Short News

ಈ ರೀತಿ ಪತ್ರ ಬರೆಯುವುದರಲ್ಲಿ ಪ್ರಯೋಜನ ಇಲ್ಲ: ರೂಪಾ ಡಿ ಮೌದ್ಗಿಲ್

ಈ ರೀತಿ ಪತ್ರ ಬರೆಯುವುದರಲ್ಲಿ ಪ್ರಯೋಜನ ಇಲ್ಲ: ರೂಪಾ ಡಿ ಮೌದ್ಗಿಲ್

ಐಪಿಎಸ್ ಅಧಿಕಾರಿಗಳು ಸರಕಾರಕ್ಕೆ ಪತ್ರ ಬರೆದ ಬಗ್ಗೆ ಅಂದರೆ, ಐಪಿಎಸ್ ಅಸೋಸಿಯೇಷನ್ ಅಂತ ಬರೆದಿದ್ದಾರೆ ಅಧ್ಯಕ್ಷರು, ಅದರಲ್ಲಿರುವ ವಿಷಯಗಳ ಬಗ್ಗೆ ಯಾವುದೇ ಸುಳಿವಿಲ್ಲ. ಚರ್ಚೆ ಮಾಡಿ ನಿರ್ಧಾರಕ್ಕೆ ಬಂದಿದ್ದಲ್ಲ. ಇಂಥ ಪತ್ರ ಬರೆದಿದ್ದಾರೆ ಅಂತಲೂ ಗೊತ್ತಿರಲಿಲ್ಲ" ಎಂದು ಡಿಐಜಿ ರೂಪಾ ಡಿ ಮೌದ್ಗಿಲ್ ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಆರ್.ಪಿ.ಶರ್ಮಾ ರಾಜ್ಯ ಸರಕಾರಕ್ಕೆ ಪತ್ರವೊಂದನ್ನು ಬರೆದಿದ್ದರು. ಆ ನಂತರದ ಇತ್ತೀಚೆಗಿನ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯ ಪಡೆಯಲು ಒನ್ ಇಂಡಿಯಾ ಕನ್ನಡ ಅವರನ್ನು ಸಂಪರ್ಕಿಸಿದಾಗ, "ಪತ್ರಿಕೆಗಳಲ್ಲಿ ಈ ಬಗ್ಗೆ ಬಂದಾಗಲೇ ಗೊತ್ತಾಗಿದ್ದು" ಎಂದಿದ್ದಾರೆ.
ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಇಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ ಪ್ಲಸ್ ಟ್ರಿಮ್

ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಇಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ ಪ್ಲಸ್ ಟ್ರಿಮ್

ಕಳೆದ ನವೆಂಬರ್‌ನಲ್ಲಿ ಭರ್ಜರಿ ಬಿಡುಗಡೆಯಾಗಿದ್ದ ಫೋರ್ಡ್ ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಎಸ್‌ಯುವಿ ಮಾದರಿಗಳಲ್ಲಿ ಇದೀಗ ಹೊಸ ಗೇರ್‌ಬಾಕ್ಸ್ ಆಯ್ಕೆಯೊಂದನ್ನು ಒದಗಿಸಲಾಗಿದ್ದು, ಪೆಟ್ರೋಲ್ ಎಂಜಿನ್ ಪ್ರೇರಿತ ಟೈಟಾನಿಯಂ ಪ್ಲಸ್ ಟ್ರಿಮ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಪೆಟ್ರೋಲ್ ಎಂಜಿನ್ ಪ್ರೇರಿತ ಟೈಟಾನಿಯಂ ಪ್ಲಸ್ ಟ್ರಿಮ್ ಆವೃತ್ತಿಗಳು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿದ ಮಾದರಿಗಳು ಲಭ್ಯವಿದ್ದವು. ಹೊಸ ಕಾರುಗಳ ಬಿಡುಗಡೆ ನಂತರ ಮ್ಯಾನುವಲ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಬಂದ್ದರಿಂದ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದೆ.
ನಿಮ್ಮಲ್ಲಿ ಫಾಲೋಅಪ್ ಪ್ರಶ್ನೆಗಳಿಗೆ ಉತ್ತರ ನೀಡಲು ಬರುತ್ತಿದೆ ಅಮೆಜಾನ್ ಅಲೆಕ್ಸಾ.!

ನಿಮ್ಮಲ್ಲಿ ಫಾಲೋಅಪ್ ಪ್ರಶ್ನೆಗಳಿಗೆ ಉತ್ತರ ನೀಡಲು ಬರುತ್ತಿದೆ ಅಮೆಜಾನ್ ಅಲೆಕ್ಸಾ.!

ಆನ್ಲೈನ್ ಶಾಪಿಂಗ್ ನ ದೈತ್ಯ ಅಮೆಜಾನ್ ತನ್ನ ಗ್ರಾಹಕರ ಯಾವುದೇ ರೀತಿಯ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲ ಮತ್ತು ಎಲ್ಲಾ ಗೊಂದಲಗಳನ್ನು ನಿವಾರಿಸಬಲ್ಲ ಅಮೆಜಾನ್ ಅಲೆಕ್ಷಾ ಸಾಧನವನ್ನು ಪರಿಚಯಿಸುತ್ತಿದೆ. ಅಮೆಜಾನ್ ಲ್ಯಾಬ್ 126 ವಿಭಾಗ ಅಭಿವೃದ್ಧಿಪಡಿಸಿರುವ ವೈಯಕ್ತಿಕ ಸಲಹಾ ಸಾಧನ ಅಲೆಕ್ಷಾ ಅಪ್ಲಿಕೇಶನ್ ನನ್ನು ಪರೀಕ್ಷಾರ್ಥವಾಗಿ ಅಮೆಜಾನ್ ಎಕೋ ಮತ್ತು ಅಮೆಜಾನ್ ಎಕೋ ಡಾಟ್ ಸಾಧನಗಳಲ್ಲಿ ಬಳಸಲಾಗಿದೆ. ಬೀಬೊಮ್ ಸಂಸ್ಥೆಯ ವರದಿಯ ಪ್ರಕಾರ, ಬಳಕೆದಾರ ಯಾವುದೇ ಆಜ್ಞೆ ನೀಡದೆಯೂ ಅಮೆಜಾನ್ ನ ಅಲೆಕ್ಷಾ ಸಾಧನ ಬಳಕೆದಾರನಿಗೆ ಮುಂದಿನ ಟಾಸ್ಕ್ ನ ಕುರಿತು ಸಲಹೆ ನೀಡಲಿದೆ.
ಮೊಬೈಲ್ ಹ್ಯಾಂಗ್ ಆಗುತ್ತಿದ್ದರೆ ರೀಸ್ಟಾರ್ಟ್ ಪರಿಹಾರ ಹೀಗಿರಲಿ.!!

ಮೊಬೈಲ್ ಹ್ಯಾಂಗ್ ಆಗುತ್ತಿದ್ದರೆ ರೀಸ್ಟಾರ್ಟ್ ಪರಿಹಾರ ಹೀಗಿರಲಿ.!!

ಕಂಪ್ಯೂಟರ್, ಮೊಬೈಲ್‌, ಟ್ಯಾಬ್‌ ಯಾವುದೇ ಇರಲಿ ಎಲ್ಲಾ ಗ್ಯಾಜೆಟ್‌ಗಳು ಕೆಲಸ ಮಾಡುವಾಗ ಹ್ಯಾಂಗ್‌ ಆಗುವುದು ಸಹಜ.! ಹೀಗೆ ಯಾವುದೇ ಡಿವೈಸ್ ಹ್ಯಾಂಗ್ ಆದರೆ ನಮಗೆ ಮೊದಲು ನೆನಪಾಗುವ ರಿಪೇರಿ ಎಂದರೆ ಅದು ಮೊಬೈಲ್ ಸ್ವಿಚ್ ಆಫ್ ಮಾಡಿ ಸ್ವಿಚ್ ಮಾಡುವುದು. ಇದನ್ನೇ ತಂತ್ರಜ್ಞಾನ ಪರಿಭಾಷೆಯಲ್ಲಿ ರೀಸ್ಟಾರ್ಟ್ ಪರಿಹಾರ.! ಮನುಷ್ಯ ಮಲಗಿ ಎದ್ದು ಫ್ರೆಶ್ ಆಗಿ ಕಾರ್ಯನಿರ್ವಹಿಸುವಂತೆ ಸ್ಮಾರ್ಟ್‌ಫೋನ್‌ಗಳು ಕೂಡ ಸ್ವಿಚ್ ಆಫ್ ಮಾಡಿ ಆನ್ ಮಾಡಿದ ನಂತರ ಉತ್ತಮ ಕಾರ್ಯನೀಡುವಂತೆ ಮಾಡುತ್ತದೆ ಈ ರೀಸ್ಟಾರ್ಟ್ ಆಯ್ಕೆ.!!