Short News

ಸಂಜು ಚಿತ್ರದ ವಿರುದ್ಧ ಕಿಡಿಕಾರಿದ ಆರೆಸ್ಸೆಸ್ ಮುಖವಾಣಿ

ಸಂಜು ಚಿತ್ರದ ವಿರುದ್ಧ ಕಿಡಿಕಾರಿದ ಆರೆಸ್ಸೆಸ್ ಮುಖವಾಣಿ

ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ನ ಮುಖವಾಣಿ 'ಪಾಂಚಜನ್ಯ'ದಲ್ಲಿ ಹಿಂದಿ ಸಿನಿಮಾ 'ಸಂಜು' ಬಗ್ಗೆ ಕಟು ಶಬ್ದಗಳಿಂದ ಟೀಕಾಪ್ರಹಾರ ಮಾಡಲಾಗಿದೆ. ನಟ ಸಂಜಯ್ ದತ್ ಅವರ ಜೀವನ ಆಧಾರಿತ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟ ರಣಬೀರ್​ ಕಪೂರ್​, ಪರೇಶ್ ರಾವಲ್, ಮನಿಷಾ ಕೊಯಿರಾಲಾ, ಸೋನಂ ಕಪೂರ್ ಮುಂತಾದವರು ಅಭಿನಯಿಸಿದ್ದು, ರಾಜ್ ಕುಮಾರ್ ಹಿರಾನಿ ನಿರ್ದೇಶನವಿದೆ. ಜೂನ್ 29ರಂದು ತೆರೆ ಕಂಡ ಚಿತ್ರ, ಭರ್ಜರಿ ಯಶಸ್ಸು ಕಂಡಿದೆ. ಸಂಜು ಚಿತ್ರ ಸೇರಿದಂತೆ ಬಾಲಿವುಡ್ ನಲ್ಲಿ ಖಳಪಾತ್ರಗಳನ್ನು ವಿಜೃಂಭಿಸುವಂತೆ ಚಿತ್ರಗಳು ಬರುತ್ತಿರುವುದನ್ನು ಆಕ್ಷೇಪಿಸಿ, ಪಾಂಚಜನ್ಯದಲ್ಲಿ ಕವರ್ ಸ್ಟೋರಿ ಮಾಡಲಾಗಿದೆ.
ಇಹಲೋಕ ತ್ಯಜಿಸಿದ ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ

ಇಹಲೋಕ ತ್ಯಜಿಸಿದ ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ

ಉಡುಪಿಯ ಅಷ್ಠಮಠಾಧೀಶರಲ್ಲೊಬ್ಬರಾದ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳು(55) ಇಂದು ಇಹಲೋಕ ತ್ಯಜಿಸಿದರು. ಬುಧವಾರ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತವಾಂತಿ ಮಾಡಿದ್ದರಿಂದ ಸಂಜೆಯಿಂದಲೇ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಅವರ ದೇಹ ಸ್ಪಂದಿಸುತ್ತಿರಲಿಲ್ಲ. ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು ಎಂದು ತಿಳಿದುಬಂದಿದೆ. ಕಳೆದ ಕೆಲ ತಿಂಗಳುಗಳಿಂದ ಶ್ರೀಗಳಿಗೆ ಆಗಾಗ ಆರೋಗ್ಯ ಸಮಸ್ಯೆ ಎದುರಾಗುತ್ತಲೇ ಇತ್ತು.ಈ ಹಿಂದೆ ಥೈರಾಯ್ಡ್ ಸಮಸ್ಯೆ ಇದ್ದಿದ್ದರಿಂದ ಶೀರೂರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.
ಭಾರತದ ನೌಕಾದಳದ ಯುದ್ಧ ಸಾಮಾಗ್ರಿಗಳ ನಾಶಕ್ಕೆ ಜೈಶ್ ಸಂಘಟನೆ  ತರಬೇತಿ!

ಭಾರತದ ನೌಕಾದಳದ ಯುದ್ಧ ಸಾಮಾಗ್ರಿಗಳ ನಾಶಕ್ಕೆ ಜೈಶ್ ಸಂಘಟನೆ ತರಬೇತಿ!

ಜೈಶ್​-ಎ-ಮೊಹಮ್ಮದ್ ಉಗ್ರಸಂಘಟನೆ ಸಮುದ್ರಕ್ಕಿಳಿದು ಭಾರತದ ನೌಕಾದಳದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂಬ ಆಘಾತಕಾರಿ ಸ್ಫೋಟಕ ಮಾಹಿತಿ ಹರಿದಾಡುತ್ತಿದೆ. ಈ ಸಂಬಂಧ ಭಾರತದ ಇಂಟೆಲಿಜೆನ್ಸ್​ ವಿಂಗ್​ ನೌಕಾದಳಕ್ಕೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ರವಾನಿಸಿದೆ. ಇಂಟೆಲಿಜೆನ್ಸ್​ಗೆ ದೊರೆತಿರುವ ಮಾಹಿತಿಯಂತೆ ಜೈಶ್ ಉಗ್ರರು ಪಾಕಿಸ್ತಾನದ ಬಹವಲ್ಪುರದಲ್ಲಿ ಸಾಗದಾಳಕ್ಕಿಳಿಯುವ ತಂತ್ರಗಾರಿಕೆ ಕುರಿತಂತೆ ತರಬೇತಿ ಪಡೆಯುತ್ತಿದೆ. ಎಂದು ತಿಳಿದುಬಂದಿದೆ.
ಕೊಯಿನೂರ್ ವಜ್ರ  ಭಾರತಕ್ಕೆ ತರಲು ವಿದೇಶಿ ಅಧಿಕಾರಿಗಳೊಂದಿಗೆ ಮಾತುಕತೆ

ಕೊಯಿನೂರ್ ವಜ್ರ ಭಾರತಕ್ಕೆ ತರಲು ವಿದೇಶಿ ಅಧಿಕಾರಿಗಳೊಂದಿಗೆ ಮಾತುಕತೆ

ಜಗತ್ತಿನ ಅಮೂಲ್ಯ ವಜ್ರಗಳಲ್ಲಿ ಒಂದಾಗಿರುವ ಕೊಹಿನೂರ್ ಮತ್ತು ಇತರ ಪ್ರಾಚೀನ ವಸ್ತುಗಳನ್ನು ವಾಪಸ್ ತರುವ ಕುರಿತಂತೆ ವಿದೇಶಿ ಅಧಿಕಾರಿಗಳ ಜತೆ ಚರ್ಚಿಸುತ್ತಿರುವುದಾಗಿ ಕೇಂದ್ರ ಸಚಿವ ವಿಕೆ ಸಿಂಗ್ ಹೇಳಿದ್ದಾರೆ.ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ವಿಕೆ ಸಿಂಗ್ ಭಾರತೀಯರು ಮತ್ತು ಸಂಸತ್ ವ್ಯಕ್ತಪಡಿಸಿದ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದ ಪುರಾತತ್ವ ಸಮೀಕ್ಷೆಯಿಂದ ಮಾಹಿತಿ ಪಡೆದು ಮತ್ತೆ ಕೊಹಿನೂರ್ ಮತ್ತು ಇತರ ಪ್ರಾಚೀನ ವಸ್ತುಗಳನ್ನು ವಾಪಸ್ ತರಲು ವಿದೇಶಿ ಅಧಿಕಾರಿಗಳ ಜತೆ ಚರ್ಚಿಸುತ್ತಿರುವುದಾಗಿ ಹೇಳಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more