Short News

ಗಣಿ ಧಣಿ ಜನಾರ್ದನ ರೆಡ್ಡಿ ಮಾವನ ಮನೆಯಲ್ಲಿ ಕಳ್ಳತನ!

ಗಣಿ ಧಣಿ ಜನಾರ್ದನ ರೆಡ್ಡಿ ಮಾವನ ಮನೆಯಲ್ಲಿ ಕಳ್ಳತನ!

ಗಣಿಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮಾವ (ಪತ್ನಿ ಲಕ್ಷ್ಮಿ ಅರುಣಾ ತಂದೆ) ಪರಮೇಶ್ವರ ರೆಡ್ಡಿ ಮನೆಯಲ್ಲಿ ಕಳವು ಪ್ರಕರಣ ನಡೆದಿದೆ. ಆಂಧ್ರದ ನಂದ್ಯಾಲಕ್ಕೆ ಶಿವರಾತ್ರಿ ಆಚರಣೆಗೆ ಹೋಗಿದ್ದಾಗ ಇನ್ನಾರೆಡ್ಡಿ ಕಾಲೊನಿಯಲ್ಲಿ ಇರುವ ಮನೆಯಲ್ಲಿ ಮಂಗಳವಾರ ರಾತ್ರಿ ಅಥವಾ ಬುಧವಾರ ನಸುಕಿನಲ್ಲಿ ಕಳ್ಳತನವಾಗಿದೆ. 

ಆದರೆ, ಮನೆಯಲ್ಲಿ ಬಂಗಾರ ಮತ್ತು ನಗದು ಹಣವಿರಲಿಲ್ಲ ಎಂದು ಕುಟುಂಬದ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಕಳ್ಳತನ ನಡೆದ ಮಾಹಿತಿ ಕೌಲ್ ಬಜಾರ್ ಪೊಲೀಸ್ ಠಾಣೆಗೆ ತಲುಪಿದೆ.  

ಕೋತಿಯನ್ನು ಗಲ್ಲಿಗೇರಿಸಿದ ರೈತ, ಯಾಕೆ ಗೊತ್ತಾ ?

ಕೋತಿಯನ್ನು ಗಲ್ಲಿಗೇರಿಸಿದ ರೈತ, ಯಾಕೆ ಗೊತ್ತಾ ?

ಕೋತಿಯ ಮೇಲೆ ಕೊಪಗೊಂಡ ರೈತನೊಬ್ಬ ಕೋತಿಯನ್ನು ಗಲ್ಲಿಗೇರಿಸಿರುವ ಘಟನೆ ಮಧ್ಯ ಪ್ರದೇಶದ ಬಿತುಲ್ ಜಿಲ್ಲೆಯಲ್ಲಿ ನಡೆದಿದೆ. ಹೌದು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕೋತಿ ಹಾಳು ಮಾಡಿತು ಎಂದು ರೊಚ್ಚಿಗೆದ್ದ ರೈತ ಕೋತಿಗೆ ನೇಣು ಬಿಗಿದಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಬಿರ್ಜು ಓಜಾ (38) ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆತುಲ್‌ನ ಶಾಹ್ಪುರ ಪ್ರದೇಶದಲ್ಲಿ ಎರಡು ವಾರಗಳ ಹಿಂದೆ ಗಲ್ಲಿಗೇರಿಸಿದ ಸ್ಥಿತಿಯಲ್ಲಿ ಕೋತಿಯೊಂದರ ಶವ ಪತ್ತೆಯಾಗಿತ್ತು. ನಂತರ ಈ ಪ್ರಕರಣ ಬಯಲಿಗೆ ಬಂದಿದೆ.
83ರ ವೃದ್ಧ - 30ರ ಯುವತಿ, ರಾಜಸ್ತಾನದಲ್ಲಿ ನಡೆಯಿತು ಅದ್ಧೂರಿ ಮದುವೆ!

83ರ ವೃದ್ಧ - 30ರ ಯುವತಿ, ರಾಜಸ್ತಾನದಲ್ಲಿ ನಡೆಯಿತು ಅದ್ಧೂರಿ ಮದುವೆ!

ರಾಜಸ್ತಾನದ ಕರೌಲಿಯಲ್ಲಿ 83 ವರ್ಷದ ವೃದ್ಧನ ಮದುವೆ 30ರ ಯುವತಿ ಜೊತೆ ಮಾಡಲಾಗಿದೆ. ವಿಶೇಷವೆಂದರೆ ಈ ಮದುವೆ ವೃದ್ದನ ಮೊದಲ ಪತ್ನಿ ಎದುರಲ್ಲೇ ನಡೆದಿದೆ. ಇಲ್ಲಿನ ಸೌಮರದಾ ನಿವಾಸಿ ಸುಖಾರಾಮ್ ತನ್ನ 83ನೇ ವಯಸ್ಸಿನಲ್ಲಿ ತನಗಿಂತ 53 ವರ್ಷ ಚಿಕ್ಕ ಹುಡುಗಿಯನ್ನು ಮದುವೆಯಾಗಿದ್ದಾನೆ. ಗ್ರಾಮದ ಮುಖ್ಯಸ್ಥರು ಸೇರಿದತೆ ಸುಖಾರಾಮ್ ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳು ಮೆರವಣಿಗೆ ವೇಳೆ ಡಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಸುಖಾರಾಮ್ ಮದುವೆಯಾದ ಯುವತಿ ಮಾನಸಿಕ ಅಸ್ವಸ್ಥೆ ಎನ್ನಲಾಗಿದೆ. ಈತ ಶ್ರೀಮಂತನಾಗಿದ್ದು, ದೆಹಲಿಯಲ್ಲೂ ಆಸ್ತಿಯಿದೆಯಂತೆ. ಬಡ ಹುಡುಗಿಗೆ ಬಾಳು ನೀಡಲು ಸುಖಾರಾಮ್ ಈ ಮದುವೆಯಾಗಿದ್ದಾನೆನ್ನಲಾಗಿದೆ.
ಟೆನಿಸ್ ಟೂರ್ನಿ : ವೃತ್ತಿ ಜೀವನದ 97ನೇ ಪ್ರಶಸ್ತಿ ಗೆದ್ದ ರೋಜರ್ ಫೆಡರರ್‌

ಟೆನಿಸ್ ಟೂರ್ನಿ : ವೃತ್ತಿ ಜೀವನದ 97ನೇ ಪ್ರಶಸ್ತಿ ಗೆದ್ದ ರೋಜರ್ ಫೆಡರರ್‌

ಸ್ವಿಟ್ಜರ್ಲೆಂಡ್‌ನ ಆಟಗಾರ ರೋಜರ್ ಫೆಡರರ್‌ ರವರು ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಹಾಗೇ ಭಾನುವಾರ ರಾಟರ್‌ಡ್ಯಾಮ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ತಮ್ಮ ಇಡೀ ವೃತ್ತಿ ಜೀವನದಲ್ಲಿ ಗೆದ್ದ 97ನೇ ಪ್ರಶಸ್ತಿ ಇದಾಗಿದೆ. ಬೆಲ್ಜಿಯಂನ ಗ್ರೆಗೊರ್‌ ದಿಮಿತ್ರೊವ್ ರವರನ್ನು 6-2, 6-2ರ ಅಂತರದಲ್ಲಿ ಫೈನಲ್ ಪಂದ್ಯದಲ್ಲಿ 36 ವರ್ಷದ ಆಟಗಾರ ಫೆಡರರ್‌ ಸೋಲುಣಿಸಿದ್ದಾರೆ.