Short News

ಐಎಎಸ್ ಅಧಿಕಾರಿಗಳ ಮುಷ್ಕರವನ್ನು ವಾಪಸ್ ಪಡೆಯುವಂತೆ ಕೇಂದ್ರ ಸೂಚಿಸಬೇಕೆಂದು ಮೋದಿಗೆ ಪತ್ರಬರೆದ ಕೇಜ್ರಿವಾಲ್

ಐಎಎಸ್ ಅಧಿಕಾರಿಗಳ ಮುಷ್ಕರವನ್ನು ವಾಪಸ್ ಪಡೆಯುವಂತೆ ಕೇಂದ್ರ ಸೂಚಿಸಬೇಕೆಂದು ಮೋದಿಗೆ ಪತ್ರಬರೆದ ಕೇಜ್ರಿವಾಲ್

ಐಎಎಸ್ ಅಧಿಕಾರಿಗಳು ತಮ್ಮ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರದಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಐಎಎಸ್ ಅಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಕ್ಷ ಕೆಲಸ ಮಾಡುವುದಾಗಿ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಆದರೂ ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಕೇಜ್ರಿವಾಲ್ ದೆಹಲಿಯ ರಾಜ್ಯಪಾಲರ ನಿವಾಸದಲ್ಲಿ ಕೈಗೊಂಡಿರುವ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದೆ.
ಮೊಬೈಲ್ ಪ್ರತಿಬಿಂಬ ಕಂಪ್ಯೂಟರ್‌ನಲ್ಲಿ ಪಡೆಯುವುದು ಇನ್ಮುಂದೆ ಸುಲಭ!!

ಮೊಬೈಲ್ ಪ್ರತಿಬಿಂಬ ಕಂಪ್ಯೂಟರ್‌ನಲ್ಲಿ ಪಡೆಯುವುದು ಇನ್ಮುಂದೆ ಸುಲಭ!!

ಕೆಲವೇ ತಿಂಗಳ ಹಿಂದೆ ಮೈಕ್ರೋಸಾಫ್ಟ್ ತನ್ನ ವಾರ್ಷಿಕೋತ್ಸವ ಅಪ್ ಡೇಟ್ ವಿಂಡೋಸ್ 10 ನ್ನು ಬಿಡುಗಡೆಗೊಳಿಸಿದೆ. . ಆಪರೇಟಿಂಗ್ ಸಿಸ್ಟಮ್ ಗೆ ಇನ್ನಷ್ಟು ಟೂಲ್ಸ್ ಗಳನ್ನು ಸೇರಿಸಿ ಎಂಡ್ ಯ್ಯೂಸರ್ ಗೆ ಜೀವನ ಸುಲಭವಾಗುವಂತೆ ಮಾಡುವ ಉದ್ದೇಶವನ್ನು ಇದರಲ್ಲಿ ಹೊಂದಲಾಗಿತ್ತು. ವೈಶಿಷ್ಟ್ಯಗಳಾದ ಟೈಮ್ ಲೈನ್, ನಿಯರ್ ಬೈ ಶೇರಿಂಗ್, ಫೋಕಸ್ ಅಸಿಸ್ಟ್ ಇತ್ಯಾದಿಗಳನ್ನು ಇದರಲ್ಲಿ ಪರಿಚಯಿಸಲಾಗಿದೆ. ಇದರಲ್ಲಿ ತುಂಬಾ ಪ್ರಮುಖ ವೈಶಿಷ್ಟ್ಯವೊಂದನ್ನು ಸೇರಿಸಲಾಗಿದ್ದು ಅದನ್ನು ಇನ್ನು ಯಾರು ಗುರುತಿಸಿಲ್ಲ. ಅದುವೇ ನಿಮ್ಮ ಸ್ಮಾರ್ಟ್ ಫೋನ್ ಡಿಸ್ಪ್ಲೇಯ ಕನ್ನಡಿ ಬಿಂಬವನ್ನು ವೈಯರ್ ಲೆಸ್ ಆಗಿ ನಿಮ್ಮ ಪಿಸಿಯಲ್ಲಿ ಪಡೆಯುವುದು.

25 ವರ್ಷಗಳಿಂದ ಒಂದೇ ಸ್ಥಳದಲ್ಲಿದೆ ಮಂದಿರ ಮತ್ತು ಮಸೀದಿ, ಕೋಮು ಸಾಮರಸ್ಯದಿಂದ್ದಾರೆ ಇಲ್ಲಿಯ ಜನ

25 ವರ್ಷಗಳಿಂದ ಒಂದೇ ಸ್ಥಳದಲ್ಲಿದೆ ಮಂದಿರ ಮತ್ತು ಮಸೀದಿ, ಕೋಮು ಸಾಮರಸ್ಯದಿಂದ್ದಾರೆ ಇಲ್ಲಿಯ ಜನ

ಕಳೆದ 25 ವರ್ಷಗಳಿಂದ ಪಶ್ಚಿಮ ಬಂಗಾಳದ ಜಾರ್ಗಗ್ರಾಮ್ ಎಂಬ ಪ್ರದೇಶದ ಒಂದೇ ಸ್ಥಳದಲ್ಲಿ ಮಸೀದಿ ಮತ್ತು ದೇವಾಲಯಗಳಿದ್ದು ಅಲ್ಲಿನ ಜನ ಕೋಮು ಸೌಹಾರ್ಧತೆ ಮೆರೆದಿದ್ದಾರೆ. ಈ ಮಂದಿರದಲ್ಲಿ ಹಿಂದೂಗಳು ಶಿವನನ್ನು ಪೂಜಿಸುತ್ತಾರೆ ಹಾಗೂ ಮುಸಲ್ಮಾನರು ಪವಿತ್ರ ಖುರಾನ್ ಗ್ರಂಥವನ್ನು ಪಠಿಸುತ್ತಾರೆ. ನಾವು ಕಾಳಿ ಮಾತೆಯನ್ನು ನೋಡುತ್ತೇವೆ ಹಾಗೆಯೇ ನಮಾಜ್ ಕೂಡ ಮಾಡುತ್ತೇವೆ ಎಂದು ಅಲ್ಲಿಯ ಸ್ಥಳೀಯರೊಬ್ಬರು ತಿಳಿಸಿದ್ದಾರೆ. ನಾರಾಯಣ ಚಂದ್ರ ಆಚಾರ್ಯ ಎಂಬ ಬ್ರಾಹ್ಮಣ ಈ ಸ್ಥಳದ ಕೇರ್ ಟೇಕರ್ ಆಗಿದ್ದಾರೆ. ದಶಕಗಳಿಂದಲೂ ಇಲ್ಲಿ ಈ ಆಚರಣೆ ಜಾರಿಯಲ್ಲಿದ್ದು, ಯಾವುದೇ ಗಲಾಟೆಗಳು ನಡೆದಿಲ್ಲ.
ಸಮಾಜಕ್ಕೆ ಸಂದೇಶ ಸಾರಲು ಬರುತ್ತಿದೆ 'ಅಸತೋಮ ಸದ್ಗಮಯ'

ಸಮಾಜಕ್ಕೆ ಸಂದೇಶ ಸಾರಲು ಬರುತ್ತಿದೆ 'ಅಸತೋಮ ಸದ್ಗಮಯ'

ಹೆತ್ತವರು ಆಶ್ರಮ ಪಾಲಾಗಲು ನಮ್ಮ ಎಜುಕೇಶನ್ ಸಿಸ್ಟಂ ಕೂಡಾ ಕಾರಣ. ಈಗೇನಿದ್ದರೂ ಸ್ಪರ್ಧಾತ್ಮಕ ಜಗತ್ತು. ಸ್ವಲ್ಪ ಯಾಮಾರಿದ್ರೂ ನಾವು ತುಂಬಾ ಹಿಂದೆ ಉಳಿದು ಬಿಡ್ತೀವಿ. ನಮ್ಮ ಮಕ್ಕಳು ದೊಡ್ಡವರಾರದ ಮೇಲೆ ದೊಡ್ಡ ಕೆಲಸದಲ್ಲಿರಬೇಕು, ಕೈತುಂಬಾ ದುಡೀಬೇಕು ಎನ್ನುವುದು ಹೆತ್ತವರ ಆಸೆ. ಹಾಗಾಗಿ ಈ ಸ್ಪರ್ದಾತ್ಮಕ ಜಗತ್ತಿನಲ್ಲಿ ಗೆಲ್ಲಲು ತಯಾರಿ ಮಗು ಹೊಟ್ಟೆಯಲ್ಲಿರುವಾಗಲೇ ಶುರುವಾಗುತ್ತದೆ.ಮೊದಲ ಹೆಜ್ಜೆ ಮಗುವಿಗೆ ಉತ್ತಮ ಶಾಲೆಗೆ ಸೇರಿಸುವುದಾದರೆ, ಎರಡನೆಯದು ಮಕ್ಕಳಿಗೆ ಅದಕ್ಕೆ ಪೂರಕವಾದ ಕಲೆಗಳ ಟ್ರೈನಿಂಗ್. ಹೀಗೆ ಮಕ್ಕಳಿಗೆ ಕರಿಯರ್ ಓರಿಯೆಂಟೆಡ್ ಟ್ರೈನಿಂಗ್ ಚಿಕ್ಕಂದಿನಿಂದಲೇ ಪ್ರಾರಂಭವಾಗುತ್ತದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more