Short News

ಈ ದೇವಸ್ಥಾನದಲ್ಲಿ ರಾತ್ರಿ ಹೊತ್ತು ಮಾತ್ರ ಮಹಿಳೆಯರಿಗೆ ಪ್ರವೇಶ..

ಈ ದೇವಸ್ಥಾನದಲ್ಲಿ ರಾತ್ರಿ ಹೊತ್ತು ಮಾತ್ರ ಮಹಿಳೆಯರಿಗೆ ಪ್ರವೇಶ..

ಕೇರಳದಲ್ಲಿರುವ ಈ ಶಿವನ ದೇವಸ್ಥಾನದಲ್ಲಿ ಮಹಿಳೆಯರಿಗೆ ಕೇವಲ ರಾತ್ರಿಯ ಹೊತ್ತು ಮಾತ್ರ ಪ್ರವೇಶವಂತೆ. ಅದೂ ಕೂಡಾ ಸಾಯಂಕಾಲ 7.15 ರ ಪೂಜೆಯ ನಂತರವೇ ಮಹಿಳೆಯರು ದೇವಸ್ಥಾನದ ಒಳಗೆ ಹೋಗಬಹುದು. ಈ ದೇವಸ್ಥಾನವು ಶಕ್ತಿ ಪೀಠಗಳಲ್ಲಿ ಒಂದೂ ಆಗಿದೆ. ಜೊತೆಗೆ ಜ್ಯೋತಿರ್ಲಿಂಗಗಳಲ್ಲಿಯೂ ಒಂದಾಗಿದೆ. ಕೇರಳದ ಕಣ್ಣೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿ ತಾಲಿಪರಂಬದ ಶ್ರೀ ರಾಜರಾಜೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನವು ಶಿವನಿಗೆ ಮೀಸಲಾಗಿರುವ ದೇವಾಲಯ ಎನ್ನಲಾಗಿದೆ. ಈ ದೇವಸ್ಥಾನವನ್ನು ನಂತರ ಪರಶುರಾಮ ನವೀಕರಿಸಿದನು ಎನ್ನಲಾಗುತ್ತದೆ.
ಆತ್ಮಶ್ಲಾಘನೆ ಮಾಡಿಕೊಳ್ಳುವ ರಾಶಿಗಳು

ಆತ್ಮಶ್ಲಾಘನೆ ಮಾಡಿಕೊಳ್ಳುವ ರಾಶಿಗಳು

ಮೇಷ ರಾಶಿಯವರು ತುಂಬಾ ಆತ್ಮಶ್ಲಾಘನೆ ಮಾಡಿಕೊಳ್ಳುವವರು. ಇವರಲ್ಲಿ ಪರಿತ್ಯಾಗ ಸಮಸ್ಯೆಗಳಿರುವುದು. ಸಮಾಜದಲ್ಲಿ ಹೆಸರು ಪಡೆಯಲು ಇವರು ಹೆಚ್ಚು ವ್ಯಸ್ತರಾಗಿರುವರು. ಇವರು ಹೆಚ್ಚಾಗಿ ಸ್ವಹಿತಾಸಕ್ತಿಯತ್ತ ದೃಷ್ಟಿಹರಿಸಿರುವರು. ಇವರು ಬೇರೆಯವರು ಭಾವನೆ ಹಾಗೂ ಆಲೋಚನೆಗಳನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮದೇ ದಾಟಿಯಲ್ಲಿ ಬದುಕುವರು. ಇನ್ನು ಸಿಂಹದ ಅಧಿಪತಿ ಸೂರ್ಯ ಮತ್ತು ಇವರು ಯಾವಾಗಲೂ ಆಕರ್ಷಣೆಯ ಕೇಂದ್ರವಾಗಿರಲು ಬಯಸುವರು. ಇವರು ಕೇಂದ್ರವಾಗಿರಲು ಬಯಸುವರು ಮತ್ತು ಸ್ವಾಅಭಿವ್ಯಕ್ತಿಯ
ಶಕ್ತಿಯನ್ನು ಸಮಾಜಕ್ಕೆ ತೋರಿಸಲು ಪ್ರಯತ್ನಿಸುವರು.

ಮುಗಿದ ವಿಶ್ವಾಸ ಮತ, ಬಿರುಸುಗೊಂಡ ಸಂಪುಟ ರಚನೆ ಕಸರತ್ತು

ಮುಗಿದ ವಿಶ್ವಾಸ ಮತ, ಬಿರುಸುಗೊಂಡ ಸಂಪುಟ ರಚನೆ ಕಸರತ್ತು

ಕರ್ನಾಟಕ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಗೆದ್ದಿದ್ದಾರೆ. ಇದೀಗ ಸರಕಾರ ಭದ್ರವಾಗುತ್ತಿದ್ದಂತೆ ಬಹು ನಿರೀಕ್ಷಿತ ಸಂಪುಟ ರಚನೆ ಕಸರತ್ತು ಬಿರುಸು ಪಡೆದುಕೊಂಡಿದೆ.

ಸಂಪುಟ ರಚನೆ ಸಂಬಂಧ ಇಂದು ಸಿಎಂ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮತ್ತು ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಬೆಂಗಳೂರಿನಲ್ಲಿ ಸಭೆ ನಡೆಸಿದರು.

ನಾಳೆ ನವದೆಹಲಿಗೆ ಕುಮಾರಸ್ವಾಮಿ ಮತ್ತು ಪರಮೇಶ್ವರ್ ತೆರಳಲಿದ್ದು ಪ್ರಮುಖವಾಗಿ ಸಂಪುಟ ರಚನೆ ಸಂಬಂಧ ಚರ್ಚೆ ಮುಗಿಸಿಕೊಂಡ ವಾಪಸಾಗಲಿದ್ದಾರೆ.

ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ?

ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ?

ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡಲು ಬಹುತೇಕರಿಗೆ ತಿಳಿದಿರುವುದಿಲ್ಲ. ಏಕೆಂದರೆ, ಫೇಸ್‌ಬುಕ್‌ನಲ್ಲಿನ ಎಲ್ಲ ಬಳಕೆದಾರರು ಬೇಕಾದಾಗಲೆಲ್ಲ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡಲು ಸಾಧ್ಯವಿಲ್ಲ. ಕೆಲ ಸಂದರ್ಭಗಳಲ್ಲಿ ಪಿಡಿಎಫ್ ಫೈಲ್ ಶೇರ್ ಮಾಡಬಹುದಾದರೂ, ಫೇಸ್‌ಬುಕ್‌ ವಾಣಿಜ್ಯ ಪುಟ ಮತ್ತು ಗ್ರೂಪ್‌ನಲ್ಲಿ ಸಾಧ್ಯ.ಹಾಗಾಗಿ, ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನಲ್ಲಿ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more