Short News

ಯಾವ ಪ್ರಶ್ನೆಗೂ ಈಗ ಉತ್ತರಿಸಲಾರೆ: ರಜನಿಕಾಂತ್

ಯಾವ ಪ್ರಶ್ನೆಗೂ ಈಗ ಉತ್ತರಿಸಲಾರೆ: ರಜನಿಕಾಂತ್

ಪ್ರತಿ ವರ್ಷ ಅಧಾತ್ಮ ಪ್ರವಾಸ ಕೈಗೊಳ್ಳುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಈ ವರ್ಷವೂ ಉತ್ತರ ಭಾರತದ ಕೆಲವೆಡೆ ಪ್ರವಾಸ ಆರಂಭಿಸಿದ್ದಾರೆ. ಇಂದು(ಮಾ.14) ಉತ್ತರಾಖಂಡದ ಸ್ವಾಮಿ ದಯಾನಂದ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿದ ರಜನಿಕಾಂತ್, ಅವರಿಗಾಗಿ ಹೊರಗೆ ಕಾದು ನಿಂತಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ತಾವು ಅಧ್ಯಾತ್ಮ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ತನ್ನ ಹಳ್ಳಿಗೆ ಶುದ್ಧ ನೀರು ಪೂರೈಸಲು ಪ್ರತಿದಿನ 4 ಕಿ.ಮೀ ಈಜುವ ಸಾಹಿಸಿ ಮಹಿಳೆ

ತನ್ನ ಹಳ್ಳಿಗೆ ಶುದ್ಧ ನೀರು ಪೂರೈಸಲು ಪ್ರತಿದಿನ 4 ಕಿ.ಮೀ ಈಜುವ ಸಾಹಿಸಿ ಮಹಿಳೆ

ಶುದ್ಧ ಕುಡಿಯುವ ನೀರಿಗಾಗಿ ಇಂಡೊನೇಷ್ಯಾದ ಸುಲಾವೇಸಿ ದ್ವೀಪದ ಮಹಿಳೆ ಮಾಮ ಹಸ್ರಿಯಾ (46) ಪ್ರತಿ ದಿನ ನದಿಯಲ್ಲಿ ನಾಲ್ಕು ಕಿಲೊ ಮೀಟರ್‌ ಈಜುತ್ತಿದ್ದಾರೆ. ತಮ್ಮ ಸಮುದಾಯಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಕಾರ್ಯದಲ್ಲಿರುವ ಹಸ್ರಿಯಾ ಸುಮಾರು 200 ಖಾಲಿ ಕ್ಯಾನ್‌ಗಳನ್ನು ಬೆನ್ನಿಗೆ ಕಟ್ಟಿಕೊಂಡು ನದಿ ದಡದಲ್ಲಿರುವ ಬಾವಿಗಳಿಂದ ಶುದ್ಧ ಕುಡಿಯುವ ನೀರು ತರುತ್ತಾರೆ. ಈ ಮೂಲಕ ದ್ವೀಪದ ತಿನಾಮ್‌ಬಂಗ್‌ ಜಿಲ್ಲೆಯ 5,800 ಕುಟುಂಬಗಳಿಗೆ ನೀರು ಪೂರೈಸುತ್ತಾರೆ. ಇವರಿಗೆ ಗ್ರಾಮದ ಮತ್ತೊಬ್ಬ ಮಹಿಳೆ ಬೆಂಬಲವಾಗಿ ನಿಂತಿದ್ದಾರೆ. ಹಸ್ರಿಯಾಗೆ ಇದರಿಂದ 455 ರೂ ದೊರೆಯುತ್ತದೆ.
ಥಾಮಸ್‌ ಕಪ್:  ಫೈನಲ್ಸ್‌ ಟೂರ್ನಿಗೆ ಸುಲಭ ಡ್ರಾ ಪಡೆದ ಭಾರತ

ಥಾಮಸ್‌ ಕಪ್: ಫೈನಲ್ಸ್‌ ಟೂರ್ನಿಗೆ ಸುಲಭ ಡ್ರಾ ಪಡೆದ ಭಾರತ

ಬ್ಯಾಂಕಾಕ್‌ನಲ್ಲಿ ಮೇ 20-27ರವರೆಗೆ ನಡೆಯುವ ಬಿಡ್ಲ್ಯುಎಫ್‌ ಥಾಮಸ್‌ ಮತ್ತು ಊಬರ್ ಕಪ್‌ ಫೈನಲ್ಸ್‌ ಟೂರ್ನಿಯಲ್ಲಿ ಭಾರತ ಸುಲಭ ಡ್ರಾ ಪಡೆದಿದೆ. ಎರಡೂ ಟೂರ್ನಿಗಳಿಗೆ ಭಾರತ ಪುರುಷರ ಮತ್ತು ಮಹಿಳೆಯರ ತಂಡಗಳು ‘ಎ' ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತ ಮಹಿಳೆಯರ ತಂಡ ಕಳೆದ ಎರಡು ಆವೃತ್ತಿಗಳಲ್ಲಿ ಸೆಮಿಫೈನಲ್ ತಲುಪಿತ್ತು. ಈ ಬಾರಿ ಜಪಾನ್‌, ಕೆನಡಾ, ಆಸ್ಟ್ರೇಲಿಯಾ ತಂಡಗಳೊಂದಿಗೆ ‘ಎ' ಗುಂಪಿನಲ್ಲಿದ್ದು, ಪಿ.ವಿ ಸಿಂಧು ಮುನ್ನಡೆಸಲಿದ್ದಾರೆ. ಥಾಮಸ್‌ ಕಪ್‌ನಲ್ಲಿ ಪುರುಷರ ತಂಡ ಚೀನಾ, ಫ್ರಾನ್ಸ್‌, ಆಸ್ಟ್ರೇಲಿಯಾ ತಂಡಗಳೊಂದಿಗೆ ಸ್ಥಾನದಲ್ಲಿದ್ದು ಕಿದಂಬಿ ಶ್ರೀಕಾಂತ್ ಮುನ್ನಡೆಸಲಿದ್ದಾರೆ.
ಲಿಂಗಾಯತ-ವೀರಶೈವ ಒಂದೇ : ಶಾಮನೂರು ಶಿವಶಂಕರಪ್ಪ

ಲಿಂಗಾಯತ-ವೀರಶೈವ ಒಂದೇ : ಶಾಮನೂರು ಶಿವಶಂಕರಪ್ಪ

ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಖಂಡಿಸಿದೆ. ಬೆಂಗಳೂರಿನ ಸದಾಶಿವ ನಗರದಲ್ಲಿ ಶುಕ್ರವಾರ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. 'ವೀರಶೈವ ಲಿಂಗಾಯತ ಎರಡೂ ಒಂದೇ, ಆದ್ದರಿಂದ, ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಲಾಗಿದೆ. ಖಂಡನಾ ನಿರ್ಣಯವನ್ನು ಅಂಗೀಕರಿಸಲಾಗಿದೆ' ಎಂದರು. 'ಲಿಂಗಾಯತ ಮತ್ತು ವೀರಶೈವ ಒಂದೇ ಎಂದು 2013ರಲ್ಲಿ ಅ.ಭಾ.ವೀ.ಮಹಾಸಭಾ ಕೇಂದ್ರಕ್ಕೆ ಪತ್ರ ಬರೆದಿತ್ತು. ಈ ಪತ್ರವನ್ನು ಪರಿಗಣಿಸಬೇಕು' ಎಂದು ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ.