Short News

ಬಿಜೆಪಿಯಿಂದ ಮರಣೋತ್ತರ ಸದಸ್ಯತ್ವ ಅಭಿಯಾನ: ರಾಮಲಿಂಗಾ ರೆಡ್ಡಿ

ಬಿಜೆಪಿಯಿಂದ ಮರಣೋತ್ತರ ಸದಸ್ಯತ್ವ ಅಭಿಯಾನ: ರಾಮಲಿಂಗಾ ರೆಡ್ಡಿ

'ಬಿಜೆಪಿ ಮರೋಣೋತ್ತರ ಸದಸ್ಯತ್ವ ಅಭಿಯಾನ ಮಾಡುತ್ತಾರೆ, ರಾಜ್ಯದಲ್ಲಿ ಯಾರೇ ಸತ್ತರು ಅವರು ನಮ್ಮ ಪಕ್ಷದವರು ಅಂತಾ ಹೇಳಿ ಸುಳ್ಳು ಹೋರಾಟ ಮಾಡುತ್ತಾರೆ' ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. 

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾನೂನು ಸುವ್ಯವಸ್ಥೆ ಹದಗೆಟ್ಟತ್ತು, ಬಿಜೆಪಿ ಅಧಿಕಾರಾವಧಿಯಲ್ಲಿ ಎಂಟು ಸಾವಿರ ಕೊಲೆಗಳು ನಡೆದಿದ್ದವು, ನಮ್ಮ ಸರ್ಕಾರದ ಅವಧಿಯಲ್ಲಿ 7 ಸಾವಿರ ಕೊಲೆಗಳು ನಡೆದಿವೆ' ಎಂದು ಲೆಕ್ಕ ಒಪ್ಪಿಸಿದರು.

ಮಂಗಳ ಗ್ರಹದ ಶಿಲಾಪದರದಲ್ಲಿ ನೀರಿನ ಅಂಶ ಪತ್ತೆ?

ಮಂಗಳ ಗ್ರಹದ ಶಿಲಾಪದರದಲ್ಲಿ ನೀರಿನ ಅಂಶ ಪತ್ತೆ?

ನಾಸಾದ ಕ್ಯೂರಿಯಾಸಿಟಿ ರೋವರ್ ನೌಕೆಯು ಮಂಗಳ ಗ್ರಹದಲ್ಲಿ ಶಿಲಾಪದರವನ್ನು ಪತ್ತೆ ಮಾಡಿದ್ದು, ಇದು ಭೂಮಿಯ ಕೆಲವು ಪರ್ವತಗಳ ಇಳಿಜಾರಿನಲ್ಲಿ ಕಂಡುಬರುವ ಶಿಲಾಪದರವನ್ನೇ ಹೋಲುತ್ತಿದೆ. ತೇವದಿಂದ ಕೂಡಿದ ಮಣ್ಣು ನಿರಂತರವಾಗಿ ಘನೀಕರಣಕ್ಕೆ ಒಳಗಾದಾಗ ಶಿಲಾಪದರಗಳು ರೂಪುಗೊಂಡಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನವರಿ 2004ರಂದು ಕೆಂಪು ಗ್ರಹಕ್ಕೆ ಅಡಿಯಿಟ್ಟ ರೋವರ್ ನೌಕೆಯು 5 ಸಾವಿರ ‘ಮಂಗಳ ದಿನ'ಗಳನ್ನು ಪೂರೈಸಿದ್ದು, ಸದ್ಯ ‘ಪರ್ಸೀವರೆನ್ಸ್ ವ್ಯಾಲಿ' ಎಂಬ ಜಾಗದಲ್ಲಿ ಈಗ ಕಾರ್ಯಾಚರಣೆ ನಡೆಸುತ್ತಿದೆ. ಇದು ಸುತ್ತಾಡಿದ ಎಲ್ಲ ಜಾಗಗಳನ್ನು ಗಮನಿಸಿದಾಗ ಈ ಜಾಗ ಅತ್ಯಂತ ವಿಭಿನ್ನವಾಗಿ ಕಂಡುಬಂದಿದೆ.
ಟಿ20 : ಸೋಲಿನ ಕಹಿ ಜತೆಗೆ ದಕ್ಷಿಣ ಆಫ್ರಿಕಾಕ್ಕೆ ದೊಡ್ದ ಆಘಾತ

ಟಿ20 : ಸೋಲಿನ ಕಹಿ ಜತೆಗೆ ದಕ್ಷಿಣ ಆಫ್ರಿಕಾಕ್ಕೆ ದೊಡ್ದ ಆಘಾತ

ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಸೋಲು ಕಂಡಿರುವ ಅತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ಎಬಿ ಡಿ ವಿಲಿಯರ್ಸ್ ಅವರು ಗಾಯಾಳುವಾಗಿದ್ದು, ಸರಣಿಯಿಂದ ಹೊರ ನಡೆದಿದ್ದಾರೆ. ಮೂರು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 28 ರನ್ ಅಂತರದಿಂದ ಸೋಲು ಕಂಡಿತು. ಸೆಂಚೂರಿಯನ್ ನಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಡಿ'ವಿಲಿಯರ್ಸ್ ಅವರು ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು.
ಪ್ರಕಾಶ-ಜಗ್ಗೇಶ ನಡುವೆ ಟ್ವಿಟ್ಟರ್ ನಲ್ಲಿ 'ಅರ್ಹತೆ' ಪ್ರಶ್ನೋತ್ತರ

ಪ್ರಕಾಶ-ಜಗ್ಗೇಶ ನಡುವೆ ಟ್ವಿಟ್ಟರ್ ನಲ್ಲಿ 'ಅರ್ಹತೆ' ಪ್ರಶ್ನೋತ್ತರ

ನಟ ಕಮ್ ರಾಜಕಾರಣಿ ಜಗ್ಗೇಶ್ ಹಾಗೂ ನಟ ಪ್ರಕಾಶ್ ರೈ ನಡುವಿನ ಪ್ರಶ್ನೋತ್ತರ ಸರಣಿಯ ಸಾರಾಂಶ ಇಲ್ಲಿದೆ. ಮೋದಿಗೆ ರಾಜ್ಯಭಾರ ಮಾಡಲು ಅರ್ಹತೆ ಇದೆಯೇ? ಎಂದು ಪ್ರಶ್ನಿಸಿದ್ದ ರೈ ವಿರುದ್ಧ ಜಗ್ಗೇಶ್ ತಿರುಗಿ ಬಿದ್ದಿದ್ದರು. ನಂತರ ತಮ್ಮ ಟಿಪಿಕಲ್ ಭಾಷೆ ಪ್ರಯೋಗಿಸಿ, ಪ್ರಕಾಶ್ ರೈ ಅವರ ಅರ್ಹತೆ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಪ್ರಕಾಶ್ ರೈ ಅವರು ಉತ್ತರಿಸಿದ್ದು, ಜಗ್ಗೇಶ್ ಅವರೇ ನಿಮ್ಮ ಭಾಷೆ ಪ್ರಯೋಗದಲ್ಲಿ ಶುದ್ಧತೆ ಇರಲಿ ಎಂದಿದ್ದಾರೆ. ಇಬ್ಬರ ನಡುವಿನ ಚರ್ಚೆಯಿಂದ ವಿವಾದ ಉಂಟಾಗಿದೆ ಎಂದು ವರದಿ ಮಾಡಿದ ಮಾಧ್ಯಮಗಳಿಗೂ ಜಗ್ಗೇಶ್ ಟಾಂಗ್ ಕೊಟ್ಟಿದ್ದಾರೆ.