Short News

ಉತ್ತರ ಪ್ರದೇಶದಲ್ಲಿ ಭೀಕರ ಚಂಡಮಾರುತ: 10 ಜನ ಬಲಿ

ಉತ್ತರ ಪ್ರದೇಶದಲ್ಲಿ ಭೀಕರ ಚಂಡಮಾರುತ: 10 ಜನ ಬಲಿ

ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡ ಭೀಕರ ಚಂಡಮಾರುತಕ್ಕೆ 10 ಜನ ಬಲಿಯಾಗಿದ್ದಾರೆ. ಬುಧವಾರ ಚಂಡಮಾರುತದ ಸಮೇತ ಸುರಿದ ಮಳೆಯಿಂದಾಗಿ ಗೊಂಡಾ ಪ್ರದೇಶದಲ್ಲಿ ಮೂವರು, ಫಾಜಿಯಾಬಾದ್ ನಲ್ಲಿ ಓರ್ವ ವ್ಯಕ್ತಿ ಮತ್ತು ಸಿತಾಪುರದಲ್ಲಿ 6 ಜನ ಮೃತರಾಗಿದ್ದು, 20 ಜನ ಗಾಯಗೊಂಡಿದ್ದಾರೆ. ಲಕ್ನೋದಲ್ಲಿರುವ ಹವಾಮಾನ ಇಲಾಖೆ ಮೊದಲೇ ಚಂಡಮಾರುತದ ಮುನ್ಸೂಚನೆ ನೀಡಿತ್ತಾದರೂ ಹಲವೆಡೆ ಅನಾಹುತವನ್ನು ತಪ್ಪಿಸುವುದಕ್ಕೆ ಸಾಧ್ಯವಾಗದೆ, ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ. ಜೂನ್ 2 ರಂದು ಉತ್ತರ ಪ್ರದೇಶದ ವಿವಿಧೆಡೆ ಸಂಭವಿಸಿದ ಚಂಡಮಾರುತದಿಂದಾಗಿ 15 ಜನ ಮೃತರಾಗಿದ್ದರು.  
480 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಬಿಇಎಲ್

480 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಬಿಇಎಲ್

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ 480 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. 23 ಜೂನ್ 2018ರೊಳಗೆ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಬಿಇಎಲ್ 480 ಕಾಂಟ್ರಾಕ್ಟ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ವೇತನ ಶ್ರೇಣಿ 23000 ರೂ.ಗಳು. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿ.ಟೆಕ್ ಅನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪೂರ್ಣಗೊಳಿಸಿರಬೇಕು. ಸಾಮಾನ್ಯ ಮತ್ತು ಓಬಿಸಿ ವರ್ಗದ ವಿದ್ಯಾರ್ಥಿಗಳಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.  
ಗರ್ಭಾವಸ್ಥೆಯಲ್ಲಿ ಕೆಲವೊಮ್ಮೆ ಗೊತ್ತಿಲ್ಲದೇ ಗರ್ಭಪಾತ ಆಗಿಬಿಡಬಹುದು!

ಗರ್ಭಾವಸ್ಥೆಯಲ್ಲಿ ಕೆಲವೊಮ್ಮೆ ಗೊತ್ತಿಲ್ಲದೇ ಗರ್ಭಪಾತ ಆಗಿಬಿಡಬಹುದು!

ಒಂದು ಮಾಹಿತಿಯ ಪ್ರಕಾರ ಹೇಳುವುದಾದರೆ ಕೆಲವು ಗರ್ಭಪಾತಗಳು ಮಹಿಳೆಯರಿಗೆ ತಿಳಿಯದಂತೆಯೇ ನಡೆದು ಹೋಗುತ್ತದೆ.. ಕೆಲವರು ಅವರ ಪೀರೇಡ್ಸ್ ತಡವಾಗಿರುವುದನ್ನು ಗಮನಿಸದೇ ಇದ್ದಿರಬಹುದು. ನಿಜವಾಗಿಯೂ ಆ ಪೀರೇಡ್ಸ್ ತಡವಾಗಿರುವುದೇ ಗರ್ಭಪಾತವೂ ಆಗಿರಬಹುದು. ಪ್ರಮುಖವಾಗಿ ಯಾರು ಗರ್ಭ ಧರಿಸುವ ಯೋಜನೆಯಲ್ಲಿ ಇರುವುದಿಲ್ಲವೋ, ಮತ್ತು ಗರ್ಭವತಿಯಾಗುತ್ತಾರೋ, ಅಂತವರು ಪ್ರಮುಖವಾಗಿ ಹೀಗೆ ಆಗಿರುವುದರ ಪರಿಕಲ್ಪನೆಯಲ್ಲೂ ಇರುವುದಿಲ್ಲ ಮತ್ತು ಗರ್ಭಧಾರಣೆಯ ಟೆಸ್ಟ್ ಕೈಗೊಳ್ಳುವವರೆಗೂ ಅವರಿಗೆ ಇದರ ಅಂದಾಜು ಇರುವುದಿಲ್ಲ..

ರಾಹುಲ್ ಗಾಂಧಿ ಹುಟ್ಟುಹಬ್ಬ , ದೇಶದಾದ್ಯಂತ ಕೈ ನಾಯಕರಿಂದ ಶುಭ ಹಾರೈಕೆ

ರಾಹುಲ್ ಗಾಂಧಿ ಹುಟ್ಟುಹಬ್ಬ , ದೇಶದಾದ್ಯಂತ ಕೈ ನಾಯಕರಿಂದ ಶುಭ ಹಾರೈಕೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು 48ನೇ ಜನ್ಮದಿನಾಚರಣೆಯನ್ನು ಮಂಗಳವಾರ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ದೌಡಾಯಿಸಿ ಶುಭ ಕೋರುತ್ತಿದ್ದಾರೆ. ಮಾತ್ರವಲ್ಲ ಪ್ರಧಾನಿ ಮೋದಿ ಸೇರಿದಂತೆ ದೇಶದಾದ್ಯಂತ ನಾನಾ ಗಣ್ಯರು ಶುಭ ಹಾರೈಸಿದ್ದಾರೆ. ಇದರ ಜೊತೆಗೆ ರಾಹುಲ್ ಗಾಂಧಿಯವರ ಹುಟ್ಟಹಬ್ಬವನ್ನು ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಜೂನ್.19, 1970ರಲ್ಲಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ದಂಪತಿಯ ಪುತ್ರರಾಗಿ ಜನಿಸಿದ ಇವರು. ಬ್ಯಾಚುಲರ್ ಆಗಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more