ್ಯೋಗ ಮುಕ್ತ ಜಯನಗರ' ಎಂಬ ಅಭಿಯಾನದಡಿ ಯುವಕ ಯುವತಿಯರಿಗಾಗಿ ನೆರವು ನೀಡುತ್ತಿರುವ, ಉದ್ಯೋಗ ಯೋಜನೆ ಕುರಿತಂತೆ ಸಾಕ್ಷ್ಯಚಿತ್ರದ ಮೂಲಕ ಭರದಿಂದ ಪ್ರಚಾರ ನಡೆಸಿದ್ದಾರೆ. ಮೂರು ನಿಮಿಷ 40 ಸೆಕೆಂಡುಗಳ ಸಾಕ್ಷ್ಯಚಿತ್ರದಲ್ಲಿ ಎಲಿವೇಟ್ ಲೈಫ್ ಎನ್ನುವ ಸಂಸ್ಥೆ ನಿರುದ್ಯೋಗಿ ಯುವಕರಿಗಾಗಿ ರೂಪಿಸಿರುವ ಹಲವಾರು ತರಬೇತಿ ಕಾರ್ಯಕ್ರಮಗಳು ಹಾಗೂ ಗ್ರಾಮೀಣ ಪ್ರದೇಶದಿಂದ ಬಂದು ಬೆಂಗಳೂರಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿರುವ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ಎಲೆವೇಟ್ ಲೈಫ್ ಸಂಸ್ಥೆ ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ರಾಜಕೀಯ 'ರಣರಂಗ'ದಲ್ಲಿ ಕಾದಾಡಲಿರುವ ಸಿನಿಮಾ ಮಂದಿ ಇವರೇ

ರಾಜಕೀಯ 'ರಣರಂಗ'ದಲ್ಲಿ ಕಾದಾಡಲಿರುವ ಸಿನಿಮಾ ಮಂದಿ ಇವರೇ

ದರ್ಶನ್, ಸುದೀಪ್, ಯಶ್, ಶಿವರಾಜ್ ಕುಮಾರ್, ಮಾಲಾಶ್ರೀ, ಸಾಧುಕೋಕಿಲಾ, ರಚಿತಾ ರಾಮ್, ಅಮೂಲ್ಯ ಹೀಗೆ.....ಹಲವು ನಟ-ನಟಿಯರು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಆತ್ಮೀಯ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳ ಪರವಾಗಿ ಪರವಾಗಿ ಪ್ರಚಾರ ಮಾಡಲಿದ್ದಾರೆ. ಮತ್ತೊಂದೆಡೆ ಸಿನಿಮಾ ರಂಗದಲ್ಲೇ ಗುರುತಿಸಿಕೊಂಡು ಕೋಟ್ಯಾಂತರ ಅಭಿಮಾನಿಗಳ ಅಭಿಮಾನ ಪಡೆದುಕೊಂಡಿದ್ದ ಕಲಾವಿದರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ನಟ ಸಾಯಿ ಕುಮಾರ್, ಅಂಬರೀಶ್, ಉಮಾಶ್ರೀ, ಸಿ.ಆರ್.ಮನೋಹರ್, ಮುನಿರತ್ನ, ಸಿಪಿ ಯೋಗೇಶ್ವರ್, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ಚುನಾವಣ ಅಖಾಡದಲ್ಲಿದ್ದಾರೆ.

ಬೈಕ್ ನಲ್ಲಿ ಸಾಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾದ ಯುವಕ ...! ಮುಂದೇನಾಯ್ತು ಗೊತ್ತಾ?

ಬೈಕ್ ನಲ್ಲಿ ಸಾಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾದ ಯುವಕ ...! ಮುಂದೇನಾಯ್ತು ಗೊತ್ತಾ?

ಕಣಿವೆ ನಾಡು ಜಮ್ಮು-ಕಾಶ್ಮೀರದ ದೋಡಾ ಎಂಬಲ್ಲಿ ಈ ಘಟನೆ ನಡೆದಿದ್ದು, ಬೈಕ್‌ ಮೇಲೆ ಬಂದ ಮೂವರು ಕಾಮುಕರು ನಡು ರಸ್ತೆಯಲ್ಲಿ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಆಕೆಯ ಸ್ಕೂಟಿ ನಿಲ್ಲಿಸಲು ಯತ್ನಿಸಿದ್ದಾರೆ. ಆ ವೇಳೆ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಯುವತಿ ನೇರವಾಗಿ ವ್ಯಕ್ತಿಯೋರ್ವನಿಗೆ ಗುದ್ದಿದ್ದಾಳೆ. ತದನಂತರ ಕೆಳಗೆ ಬಿದ್ದಿದ್ದಾಳೆ. ಘಟನೆ ನಡೆಯುತ್ತಿದ್ದಂತೆ ಇಬ್ಬರು ಯುವಕರು ಪರಾರಿಯಾಗಲು ಯತ್ನಿಸಿದ್ದು, ಕೆಲ ಸ್ಥಳೀಯರು ಅವರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ. ಇದರ ವಿಡಿಯೋ ಸದ್ಯ ವೈರಲ್‌ ಆಗಿದೆ.