Short News

ಬೈಸಿಕಲ್‌ ಏರಿದ ನವ ವಿವಾಹಿತ ಜೋಡಿ ತೇಜ್‌ ಪ್ರತಾಪ್‌ ಮತ್ತು ಐಶ್ವರ್ಯಾ ರಾಯ್‌

ಬೈಸಿಕಲ್‌ ಏರಿದ ನವ ವಿವಾಹಿತ ಜೋಡಿ ತೇಜ್‌ ಪ್ರತಾಪ್‌ ಮತ್ತು ಐಶ್ವರ್ಯಾ ರಾಯ್‌

ಮೇ 12ರಂದು ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್‌ ರಾಯ್‌ ಅವರ ಮೊಮ್ಮಗಳು ಐಶ್ವರ್ಯಾ ರಾಯ್‌ ರನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ವಿವಾಹವಾಗಿದ್ದರು. ಸದ್ಯ ನೂತನ ವಿವಾಹಿತ ಜೋಡಿ ತೇಜ್‌ ಪ್ರತಾಪ್‌ ಮತ್ತು ಐಶ್ವರ್ಯಾ ರಾಯ್‌ ಅವರು ಬೈಸಿಕಲ್‌ ಏರಿ, ಸಿನೆಮಾ ತಾರಾ ಜೋಡಿಯಂತೆ ರೊಮ್ಯಾಂಟಿಕ್‌ ಆಗಿ ವಾಯು ಪ್ರೇಮ ವಿಹಾರ ನಡೆಸುವ ಫೋಟೋಗಳು ಇನ್‌ಸ್ಟಾಗ್ರಾಂ, ಫೇಸ್‌ ಬುಕ್‌ ಮತ್ತು ಟ್ಟಿಟರ್‌ನಲ್ಲಿ ವೈರಲ್‌ ಆಗಿವೆ.
ಕಾವೇರಿ ನದಿ ನೀರು ಕೇಳಿದ ರಜನೀಕಾಂತ್ ರನ್ನು ಕರ್ನಾಟಕಕ್ಕೆ ಆಹ್ವಾನಿಸಿದ ಕುಮಾರಸ್ವಾಮಿ

ಕಾವೇರಿ ನದಿ ನೀರು ಕೇಳಿದ ರಜನೀಕಾಂತ್ ರನ್ನು ಕರ್ನಾಟಕಕ್ಕೆ ಆಹ್ವಾನಿಸಿದ ಕುಮಾರಸ್ವಾಮಿ

ನಿಯೋಜಿತ ಮುಖ್ಯಮಂತ್ರಿಯಾಗಿರುವ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಕರ್ನಾಟಕದಲ್ಲಿನ ಜಲಾಶಯಗಳ ಸ್ಥಿತಿಗತಿಯನ್ನು ಕಣ್ಣಾರೆ ಕಂಡು ನಿಜ ಪರಿಸ್ಥಿತಿಯನ್ನು ಅರಿತುಕೊಳ್ಳುವ ಸಲುವಾಗಿ ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರನ್ನು ಅಹ್ವಾನಿಸಿದ್ದಾರೆ.ತಮಿಳು ನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ರಜನೀಕಾಂತ್‌ ಒತ್ತಾಯಿಸಿರುವುದಕ್ಕೆ ಪ್ರತಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿಕೆ ಕರ್ನಾಟಕಕ್ಕೆ ಒಮ್ಮೆ ಭೇಟಿ ಕೊಡಿ. ಆಗ ನಿಮಗೆ ಇಲ್ಲಿನ ಸಂಪೂರ್ಣ ಚಿತ್ರಣ ಸಿಗಲಿದೆ ಎಂದಿದ್ದಾರೆ.
'Rambo 2' ಸಿನಿಮಾ ಕಾಶೀನಾಥ್ ಅವರಿಗೆ ಸಮರ್ಪಣೆ

'Rambo 2' ಸಿನಿಮಾ ಕಾಶೀನಾಥ್ ಅವರಿಗೆ ಸಮರ್ಪಣೆ

ಶರಣ್ ನಟಿಸಿರುವ 'Rambo 2' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಈ ಸಿನಿಮಾ ನೋಡುಗರಿಗೆ ಸಖತ್ ಖುಷಿ ಕೊಡುತ್ತದೆ. ಆದರೆ ಅದಕ್ಕೂ ಮಿಗಿಲಾಗಿ ಸಿನಿಮಾದ ಟೈಟಲ್ ಕಾರ್ಡ್ ನಲ್ಲಿಯೇ ಚಿತ್ರತಂಡ ಪ್ರೇಕ್ಷಕರ ಮುಖದಲ್ಲಿ ಸಂತಸವನ್ನು ಮೂಡಿಸುತ್ತದೆ. ಕಾರಣ 'Rambo 2' ಸಿನಿಮಾವನ್ನು ನಟ, ನಿರ್ದೇಶಕ ಕಾಶೀನಾಥ್ ಅವರಿಗೆ ಸಮರ್ಪಣೆ ಮಾಡಲಾಗಿದೆ. 'Rambo 2' ಚಿತ್ರವನ್ನು ಕಾಶೀನಾಥ್ ಅವರಿಗೆ ಡೆಡಿಕೇಟ್ ಮಾಡಲಾಗಿದೆ. ಚಿತ್ರದ ಪ್ರಾರಂಭದಲ್ಲಿ ಬರುವ ಟೈಟಲ್ ಕಾರ್ಡ್ ನಲ್ಲಿ ಕಾಶೀನಾಥ್ ಕ್ಯಾಮರಾ ಹಿಡಿದ ಫೋಟೋವೊಂದು ತೆರೆ ಮೇಲೆ ಮೂಡುತ್ತದೆ. ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಇದನ್ನು ನೋಡಿಯೇ ಖುಷಿ ಆಗುತ್ತದೆ.
ಕುಮಾರಸ್ವಾಮಿ, ಮಾಯಾವತಿ ಭೇಟಿ, ಸರ್ಕಾರದ ಕುರಿತು ಚರ್ಚೆ

ಕುಮಾರಸ್ವಾಮಿ, ಮಾಯಾವತಿ ಭೇಟಿ, ಸರ್ಕಾರದ ಕುರಿತು ಚರ್ಚೆ

ಕರ್ನಾಟಕದ ಭಾವಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ದೆಹಲಿಯಲ್ಲಿ ಇಂದು ಭೇಟಿ ಆದರು. ಜೆಡಿಎಸ್ ಪಕ್ಷವು ಬಿಎಸ್‌ಪಿ ಜೊತೆ ಚುನಾವಣಾ ಪೂರ್ವವೇ ಮೈತ್ರಿ ಮಾಡಿಕೊಂಡಿತ್ತು, ಮಾಯಾವತಿ ಅವರು ಚುನಾವಣೆ ಸಮಯದಲ್ಲಿ ಮೂರು ಬಾರಿ ರಾಜ್ಯಕ್ಕೆ ಬಂದು ಜೆಡಿಎಸ್‌ ಪರವಾಗಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಮಾಯಾವತಿ ಅವರನ್ನು ಭೇಟಿ ಆದ ಕುಮಾರಸ್ವಾಮಿ ಅವರು, ಸಚಿವ ಸಂಪುಟ ರಚನೆ, ಗೆದ್ದ ಏಕೈಕ ಬಿಎಸ್‌ಪಿ ಶಾಸಕನಿಗೆ ಕೊಡತಕ್ಕ ಸಚಿವ ಸ್ಥಾನ, ಸರ್ಕಾರ ರಚನೆ ಮತ್ತು ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.