Short News

ಎಂಎಆರ್ ಯೋಜನೆ: ಪ್ರತಿ 1 ಕಿಮೀ ರಸ್ತೆಗೆ ಬರೋಬ್ಬರಿ  43 ಕೋಟಿ ವೆಚ್ಚ!

ಎಂಎಆರ್ ಯೋಜನೆ: ಪ್ರತಿ 1 ಕಿಮೀ ರಸ್ತೆಗೆ ಬರೋಬ್ಬರಿ 43 ಕೋಟಿ ವೆಚ್ಚ!

ನಾಡಪ್ರಭು ಕೆಂಪೇಗೌಡ ಬಡಾವಣೆಯಿಂದ ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆಯನ್ನು ಸಂಪರ್ಕಿಸುವ 10.7 ಕಿ.ಮೀ ರಸ್ತೆಗೆ ಬರೋಬ್ಬರಿ 466 ಕೋಟಿ ರೂ ವೆಚ್ಚಮಾಡಲಾಗುತ್ತಿದ್ದು ಪ್ರತಿ ಕಿ.ಮೀ ಗೆ 43 ಕೋಟಿ ರೂ ತಲುಗುಲುತ್ತದೆ ಈ ಸುದ್ದಿ ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದೆ.

ನಮ್ಮ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನಕ್ಕೆ ಖರ್ಚಾಗಿರುವುದ 450 ಕೋಟಿ. ಆದರೆ, ಇದಕ್ಕಿಂತ ಹೆಚ್ಚಿನ ಹಣವನ್ನು ಸಿದ್ದರಾಮಯ್ಯ ಸರ್ಕಾರ ಬರೀ 10 ಕಿಲೋಮೀಟರ್ ರಸ್ತೆಗೆ ಖರ್ಚು ಮಾಡಲು ಹೊರಟಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಿಯಾಜ್ ಕಾರು..

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಿಯಾಜ್ ಕಾರು..

ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೊಸ ಸಿಯಾಜ್ ಫೇಸ್‍ಲಿಫ್ಟ್ ಕಾರನ್ನು ಇದೇ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಹೊಸ ಫೇಸ್‌ಲಿಫ್ಟ್ ಮತ್ತೊಮ್ಮೆ ಗ್ರಾಹಕರನ್ನು ಮೋಡಿ ಮಾಡುವ ತವಕದಲ್ಲಿದೆ.ಡೀಸೆಲ್ ಮಾದರಿಯಲ್ಲಿ ಹೊಸ ಎಂಜಿನ್ ಅನ್ನು ವಿನ್ಯಾಸಗೊಳಿಸಿರುವುದು ಮಾರುತಿ ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಪ್ರಮುಖ ಬದಲಾವಣೆಯಾಗಿದ್ದು, ಬಿಡುಗಡೆಗು ಮುನ್ನವೆ ಭಾರತೀಯ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್  ನಡೆಸುವ ವೇಳೆ ಕಾಣಿಸಿಕೊಂಡಿದೆ.
ರಾಶಿ ಭವಿಷ್ಯ: ನೋಡಿ ಈ ಆರು ರಾಶಿಯವರು ಬಹಳ ಬುದ್ಧಿವಂತರಂತೆ!

ರಾಶಿ ಭವಿಷ್ಯ: ನೋಡಿ ಈ ಆರು ರಾಶಿಯವರು ಬಹಳ ಬುದ್ಧಿವಂತರಂತೆ!

ಮಿಥುನ ರಾಶಿಯಲ್ಲಿ ಜನಸಿದ ವ್ಯಕ್ತಿಗಳಿಗೆ ಬುಧಗ್ರಹ ಅಧಿಪತಿಯಾಗಿದ್ದಾನೆ. ಬುಧ ಸಂವಹನದ ಗ್ರಹವಾಗಿದ್ದು ಅವಳಿಗಳ ಒಡೆಯನೂ ಆಗಿರುವ ಕಾರಣ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಉತ್ತಮ ವಾಗ್ಮಿಗಳೂ, ಸುಲಭವಾಗಿ ನಗೆಚಟಾಕಿ ಹಾರಿಸುವವರೂ ಹಾಗೂ ಜಾಣರೂ ಆಗಿರುತ್ತಾರೆ. ವೃಶ್ಚಿಕ ರಾಶಿಯ ಜನರು ಕೊಂಚ ಭಿನ್ನ ವ್ಯಕ್ತಿತ್ವ ಹೊಂದಿದ್ದು ತರ್ಕಬದ್ದವಲ್ಲದ ನಿರ್ಧಾರಗಳನ್ನು ಪ್ರಕಟಿಸುವವರಾಗಿದ್ದರೂ ಜಾಣರು ಹೇಗಾಗುತ್ತಾರೆ ಎಂದು ಅಚ್ಚರಿ ಪಡಬೇಡಿ. ಆದರೆ ಇವರು ಇಷ್ಟಪಟ್ಟ ವಿಷಯದ ಕುರಿತು ನಡೆಸುವ ಆಳವಾದ ಅಧ್ಯಯನ ಇವರ ಏಕಾಗ್ರತೆಯನ್ನು ಹೆಚ್ಚಿಸಿ ಹೆಚ್ಚು ಹೆಚ್ಚಾಗಿ ಪ್ರೇರಣೆ ನೀಡುವವರೂ ಆಗಿರುತ್ತಾರೆ.

ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ 80 ಸಾವಿರ ಉದ್ಯೋಗ ಅವಕಾಶ

ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ 80 ಸಾವಿರ ಉದ್ಯೋಗ ಅವಕಾಶ

  • ಉದ್ಯೋಗ ಹುಡುಕುವವರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ರಿಲಯನ್ಸ್ ಜಿಯೋ ಸುಮಾರು 75 ಸಾವಿರದಿಂದ 80 ಸಾವಿರ ಜನರನ್ನು ನೇಮಕ ಮಾಡಲು ಯೋಜಿಸುತ್ತಿದೆ ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸಂಜಯ್ ಜೋಗ್ ಹೇಳಿದ್ದಾರೆ. ಮಾರಾಟ ಮತ್ತು ತಾಂತ್ರಿಕ ವಿಭಾಗದ ಪರಿಣಿತರಿಗೆ ಹೆಚ್ಚಿನ ಉದ್ಯೋಗ ಸಿಗಲಿದೆ.
  • ಜಿಯೋ ಕಂಪೆನಿಯು ದೇಶಾದ್ಯಂತ ತಾಂತ್ರಿಕ ಸಂಸ್ಥೆಗಳನ್ನು ಒಳಗೊಂಡಂತೆ ಸುಮಾರು 6,000 ಕಾಲೇಜುಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆಯೆಂದು ಜೋಗ್ ಹೇಳಿದ್ದಾರೆ.